This page has not been fully proofread.

ತೃತೀಯೋsಧ್ಯಾಯಃ
 
ದುರ್ಗಾಶಿವಸ್ಕಂದಸೂರ್ಯವಿನಾಯಕಮುಖಾನಪಿ ।
ಸ್ಥಾಪಯೇದ್ ಉಕ್ತಮಾರ್ಗಣ ತತ್ತನ್ಮಂತೈಃ ಸ್ಮರನ್ ಹರಿಮ್ 138
 
135
 
ಅರ್ಥ - ದುರ್ಗೆ, ಶಿವ, ಸ್ಕಂದ, ಸೂರ್ಯ, ವಿನಾಯಕಾದಿ ಇತರ
ದೇವತೆಗಳನ್ನು ಪ್ರತಿಷ್ಠಾವಿಧಾನದಲ್ಲಿ ಹೇಳಿದ ಕ್ರಮದಂತೆಯೇ ಪ್ರತಿಷ್ಠಿತಬೇಕು.
ಹಾಗೂ ಆಯಾಯದೇವತೆಗಳ ಧ್ಯಾನ ಹಾಗೂ ಮಂತ್ರಗಳಿಂದ ಹಾಗೂ ಆಯಾಯ
ದೇವತೆಗಳಲ್ಲಿ ನಿಯಾಮಕನಾಗಿರುವ ಶ್ರೀಹರಿಯ ಮಂತ್ರಗಳಿಂದಲೂ, ಮೂಲ-
ಮಂತ್ರಗಳಿಂದ ಶ್ರೀಹರಿಯನ್ನೇ ಸ್ಮರಿಸುತ್ತಾ ಪ್ರತಿಷ್ಠಾಪಿಸಬೇಕು.
 
ಗೋಲಕದ್ವಿತಯಂ ವಿಷ್ಟೋ ತ್ರಿತಯಂ ವಾಪಿ ಕೀರ್ತಿತಮ್ ।
ಅನ್ಯದೇವಪ್ರತಿಷ್ಠಾಸು ತದಂತಃ ಚಿಂತಯೇದ್ದರಿಮ್ ॥13911
 
ಅರ್ಥ - ಭಗವಂತನ ಪ್ರತಿಮೆಯನ್ನು ಸ್ಥಾಪಿಸುವಾಗ ಎದುರಿಗಿರುವ ಪ್ರತಿಮೆ
ಒಂದು ಅಧಿಷ್ಠಾನ(ಗೋಲಕ), ಅದರೊಳಗೆ ತೇಜೋಮಯ ಮುಖ್ಯಪ್ರಾಣ
ಪ್ರತಿಮೆ ಎಂದು ಎರಡು ಗೋಲಕಗಳನ್ನು ಹೇಗೆ ಧ್ಯಾನಿಸಬೇಕೋ ಹಾಗೆಯೇ
ಇತರ ದೇವತಾ ಪ್ರತಿಮೆಗಳನ್ನು ಸ್ಥಾಪಿಸುವಾಗಲೂ ಕಾಣುವ ಪ್ರತಿಮೆ ಒಂದು
ಗೋಲಕ, ಅದರೊಳಗೆ ರುದ್ರಾದಿದೇವತೆಗಳೂ ಅದರೊಳಗೆ ತೇಜೋಮಯ
ಮುಖ್ಯಪ್ರಾಣ ಹೀಗೆ ಮೂರು ಗೋಲಕಗಳನ್ನು ಚಿಂತಿಸಿ ಅದರೊಳಗೆ ಸನ್ನಿಹಿತನಾದ
ಭಗವಂತನನ್ನು ಧ್ಯಾನಿಸಬೇಕು.
 
1. ವಿಶೇಷಾಂಶ -
 
ಗೋಲಕದ್ವಿತಯ ಎಂದರೆ ಎದುರಿಗಿರುವ ಲೋಹಾದಿಪ್ರತಿಮೆಯನ್ನು ವಿವಕ್ಷೆ ಮಾಡದೆ
ಪ್ರತಿಮೆಯಲ್ಲಿರುವ ತೇಜೋಮಯವಾದ ವಾಯುಪ್ರತಿಮೆ ಹಾಗೂ ಲಕ್ಷ್ಮೀ ಪ್ರತಿಮೆಯೆಂದು
ಗೋಲಕದ್ವಿತಯ. ಗೋಲಕವೆಂದರೆ ಅಧಿಷ್ಠಾನವೆಂದು ಅರ್ಥ.
 
ಪ್ರತಿಮಾಧಿಕಸಾದೃಶ್ಯಾನ್ ಮುಖ್ಯಾ ವಿಷ್ಟೋಃ ಸದಾ ರಮಾ
 
ಎಂಬ ಪ್ರಮಾಣದಂತೆ ಭಗವಂತನ ಮುಖ್ಯ ಪ್ರತಿಮೆಯೆನಿಸಿದ ಲಕ್ಷ್ಮೀದೇವಿಯನ್ನು ತೆಗೆದು-
ಕೊಳ್ಳಬೇಕು. ಇದೇ ರೀತಿ ಶಿವಾದಿಪ್ರತಿಮೆಗಳು, ಅದರೊಳಗೆ ತೇಜೋಮಯವಾದ ವಾಯು
ಹಾಗೂ ಲಕ್ಷ್ಮೀದೇವಿಯ ಪ್ರತಿಮೆಗಳು. ಹೀಗೆ ಒಟ್ಟು ಮೂರು ಗೋಲಕಗಳು.
 
ವಿಷ್ಣು ಲಕ್ಷ್ಮೀ - ವಾಯುಪ್ರತಿಮೆಗಳಲ್ಲಿ ವಾಯುಪ್ರತಿಮೆ, ಲಕ್ಷ್ಮೀಪ್ರತಿಮೆ. ಇದರೊಳಗೆ
ವಿಷ್ಣುಪ್ರತಿಮೆ ಹೀಗೆ ಗೋಲಕದ್ವಿತಯ. ವಿಷ್ಣು - ಲಕ್ಷ್ಮೀ - ವಾಯುಪ್ರತಿಮೆ ಹೊರತು ಇತರ
ಶಿವಾದಿ ಪ್ರತಿಮೆಗಳಲ್ಲಿ (೧) ಎದುರಿಗಿರುವ ಪ್ರತಿಮೆಯೊಳಗಿರುವ ಶಿವಾದಿಪ್ರತಿಮೆ; (೨)