This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 1
 

 
ಅರ್ಥ - ಹಿಂದೆ ಹೇಳಿದ ಅಷ್ಟಾಕ್ಷರವುಳ್ಳ ಓಂಕಾರವು; ವಿಶ್ವ ತೈಜಸ, ಪ್ರಾಜ್ಞ,
ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ವವೆಂಬ ನನ್ನದೇ ಆದ ಎಂಟು
ರೂಪಗಳನ್ನು ಪ್ರತಿಪಾದಿಸುತ್ತದೆ.
 
4
 
ವಟೀಕಾ - ಅಷ್ಟಾಕ್ಷರಾಣಾಂ ದೇವತಾ ಆಹ - ಸ ಇತಿ ॥ ಸೋಽಯಮಷ್ಟಾಕ್ಷರವಾನ್
ಪ್ರಣವಃ । ವಿಶ್ವ-ತೈಜಸ-ಪ್ರಾಜ್ಞ-ತುರೀಯಾತ್ಯಾಂತರಾತಪರಮಾತ್ಮಜ್ಞಾನಾತ್ಮಸಂಜ್ಞಕಾ-
ನಾಮ್ ಅಷ್ಟಾಕ್ಷರರೂಪಾಣಾಂ ಕ್ರಮೇಣ ವಾಚಕ ಇತ್ಯರ್ಥಃ ॥
 
ಟೀಕಾರ್ಥ ಹಿಂದೆ ಹೇಳಿದ ಅಕಾರಾದಿ ಎಂಟು ಅಕ್ಷರಗಳಿಗೂ ಸಂಬಂಧಪಟ್ಟ
ಭಗವದ್ರೂಪಗಳನ್ನು ಹೇಳುತ್ತಿದ್ದಾರೆ 'ಸ' ಎಂಬ ಶ್ಲೋಕದಿಂದ, ಸಃ ಎಂದರೆ ಹಿಂದೆ
ಹೇಳಿದ ಎಂಟಕ್ಷರವುಳ್ಳ ಪ್ರಣವವು ಎಂದರ್ಥ. ಅಕಾರಾದಿ ಎಂಟು ಅಕ್ಷರಗಳಿಗೆ ಕ್ರಮವಾಗಿ
ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ ಪರಮಾತ್ಮ, ಜ್ಞಾನಾತ್ಮ ಎಂಬ
ಎಂಟುರೂಪಗಳು ಪ್ರತಿಪಾದ್ಯವಾಗಿವೆ.
 
www
 
ವಿಶೇಷಾಂಶ - ಯತಿಪ್ರಣವಕಲ್ಪದಲ್ಲಿ ಕೃಷ್ಣ, ನೃಸಿಂಹ, ವರಾಹ, ವಿಷ್ಣು, ಪರಂಜ್ಯೋತಿ,
ಪರಂಬ್ರಹ್ಮ, ವಾಸುದೇವ ಎಂದು ಭಗವಂತನ ಬೇರೆ ರೂಪಗಳನ್ನು ಅಕಾರಾದಿಗಳಿಂದ
ಪ್ರತಿಪಾದ್ಯವೆನ್ನಲಾಗಿದೆ. ಇದನ್ನು ಶ್ರೀಮದಾಚಾರ್ಯರು 'ಮದ್ರೂಪಾಣಾಂ ಚ ವಾಚಕಃ'
ಎಂಬಲ್ಲಿರುವ 'ಚ'ಕಾರದಿಂದ ಹೇಳಿದ್ದಾರೆ.
 
ತತ್ವಸಾರದಲ್ಲಿ ಸೃಷ್ಟಿಯನ್ನು ಮಾಡುವ ಬ್ರಹ್ಮಾಂತರ್ಯಾಮಿಯಾದ ರೂಪ, ಪಾಲನೆ
ಮಾಡುವ ವಿಷ್ಣುರೂಪ, ಸಂಹಾರಮಾಡುವ ಶಿವಾಂತರ್ಯಾಮಿರೂಪ, ಅನಿರುದ್ಧಾದಿ
ಪಂಚರೂಪಗಳು; ಇವು ಸೇರಿ ಒಟ್ಟು ಎಂಟುರೂಪಗಳು ಎಂದು ಹೇಳಿದೆ.
 
ಐವತ್ತು ಮಾತೃಕಾರೂಪಗಳು
 
ತದ್ರೂಪಭೇದಾಃ ಪಂಚಾರನ್ನೂರ್ತಯೋ ಮಮ ಚಾಪರಾಃ ।
ಪಂಚಾಶದ್ವರ್ಣವಾಚ್ಯಾಸ್ತಾ ವರ್ಣಾಸ್ತಾರಾರ್ಣಭೇದಿತಾಃ ॥5॥
 
ಅರ್ಥ - ಈ ವಿಶ್ವಾದಿಎಂಟುರೂಪಗಳಿಂದ ವ್ಯಕ್ತಿಗಳಾದ, ವಿಶ್ವಾದಿರೂಪಗಳಿಂದ
ಬೇರೆಯಾದ ನನ್ನ ಐವತ್ತು ರೂಪಗಳಿವೆ. ಓಂಕಾರದ ಅಷ್ಟಾಕ್ಷರಗಳಿಂದ ಅಭಿವ್ಯಕ್ತ
ಗಳಾದ ಅಕಾರಾದಿ-ಆಕಾರದವರೆಗಿನ ಐವತ್ತು ವರ್ಣಗಳು ಈ ಐವತ್ತು ರೂಪಗಳನ್ನು
ಪ್ರತಿಪಾದಿಸುತ್ತವೆ.
 
ವ.ಟೀ. ಮಾತೃಕಾದೇವತಾ ಆಹ ತದ್ರೂಪಭೇದಾ ಇತ್ಯಾದಿ ॥ ಪಂಚಾಶ-
ದಕ್ಷರಾಣಾಂ ಮೂರ್ತಯಃ, ಅಥ ನಾರಾಯಣಾಷ್ಟಾಕ್ಷರಮೂರ್ತಯತ್ನ ತದ್ರೂಪ