This page has not been fully proofread.

ತೃತೀಯೋsಧ್ಯಾಯಃ
 
ಪರಮಮಂಗಳಸ್ವರೂಪನಾದ
 
ಭಗವಂತನನ್ನು ಧ್ಯಾನಿಸಿದರೆ ಕರುಣಾಳುವಾದ
 
ಅವನು ನಮ್ಮ ಅನಿಷ್ಟಗಳನ್ನೆಲ್ಲ ಪರಿಹರಿಸಿ ಸಮಸ್ತಾಭೀಷ್ಟಗಳನ್ನು ವರ್ಷಿಸುತ್ತಾನೆ.
 
ತತ್ತ್ವ- ತತ್ವದೇವತೆಗಳು
 
ಪುರುಷೋಽವ್ಯಕ್ತಂ ಚ ಮಹಾನಹಂಕಾರೋ ಮನಸ್ತಥಾ ।
ದಶೇಂದ್ರಿಯಾಣಿ ಶಬ್ದಾದ್ಯಾ ಭೂತೇತಾಃ ಪಂಚವಿಂಶತಿಃ ॥143॥
ತತ್ವಾಖ್ಯಾಃ ಕಾಲಮಾಯೇ ಚ ನಿಯತಿರ್ಮತಿರೇವ ಚ ।
ವಿದ್ಯಾ ಕಲಾ ಪ್ರವೃತಿಶ್ಚ ದ್ವಾತ್ರಿಂಶತ್ ತತ್ತ್ವ ಸಂಗ್ರಹಃ ॥144॥
 
137
 
ಸ್ಫೂರ್ತಿ: ಸಂವಿತ್ ಪ್ರತಿಷ್ಠಾಚ ಶಕ್ತಿರಿತ್ಯಪರಾಣಿ ಚ ।
 
ಅರ್ಥ ತತ್ವಗಳು ಪುರುಷ, ಅವ್ಯಕ್ತ, ಮಹತ್ವ, ಅಹಂಕಾರತತ್ವ,
ಮನಸ್ತತ್ವ, ಹತ್ತು ಇಂದ್ರಿಯಗಳು, ಶಬ್ದಾದಿ ಐದು ತನ್ಮಾತ್ರೆಗಳು, ಪಂಚಭೂತಗಳು.
ಹೀಗೆ ಇಪ್ಪತ್ತೈದು ತತ್ವಗಳು.
 
ಈ ಇಪ್ಪತ್ತೈದು ತತ್ವಗಳೊಂದಿಗೆ ಕಾಲ, ಮಾಯಾ, ನಿಯತಿ, ಮತಿ, ವಿದ್ಯೆ, ಕಲಾ,
ಪ್ರವೃತ್ತಿಗಳನ್ನು ಸೇರಿಸಿದರೆ ಮುವತ್ತೆರಡು ತತ್ವಗಳಾಗುತ್ತವೆ. ಸ್ಪೂರ್ತಿ, ಸಂವಿತ್,
ಪ್ರತಿಷ್ಠೆ, ಶಕ್ತಿಗಳೆಂಬ ಬೇರೆ ನಾಲ್ಕು ತತ್ವಗಳನ್ನು ಸೇರಿಸಿದರೆ ಮುವ್ವತ್ತಾರು
ತತ್ವಗಳಾಗುತ್ತವೆ.
 
1. ವಿಶೇಷಾಂಶ -
 
ಭಾಗವತದಲ್ಲಿ ತ್ರಯೋವಿಂಶತಿ ತತ್ವಾನಿ' ಎಂಬುದಾಗಿ ಇಪ್ಪತ್ತಮೂರು ತತ್ವಗಳಿವೆ' ಎನ್ನಲಾಗಿದೆ.
ಇಪ್ಪತ್ತಾರೆಂದು, ಇಪ್ಪತ್ತೇಳೆಂದೂ ಹೇಳಿರುತ್ತಾರೆ. ಇವೆಲ್ಲವೂ ವಿವಕ್ಷಾಭೇದದಿಂದ ಹೇಳಿದ್ದೆಂದು
ತಿಳಿಯಬೇಕು.
 
ಅಭಿಮಾನಿದೇವತೆಗಳ ವಿವಕ್ಷೆ ಮಾಡದೆ ಪ್ರಕೃತ್ಯಾದಿ ಜಡತತ್ವಗಳ ವಿವಕ್ಷೆಯಿದ್ದಾಗ ಶಬ್ದಾದಿ ೨೩ +
ಜಡಪ್ರಕೃತಿ + ಅಬಿಮಾನಿಚೇತನಸಮೂಹ + ಮಹಾವಿಷ್ಣು : ೨೬ತತ್ವಗಳು.
 
ಇಪ್ಪತ್ತಮೂರು ತತ್ವಗಳು + ಅಭಿಮಾನಿಗಳು + ಜೀವ + ಪ್ರಕೃತ್ಯಭಿಮಾನಿನಿಯಾದ ಲಕ್ಷ್ಮೀ
 
ನಾರಾಯಣ : ೨೭.
 
ಪ್ರಕೃತಿಸ್ತು ಚತುರ್ವಿಂಶಾ ಪಂಚವಿಂಶೋ ಹರಿಃ ಸ್ವಯಮ್ ।
ಯದಾ ಜಡಾಂಶಸ್ವೀಕಾರೋ ಜೀವಃ ತತ್ಪಂಚವಿಂಶಕಃ ॥ ಭಾಗ.ತಾ. 3/7/2