This page has been fully proofread once and needs a second look.

ಅರ್ಥ - ಹಿಂದೆ ಹೇಳಿದ ಅಷ್ಟಾಕ್ಷರವುಳ್ಳ ಓಂಕಾರವು; ವಿಶ್ವ ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ವವೆಂಬ ನನ್ನದೇ ಆದ ಎಂಟು ರೂಪಗಳನ್ನು ಪ್ರತಿಪಾದಿಸುತ್ತದೆ.
 
ವ.ಟೀಕಾ - ಅಷ್ಟಾಕ್ಷರಾಣಾಂ ದೇವತಾ ಆಹ - ಸ ಇತಿ ॥ ಸೋಽಯಮಷ್ಟಾಕ್ಷರವಾನ್ ಪ್ರಣವಃ । ವಿಶ್ವ-ತೈಜಸ-ಪ್ರಾಜ್ಞ-ತುರೀಯಾತ್ಮಾಂತರಾತ್ಮಪರಮಾತ್ಮಜ್ಞಾನಾತ್ಮಸಂಜ್ಞಕಾನಾಮ್ ಅಷ್ಟಾಕ್ಷರರೂಪಾಣಾಂ ಕ್ರಮೇಣ ವಾಚಕ ಇತ್ಯರ್ಥಃ ॥
 
ಟೀಕಾರ್ಥ- ಹಿಂದೆ ಹೇಳಿದ ಅಕಾರಾದಿ ಎಂಟು ಅಕ್ಷರಗಳಿಗೂ ಸಂಬಂಧಪಟ್ಟ ಭಗವದ್ರೂಪಗಳನ್ನು ಹೇಳುತ್ತಿದ್ದಾರೆ- 'ಸ' ಎಂಬ ಶ್ಲೋಕದಿಂದ, ಸಃ ಎಂದರೆ ಹಿಂದೆ ಹೇಳಿದ ಎಂಟಕ್ಷರವುಳ್ಳ ಪ್ರಣವವು ಎಂದರ್ಥ. ಅಕಾರಾದಿ ಎಂಟು ಅಕ್ಷರಗಳಿಗೆ ಕ್ರಮವಾಗಿ
ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ ಪರಮಾತ್ಮ, ಜ್ಞಾನಾತ್ಮ ಎಂಬ ಎಂಟುರೂಪಗಳು ಪ್ರತಿಪಾದ್ಯವಾಗಿವೆ.
 
ವಿಶೇಷಾಂಶ - ಯತಿಪ್ರಣವಕಲ್ಪದಲ್ಲಿ ಕೃಷ್ಣ, ನೃಸಿಂಹ, ವರಾಹ, ವಿಷ್ಣು, ಪರಂಜ್ಯೋತಿ, ಪರಂಬ್ರಹ್ಮ, ವಾಸುದೇವ ಎಂದು ಭಗವಂತನ ಬೇರೆ ರೂಪಗಳನ್ನು ಅಕಾರಾದಿಗಳಿಂದ ಪ್ರತಿಪಾದ್ಯ- ವೆನ್ನಲಾಗಿದೆ. ಇದನ್ನು ಶ್ರೀಮದಾಚಾರ್ಯರು 'ಮದ್ರೂಪಾಣಾಂ ಚ ವಾಚಕಃ' ಎಂಬಲ್ಲಿರುವ 'ಚ'ಕಾರದಿಂದ ಹೇಳಿದ್ದಾರೆ.
 
ತತ್ವಸಾರದಲ್ಲಿ ಸೃಷ್ಟಿಯನ್ನು ಮಾಡುವ ಬ್ರಹ್ಮಾಂತರ್ಯಾಮಿ- ಯಾದ ರೂಪ, ಪಾಲನೆ ಮಾಡುವ ವಿಷ್ಣುರೂಪ, ಸಂಹಾರ ಮಾಡುವ ಶಿವಾಂತರ್ಯಾಮಿರೂಪ, ಅನಿರುದ್ಧಾದಿ ಪಂಚ ರೂಪಗಳು; ಇವು ಸೇರಿ ಒಟ್ಟು ಎಂಟುರೂಪಗಳು ಎಂದು ಹೇಳಿದೆ.
 
ಐವತ್ತು ಮಾತೃಕಾರೂಪಗಳು
 
ತದ್ರೂಪಭೇದಾಃ ಪಂಚಾಶನ್ಮೂರ್ತಯೋ ಮಮ ಚಾಪರಾಃ ।
ಪಂಚಾಶದ್ವರ್ಣವಾಚ್ಯಾಸ್ತಾ ವರ್ಣಾಸ್ತಾರಾರ್ಣಭೇದಿತಾಃ ॥ ೫ ॥
 
ಅರ್ಥ - ಈ ವಿಶ್ವಾದಿಎಂಟುರೂಪಗಳಿಂದ ವ್ಯಕ್ತಗಳಾದ, ವಿಶ್ವಾದಿ ರೂಪಗಳಿಂದ ಬೇರೆಯಾದ ನನ್ನ ಐವತ್ತು ರೂಪಗಳಿವೆ. ಓಂಕಾರದ ಅಷ್ಟಾಕ್ಷರಗಳಿಂದ ಅಭಿವ್ಯಕ್ತಗಳಾದ ಅಕಾರಾದಿ-ಳಕಾರದವರೆಗಿನ ಐವತ್ತು ವರ್ಣಗಳು ಈ ಐವತ್ತು ರೂಪಗಳನ್ನು
ಪ್ರತಿಪಾದಿಸುತ್ತವೆ.
 
ವ.ಟೀ. - ಮಾತೃಕಾದೇವತಾ ಆಹ - ತದ್ರೂಪಭೇದಾ ಇತ್ಯಾದಿ ॥ ಪಂಚಾಶದಕ್ಷರಾಣಾಂ ಮೂರ್ತಯಃ, ಅಥ ನಾರಾಯಣಾಷ್ಟಾಕ್ಷರ ಮೂರ್ತಯಶ್ಚ ತದ್ರೂಪ-