This page has been fully proofread once and needs a second look.

ವಿಹಿತವಾಗಿದೆ. ವಿಧಿಸಹಿತವಾದ ಪೂಜಾದಿಗಳು ನಡೆಯದೇ ಹೋದಾಗಲೂ ಹಿಂದೆ ಹೇಳಿದ ಕ್ರಮದಲ್ಲಿ ಕಲಶಸ್ಥಾಪನಾ- ಪೂರ್ವಕವಾಗಿ ಪುನಃ ಸನ್ನ್ಯಾಸಿಗಳಿಂದ ಅಭಿಷೇಕ ಮಾಡಿಸಿದರೆ ಶುದ್ಧವಾಗಿ ಸಾನ್ನಿಧ್ಯವುಂಟಾಗುತ್ತದೆ.
 
ವಿಷ್ಣುಗಾಯತ್ರೀ
 
ಸರ್ವತ್ರ ವಿಷ್ಣುಗಾಯತ್ರ್ಯಾ ಹೋಮಃ ಸ್ಯಾದಯುತಾವರಃ ॥ ೧೩೬॥
ನಾವಾವ್ಯಾದ್ಯಭಿಧಾನಾನು ವಿದ್ಮಹೇ ಧೀಮಹೇ ತಥಾ ।
ಪ್ರಚೋದಯಾತ್ ತೃತೀಯಾಧೋ ತನ್ನೋ ಗಾಯತ್ರಿನಾಮಿಕಾ ॥೧೩೭ ॥
 
ಅರ್ಥ - ಜೀರ್ಣೋದ್ಧಾರ, ಹಾಗೂ ಸಂಪ್ರೋಕ್ಷಣಾದಿಕಾಲಗಳಲ್ಲಿ ವಿಷ್ಣುಗಾಯತ್ರಿಯಿಂದ ಹತ್ತು ಸಾವಿರ ಆಹುತಿಗೆ ಕಡಿಮೆ ಇಲ್ಲದಂತೆ ಹೋಮವಾಗಬೇಕು. ವಿಷ್ಣುಗಾಯತ್ರೀ ಎಂದರೆ ನಾರಾಯಣಾಯ, ವಾಸುದೇವಾಯ, ವಿಷ್ಣು ಎಂಬ ನಾಮಗಳ ಅನಂತರ ಕ್ರಮವಾಗಿ 'ವಿದ್ಮಹೇ' 'ಧೀಮಹಿ' ಎಂಬ ಪದಗಳನ್ನು, ವಿಷ್ಣು ಎಂಬ ಪದದ ಆದಿ ಹಾಗೂ ಅಂತ್ಯಗಳಲ್ಲಿ ಕ್ರಮವಾಗಿ 'ತನ್ನೋ' ಎಂಬ ಪದ ಹಾಗೂ 'ಪ್ರಚೋದಯಾತ್' ಎಂಬ ಪದ- ಗಳನ್ನು ಸೇರಿಸಿದರೆ ವಿಷ್ಣುಗಾಯತ್ರಿಯಾಗುತ್ತದೆ.
 
 
 
ದುರ್ಗಾದಿದೇವತಾ ಪ್ರತಿಷ್ಠೆ
 
ಮಾಡುವುದಾದರೆ ಮೃಗಶಿರಾ, ಅನೂರಾಧಾದಿ ನಕ್ಷತ್ರಗಳಿರುವ, ನಂದಾ(??) ರಿಕ್ತ ತಿಥಿಗಳನ್ನು ಬಿಟ್ಟು ಒಳ್ಳೆಯ ಮುಹೂರ್ತದಲ್ಲಿ ಮಾಡಬೇಕೆಂದು ಅಭಿಪ್ರಾಯ.
ಸಂಕ್ಷೇಪವಾಗಿ ಮಾಡುವುದಾದರೆ
"ಅಸ್ಮಿನ್ ಸಂಪ್ರೋಕ್ಷಣಾಂಗ ಹವನೇ ದೇವತಾ ಪರಿಗ್ರಹಾರ್ಥಂ ಅನ್ವಾಧಾನಂ ಕರಿಷ್ಯೇ-ವಿಷ್ಣುಗಾಯತ್ರ್ಯಾ ಅಷ್ಟೋತ್ತರಶತವಾರಂ ಘೃತೇನ, ಪುರುಷಸೂಕ್ತೇನ ಏಕವಾರಂ ಘೃತೇನ .....' ಇತ್ಯಾದಿ ಮಾಡಿ ಪೂರ್ಣಾಹುತಿ ಮಾಡಿ ವಿಷ್ಣ್ವರ್ಪಣ ಮಾಡುವುದು.
ಪೂಜೆ ನಿಂತಲ್ಲಿ ವಿಶೇಷ-
ಒಂದು ದಿನ ಪೂಜೆ ನಿಂತರೆ ಎರಡು ಬಾರಿ ಪೂಜೆ ಮಾಡುವುದು, ಮೂರು ದಿನ ಪೂಜೆ ನಿಂತರೆ ಮಹಾಪೂಜೆ ಮಾಡುವುದು, ಮೂರುದಿನದ ನಂತರ ಎಷ್ಟು ದಿವಸ ಪೂಜೆ ನಿಂತಿದ್ದರೂ
ಸಂಪ್ರೋಕ್ಷಣವೇ ಹೊರತು ಪುನಃ ಪ್ರತಿಷ್ಠೆ ಬೇಕಾಗಿಲ್ಲ. ವರ್ಷ- ಗಟ್ಟಲೆ ಪೂಜಾದಿಗಳೇ ಇಲ್ಲದಿದ್ದಾಗ ಪುನಃ ಪ್ರತಿಷ್ಠೆಯೇ ಆಗಬೇಕು.