This page has been fully proofread once and needs a second look.

ತೃತೀಯೋsಧ್ಯಾಯಃ
 
ದುರ್ಗಾಶಿವಸ್ಕಂದಸೂರ್ಯವಿನಾಯಕಮುಖಾನಪಿ ।

ಸ್ಥಾಪಯೇದ್ ಉಕ್ತಮಾರ್ಗೇಣ ತತ್ತನ್ಮಂತೈಃತ್ರೈಃ ಸ್ಮರನ್ ಹರಿಮ್ 138
 
135
 
॥ ೧೩೮ ॥
 
ಅರ್ಥ - ದುರ್ಗೆ, ಶಿವ, ಸ್ಕಂದ, ಸೂರ್ಯ, ವಿನಾಯಕಾದಿ ಇತರ

ದೇವತೆಗಳನ್ನು ಪ್ರತಿಷ್ಠಾವಿಧಾನದಲ್ಲಿ ಹೇಳಿದ ಕ್ರಮದಂತೆಯೇ ಪ್ರತಿಷ್ಠಿತಬೇಕು.
ಹಾಗೂ ಆಯಾಯದೇವತೆಗಳ ಧ್ಯಾನ ಹಾಗೂ ಮಂತ್ರಗಳಿಂದ ಹಾಗೂ ಆಯಾಯ
ದೇವತೆಗಳಲ್ಲಿ ನಿಯಾಮಕ- ನಾಗಿರುವ ಶ್ರೀಹರಿಯ ಮಂತ್ರಗಳಿಂದಲೂ, ಮೂಲ-
ಮಂತ್ರ-
ಗಳಿಂದ ಶ್ರೀಹರಿಯನ್ನೇ ಸ್ಮರಿಸುತ್ತಾ ಪ್ರತಿಷ್ಠಾಪಿಸಬೇಕು.
 

 
ಗೋಲಕದ್ವಿತಯಂ ವಿಷ್ಟೋಣೋಃ ತ್ರಿತಯಂ ವಾಪಿ ಕೀರ್ತಿತಮ್ ।

ಅನ್ಯದೇವಪ್ರತಿಷ್ಠಾಸು ತದಂತಃ ಚಿಂತಯೇದ್ರಿಮ್ ॥13911
 
೧೩೯ ॥
 
ಅರ್ಥ - ಭಗವಂತನ ಪ್ರತಿಮೆಯನ್ನು ಸ್ಥಾಪಿಸುವಾಗ ಎದುರಿ- ಗಿರುವ ಪ್ರತಿಮೆ
ಒಂದು ಅಧಿಷ್ಠಾನ(ಗೋಲಕ), ಅದರೊಳಗೆ ತೇಜೋಮಯ ಮುಖ್ಯಪ್ರಾಣ
ಪ್ರತಿಮೆ ಎಂದು ಎರಡು ಗೋಲಕ- ಗಳನ್ನು ಹೇಗೆ ಧ್ಯಾನಿಸಬೇಕೋ ಹಾಗೆಯೇ
ಇತರ ದೇವತಾ ಪ್ರತಿಮೆಪ್ರತಿಮೆ ಗಳನ್ನು ಸ್ಥಾಪಿಸುವಾಗಲೂ ಕಾಣುವ ಪ್ರತಿಮೆ ಒಂದು
ಗೋಲಕ, ಅದರೊಳಗೆ ರುದ್ರಾದಿದೇವತೆಗಳೂ ಅದರೊಳಗೆ ತೇಜೋಮಯ

ಮುಖ್ಯಪ್ರಾಣ ಹೀಗೆ ಮೂರು ಗೋಲಕಗಳನ್ನು ಚಿಂತಿಸಿ ಅದರೊ- ಳಗೆ ಸನ್ನಿಹಿತನಾದ
ಭಗವಂತನನ್ನು ಧ್ಯಾನಿಸಬೇಕು.
 
[^1]
 
[^1]
. ವಿಶೇಷಾಂಶ -
 
ಗೋಲಕದ್ವಿತಯ ಎಂದರೆ ಎದುರಿಗಿರುವ ಲೋಹಾದಿಪ್ರತಿಮೆಯನ್ನು ವಿವಕ್ಷೆ ಮಾಡದೆ
ಪ್ರತಿಮೆಯಲ್ಲಿರುವ ತೇಜೋಮಯವಾದ ವಾಯುಪ್ರತಿಮೆ ಹಾಗೂ ಲಕ್ಷ್ಮೀ ಪ್ರತಿಮೆ- ಯೆಂದು
ಗೋಲಕದ್ವಿತಯ. ಗೋಲಕವೆಂದರೆ ಅಧಿಷ್ಠಾನವೆಂದು ಅರ್ಥ.
 

ಪ್ರತಿಮಾಧಿಕಸಾದೃಶ್ಯಾನ್ ಮುಖ್ಯಾ ವಿಷ್ಟೋಃಣೋಃ ಸದಾ ರಮಾ
 
ಎಂಬ ಪ್ರಮಾಣದಂತೆ ಭಗವಂತನ ಮುಖ್ಯ ಪ್ರತಿಮೆಯೆನಿಸಿದ ಲಕ್ಷ್ಮೀ- ದೇವಿಯನ್ನು ತೆಗೆದು-
ಕೊಳ್ಳಬೇಕು. ಇದೇ ರೀತಿ ಶಿವಾದಿಪ್ರತಿಮೆಗಳು, ಅದರೊಳಗೆ ತೇಜೋಮಯವಾದ ವಾಯು
ಹಾಗೂ ಲಕ್ಷ್ಮೀದೇವಿ- ಯ ಪ್ರತಿಮೆಗಳು. ಹೀಗೆ ಒಟ್ಟು ಮೂರು ಗೋಲಕಗಳು.
 

ವಿಷ್ಣು- ಲಕ್ಷ್ಮೀ - ವಾಯುಪ್ರತಿಮೆಗಳಲ್ಲಿ ವಾಯುಪ್ರತಿಮೆ, ಲಕ್ಷ್ಮೀ-
ಪ್ರತಿಮೆ. ಇದರೊಳಗೆ
ವಿಷ್ಣುಪ್ರತಿಮೆ ಹೀಗೆ ಗೋಲಕದ್ವಿತಯ. ವಿಷ್ಣು - ಲಕ್ಷ್ಮೀ - ವಾಯುಪ್ರತಿಮೆ ಹೊರತು ಇತರ
ಶಿವಾದಿ ಪ್ರತಿಮೆಗಳಲ್ಲಿ (೧) ಎದುರಿಗಿರುವ ಪ್ರತಿಮೆಯೊಳಗಿರುವ ಶಿವಾದಿಪ್ರತಿಮೆ; (೨)