This page has not been fully proofread.

136
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಹರಿಸ್ಮರಣೆಯ ಆವಶ್ಯಕತೆ
 
ತಿವಿಹೀನಾ ತು ಪೂಜಾ ಸ್ಯಾದಾಸುರೀ ತಥಾ ।
ಗೃಹಂತಿ ದೇವತಾಃ ನೈತಾಂ ತತಃ ಸ್ಯಾದ್ ದೇಶವಿಪ್ಲವಃ ।
ವ್ಯಾಧಿಜೋರಾದಿಭಿಃ ತಸ್ಮಾದ್ ಅಂತರ್ಧೈಯೋ ಹರಿಃ ಸದಾ ॥140॥
 
ಅರ್ಥ - ವಿಷ್ಣುವಿನ ಸಾನ್ನಿಧ್ಯಚಿಂತನೆ ಇಲ್ಲದೆ ಪೂಜಿಸಿದರೆ ಇದೊಂದು
ದೈತ್ಯರು ಮಾಡುವ ಪೂಜೆಯಂತಾಗಿ ದೇವತೆಗಳು ಇದನ್ನು ಸ್ವೀಕರಿಸುವುದಿಲ್ಲ.
ಇದರಿಂದ ರೋಗರುಜಿನಗಳು, ಕಳ್ಳಕಾಕರ ಭಯ, ಅತಿವೃಷ್ಟಿ-ಅನಾವೃಷ್ಟಿಗಳು
ಉಂಟಾಗಿ ದೇಶವೇ ತಲ್ಲಣಿಸುವಂತಾಗುತ್ತದೆ. ಆದ್ದರಿಂದ ಅಂತರ್ನಿಯಾಮಕನನ್ನು
ಧ್ಯಾನಿಸಲೇ ಬೇಕು.
 
ವಿಷ್ಣುಸ್ಮರಣೆರಹಿತವಾದದ್ದು ಅಸುರಪೂಜೆ
ವಿಷ್ಣುಭಕ್ತಿವಿಹೀನಸ್ಯ ಗತಿಃ ಸ್ಯಾನ್ನ ಶುಭಾ ಕ್ವಚಿತ್ ।
ಭಕ್ತಸ್ಯಾಪ್ಯನ್ಯದೇವೇಷು ತಸ್ಮಾದ್ಯೋ ಹರಿಃ ಸದಾ ॥1411
ಸಂಸ್ಕೃತೋ ಭಗವಾನ್ ವಿಷ್ಣುಃ ಸರ್ವಮಂಗಲಮಂಗಲ:!
ಸಮಸ್ತಾಭೀಷ್ಟದಾಯೀ ಸ್ಯಾನ ಧೈಯೋಖಿಃ ಜನೈ: 1142
 
ಅರ್ಥ - ವಿಷ್ಣುಭಕ್ತಿ ಇಲ್ಲದೆ ಅನ್ಯದೇವತೆಗಳಲ್ಲಿ ಎಷ್ಟೇ ಭಕ್ತಿಯನ್ನು ಮಾಡಿ-
ದರೂ ಅದರಿಂದ ಸದ್ದತಿ ಇಲ್ಲ. ಅಷ್ಟೇ ಅಲ್ಲದೆ ನರಕಾದಿ ಅನರ್ಥವೂ ಉಂಟಾ-
ಗುತ್ತದೆ.
 
ಅದರೊಳಗಿರುವ ವಾಯುಪ್ರತಿಮೆ; (೩) ಅದರೊಳಗೆ ಲಕ್ಷ್ಮೀಪ್ರತಿಮೆ. ಅದರೊಳಗೆ ವಿಷ್ಣುವು.
ಹೀಗೆ ಗೋಲಕತ್ರಿತಯ
 
ಶ್ರೀಮದಾಚಾರ್ಯರ ಪ್ರಯೋಗದಂತೆ ಎದುರಿಗಿರುವ ವಿಷ್ಣುವಿನ ಪ್ರತಿಮೆ. ಅದರೊಳಗೆ
ತೇಜೋಮಯವಾದ ವಾಯುವಿನ ಪ್ರತಿಮೆ. ಇದರೊಳಗೆ ಲಕ್ಷ್ಮೀಸಹಿತನಾದ ನಾರಾಯಣನು
ಇರುವನು. ಭಗವಂತನಿಂದ ಸಮವ್ಯಾಪ್ತಿಯುಳ್ಳ ಲಕ್ಷ್ಮೀದೇವಿಗೆ ಗೋಲಕತ್ವ ಹಾಗೂ
ಸಹಾಸೀನತ್ವಗಳು ವಿರುದ್ಧವಲ್ಲ. ಆದ್ದರಿಂದಲೇ 'ಪರಿದೃಶ್ಯಮಾನಪ್ರತಿಮಾಂತಃಸ್ಥಿತ ತೇಜ
ಸಾರಮಯಪ್ರತಿಮಾಂತಃಸ್ಥಿತ ಮುಖ್ಯ ಪ್ರಾಣಪ್ರತಿಮಾಯಾಂ ರಮಯಾ ಸಹ ಕ್ಷೀರನೀರ-
ವದಾಸೀನಸ್ವಪ್ರತಿಮಾಯಾಂ ನಾರಾಯಣಂ ಆವಾಹಯಾಮಿ' ಎಂದು ಹೇಳಿದಂತಾಗುತ್ತದೆ.