This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಹೇಳಬೇಕು. ತತ್ವಗಳ ಹೋಮದಲ್ಲಾದರೋ ಪರಾಯ ಪುರುಷಾತ್ಮನೇ ಸ್ವಾಹಾ,
ಪರಾಯ ಅವ್ಯಕ್ತಾತ್ಮನೇ ಸ್ವಾಹಾ ಇತ್ಯಾದಿಯಾಗಿ ಹೇಳಬೇಕು.
 
[^140
 
]
 
ತತ್ವನ್ಯಾಸವಿಧಗಳು
 

 
ತ್ರಿ
ಚತುಃ ಷಟ್ ದಶಾವೃತ್ತಿರೇತೇಷಾಂ ತು ಹುತಾದಿಕೇ।

ನ್ಯಾಸೋಽಂಗುಲೀಷೂರುಬಾಹುಮಧ್ಯೇಷು ವ್ಯತ್ಯಯುತ್ಕ್ರಮೇ ಸ್ಮೃತಃ ।

ಕ್ರಮೇ ವಿಪರ್ಯಯೇಣಾತ್ರ ಶಾಕ್ತ್ಯಾದಿತ್ವಂ ಪ್ರಕೀರ್ತಿತಮ್ ॥153 ೧೫೩
 
.
 

 
ಅರ್ಥ - ಈ ತತ್ವಮಂತ್ರಗಳ ಹೋಮ, ಜಪ, ನ್ಯಾಸಾದಿಗಳಲ್ಲಿ ಮೂರು,
ನಾಲ್ಕು, ಆರು, ಹತ್ತು ಬಾರಿ ತತ್ವಮಂತ್ರಗಳನ್ನು ಆವೃತ್ತಿ ಮಾಡಬೇಕು. ಇನ್ನು ತತ್ವಗಳ
ಸ್ಥಾನಗಳು ಹೀಗಿವೆ. ಇಪ್ಪತ್ತು ಬೆರಳು ಗಳು, ಎರಡು ತೊಡೆಗಳು, ಎರಡು
ತೋಳುಗಳು, ಹೃದಯ ಹೀಗೆ ಕ್ರಮವಾಗಿ ಸಂಹಾರಕ್ರಮದಲ್ಲಿ ಅಂಗನ್ಯಾಸಗಳು.
ಸೃಷ್ಟಿಕ್ರಮ- ನ್ಯಾಸದಲ್ಲಿ ಹೃದಯದಿಂದ ಆರಂಭಿಸಿ ಎಡಗಾಲಿನ ಕಿರುಬೆರಳಿನ ವರೆಗೂ
ನ್ಯಾಸ ಮಾಡಬೇಕು.
 
[^2]
 
[^
1]. ವಿಶೇಷಾಂಶ -
 
'ಪರಾಯ ಶಕ್ವಾತತ್ಯಾತ್ಮನೇ ಸ್ವಾಹಾ' । ಪರಾಯ ಪ್ರತಿಷ್ಠಾತ್ಮನೇ ಸ್ವಾಹಾ' ಇತ್ಯಾದಿಯಾಗಿ ತತ್ವನ್ಯಾಸ
ಸ್ವಾಹಾಕಾರ ಹೇಳಬೇಕು. 'ಪರಯಾ ಶಕ್ತಾತತ್ಯಾತ್ಮನೇ ಲಕ್ಷ್ಮೀನಾರಾಯಣಾಭ್ಯಾಂ ಸ್ವಾಹಾ'
ಇತ್ಯಾದಿಯಾಗಿ ಸ್ವಾಹಾಕಾರ ವಿಹಿತವಲ್ಲ. 'ಲಕ್ಷ್ಮೀನಾರಾಯಣಾಭ್ಯಾಂ' ಇತ್ಯಾದಿಯಾಗಿ ಪ್ರತಿಪಾದ್ಯ
ದೇವತಾ ಸ್ಮರಣೆಗಾಗಿ ಮಾತ್ರ.
 

ತತ್ವದೇವತೆಗಳ ಮಂತ್ರದಿಂದ ಆಯಾಯ ಅಂಗಗಳನ್ನು ಮುಟ್ಟಿದಾಗ ಮಂತ್ರದಿಂದ ಪೂತ
ದೇಹವುಳ್ಳವನಾಗುವನೇ ಹೊರತು ಆಯಾಯ ಅಂಗಗಳಲ್ಲಿ ದೇವತೆಗಳಿದ್ದಾರೆ ಎಂದು

ತಾತ್ಪರ್ಯವಲ್ಲ. 'ನ ತು ತದಂಗೇ ತೇ ದೇವಾ ಆಶ್ರಿತಾ ಇತಿ'.
 

[^
2]. ವಿಶೇಷಾಂಶ -
 
ಮಂತ್ರವನ್ನು ಉಚ್ಚಾರಣೆ ಮಾಡಿ ಆಯಾಯ ದೇವತೆಗಳನ್ನು ನಿರ್ದಿಷ್ಟ ಅವಯವಗಳಲ್ಲಿ

ಧ್ಯಾನಿಸುವುದೇ ನ್ಯಾಸ.
 

ತತ್ತತ್ ದೇವತಾನಾಂ ತತ್ತದಂಗೇಷು ಧ್ಯಾನಮೇವ ನ್ಯಾಸಃ - ತತ್ವಕಣಿಕಾ
 

ನ್ಯಾಸದಿಂದ ಭಗವಂತನ ಸಾನ್ನಿಧ್ಯ ಹೆಚ್ಚುತ್ತದೆ. ದೈಹಿಕವಾಗಿ ಪಾವಿತ್ರ್ಯತೆಯೂ ಲಭಿಸುತ್ತದೆ.

ತತ್ವನ್ಯಾಸೋಽಯಮಚಿರಾತ್ ಕೃಷ್ಣ ಸಾನ್ನಿಧ್ಯಕಾರಕಃ ।
 

ಯಃ ಕುರ್ಯಾತ್ ತತ್ವವಿನ್ಯಾಸಃ ಸ ಪೂತೋ ಭವತಿ ಧ್ರುವಮ್ II - ಪಂಚರಾತ್ರ,
 
.