This page has been fully proofread once and needs a second look.

ತೃತೀಯೋsಧ್ಯಾಯಃ
 
ಪಂಚ ತೊಗಟೆ, ಪಂಚಪಲ್ಲವ ಹಾಗೂ ಸಪ್ತಮೃತ್ತಿಕೆಗಳು, ನೈರುತ್ಯ ಕಲಶದಲ್ಲಿ ಜಾಜಿ, ಕೋಷ್ಠ,
ಏಲಾ, ಕರ್ಪೂರ, ಕಸ್ತೂರಿ, ಲವಂಗ, ಕೇಸರಿ, ಪಿಪ್ಪಲಿಗಳು; ಪಶ್ಚಿಮಕಲಶದಲ್ಲಿ ಸುವರ್ಣಾದಿಗಳು,

ವಾಯವ್ಯಕಲಶದಲ್ಲಿ ಪಂಚಗವ್ಯ, ಉತ್ತರದಲ್ಲಿ ನಾರಿಕೇಲೋದಕ, ಈಶಾನ್ಯಕಲಶದಲ್ಲಿ ಅನೇಕ
ಔಷಧಿಗಳನ್ನು ಹಾಕಿ ಕಲಶಗಳನ್ನು ಸ್ಥಾಪಿಸಬೇಕು. ಬ್ರಹ್ಮಕಲಶದಲ್ಲಿ ಶುದ್ಧೋದಕವನ್ನು ಹಾಕಿ

ವರುಣಪೂಜೆ, ಕಲಶದೇವತೆಗಳ ಆವಾಹನೆಗಳನ್ನು ಪ್ರತ್ಯೇಕವಾಗಿ ಮಂತ್ರಗಳಿಂದ ಆವಾಹಿಸಬೇಕು.

ಇಲ್ಲಿ ವಿನಿಯೋಗಿಸಬೇಕಾದ ಮಂತ್ರಗಳು - (1) ಸಮುದ್ರಜ್ಯೇಷ್ಣಾಠಾ' (2) ಪವಸ್ವಸೋಮ
ಮಂದನಾ, (3) ಇಮಂ ಮೇ ಗಂಗೇ, (4) ಸುಮಿತ್ರಾರ್ಯಾ ನ ಆಪ ಔಷಧಯಃ, (5) ಇಮೇ
ಭೋಜಾಃ , (6) ಶಂ ನ ಇಂದ್ರಾಗ್ನಿ, (7) ಭದ್ರಂ ಕರ್ಣೇಭಿಃ, (8) ಆತೂನ ಇಂದ್ರಕ್ಷುಮಂತಂ,

(9) ನವೋ ನವೋ ಭವತಿ. ಈ ಮಂತ್ರಗಳಿಂದ ಆವಾಹಿಸಿ ಪೂಜಿಸಬೇಕು.
 
-
 
133
 

ನಂತರ ಪೂರ್ವಾದಿಕಲಶಗಳಿಂದ ಆರಂಭಿಸಿ ಅಭಿಷೇಕಿಸಬೇಕು. ನಂತರ ವಿಷ್ಣುಸೂಕ್ತ, ಘರ್ಮ,
ಪುರುಷ, ಸಮುದ್ರ, ಪವಮಾನಾದಿ ಸೂಕ್ತಗಳನ್ನು ಪಠಿಸುತ್ತಾ ಬ್ರಹ್ಮಕಲಶದಿಂದ ಅಭಿಷೇಕಿಸಬೇಕು.

ನಂತರ ಪ್ರತಿಮೆಯಲ್ಲಿ ಪ್ರಣವ, ಬೀಜಾಕ್ಷರನ್ಯಾಸ, ಮಾತೃಕಾನ್ಯಾಸ, ತತ್ವನ್ಯಾಸ, ಅಷ್ಟಾಕ್ಷರನ್ಯಾಸ
ಮಾಡಬೇಕು. ನಂತರ 'ಉದ್ಯದ್ ಭಾಸ್ವತ್ಸಮಾಭಾಸಃ' ಇತ್ಯಾದಿ ಧ್ಯಾನಶ್ಲೋಕವನ್ನು ಹೇಳಿ
ವಿಶೇಷ ಸಾನ್ನಿಧ್ಯಕ್ಕಾಗಿ ಪ್ರತಿಮೆಯನ್ನು ಮುಟ್ಟಿಕೊಂಡು ನೂರೆಂಟುಬಾರಿ ಮೂಲಮಂತ್ರವನ್ನು ಜಪ
ಮಾಡಬೇಕು. ನಂತರ ಗಂಧ, ಪುಷ್ಪಾದಿ ಧೂಪ ದೀಪ ನೈವೇದ್ಯಾದಿಗಳನ್ನು ಅರ್ಪಿಸಿ
ಮಹಾಮಂಗಲ- ನೀರಾಜನ ಮಾಡಿ, ಪುಷ್ಪಾಂಜಲಿ ಸಮರ್ಪಿಸಬೇಕು.
 

ನಂತರ ಪುರುಷಸೂಕ್ತ, ವಿಷ್ಟೋಣೋರ್ನುಕಂ, ಅತೋದೇವ, ಮಹಾ ವ್ಯಾಹೃತಿ, ವಿಷ್ಣುಗಾಯತ್ರಿಗಳಿಂದ
 
ಹೋಮ ಮಾಡಬೇಕು.
 

ಉಪಯೋಗಿಸಬೇಕಾದ ದ್ರವ್ಯಗಳು -

ವಿಷ್ಣುಗಾಯತ್ರಿಗೆ ಅಶ್ವತ್ಥಸಮಿತ್ತು - ಪಾಯಸ
;
ವಿಷ್ಟೋಣೋರ್ನುಕಂ ಮತ್ತು ಅತೋದೇವ
-ತುಪ್ಪಮಿಶ್ರಿತಾನ್ನ;
ಪುರುಷಸೂಕ್ತ- ತುಪ್ಪದಿಂದ ಮಾತ್ರ.
 
ತುಪ್ಪಮಿಶ್ರಿತಾನ್ನ;
 

ಈ ರೀತಿ ಸ್ವಿಷ್ಟಕೃದಾದಿ ಹೋಮಶೇಷವನ್ನು ಮುಗಿಸಿ ಆಚಾರ್ಯಾ ದಿಗಳಿಗೆ ದಕ್ಷಿಣಾದಿ ದಾನ,
ಬ್ರಾಹ್ಮಣಭೋಜನಾದಿಗಳನ್ನು ಮಾಡಿಸಬೇಕು.

ಪ್ರಾರ್ಥನೆ -
 

ದೇವದೇವ ರಮಾಕಾಂತ ಬ್ರಹ್ಮರುದ್ರಾದಿಪೂಜಿತ ।

ಯಸ್ಮಿನ್ ಗೃಹೇ ದೃಢಂ ಸ್ಥಿತ್ವಾತಸ್ಮಿನ್ ಗೇಹೇ ಪುನಾತಿ ಹಿ।
 

ಅಶುಚಿತ್ವಂ ಯದಾ ಸ್ಯಾತ್
 
ತದಾ ಸಂಪ್ರೋಕ್ಷಣಮ್ ॥
 

ಎಂದು ಹೇಳಿರುವಂತೆ ಸಂಪ್ರೋಕ್ಷಣೆಗೆ ಕಾಲನಿಯಮವಿಲ್ಲ. ಯಾವ ದಿನದಲ್ಲಿ ಅಶುಚಿತ್ವವೋ ಆ
ದಿನವೇ ಸಂಪ್ರೋಕ್ಷಣೆ ಮಾಡಿದಾಗ ಕಾಲನಿಯಮವಿರುವುದಿಲ್ಲ. ಕಾಲಾಂತರದಲ್ಲಿ