This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಗಳು ಪೂಜೆ, ಪಾರ್ಷದರಿಗೆ ಬಲಿಪ್ರದಾನ, ಕಡೆಯಲ್ಲಿ ಅವಜ್ಞಥ, ಬ್ರಾಹ್ಮಣ
ಭೋಜನಾದಿಗಳು ನಡೆಯಬೇಕು.
 
132
 
ಸಂಪ್ರೋಕ್ಷಣವಿಧಿ
 
ಚೋರಚಂಡಾಲಪತಿತಪ್ಪೋದಕ್ಕಾದಿಪ್ರವೇಶನೇ ।
ಶವಾದ್ಯುಪಹತ್ ಚೈವ ಪೂಜಾವಿಚ್ಛೇದನೇ ತಥಾ II13511
 
ಸಪನೋಕೇನ ಮಾರ್ಗಣ ಪ್ರಾಯಶ್ಚಿತ್ತವಿಧಿಃ ಸ್ಮೃತಃ ।
 
ಅರ್ಥ - ಕಳ್ಳರು, ಚಂಡಾಲರು, ಪತಿತರು, ಪಾಪಿಗಳು, ನಾಯಿ, ಬೆಕ್ಕು, ಕತ್ತೆ
ಮೊದಲಾದ ಪ್ರಾಣಿಗಳು, ರಜಸ್ವಲೆಯರಾದ ಸ್ತ್ರೀಯರು, ದೇವಾಲಯಪ್ರವೇಶ
ಮಾಡಿದರೆ ಆಗ ಸಂಪ್ರೋಕ್ಷಣವಿಧಿಯಿಂದ ಶುದ್ದಿ ಮಾಡಬೇಕು. ಹಾಗೆಯೇ
ಶವಾದಿಗಳಿಂದ ದೇವಾಲಯದ ಪರಿಸರ ಮಲಿನವಾದಾಗಲೂ' ಸಂಪ್ರೋಕ್ಷಣ
 
ಸಮರ್ಪಿಸಬೇಕು.
 
1. ವಿಶೇಷಾಂಶ - ಕಳ್ಳರು ದೇವಾಲಯಕ್ಕೆ ನುಗ್ಗಿ ದೇವರನ್ನು ಮುಟ್ಟಿ ಆಭರಣಾದಿಗಳನ್ನು
ಅಪಹರಿಸಿದಾಗ, ಬ್ರಹ್ಮಹತ್ಯಾದಿಗಳಿಂದ ಕೂಡಿದ ಪಾತಕಿಗಳ ಪ್ರವೇಶವಾದಾಗಲೂ, 'ಉದಕ್ಕಾ'
ಎಂದರೆ ರಜಸ್ವಲೆಯು. ಆದಿಪದದಿಂದ ಕತ್ತೆ, ಕಾಗೆ, ಗೂಬೆ ಮೊದಲಾದವುಗಳನ್ನು
ಇಟ್ಟುಕೊಳ್ಳಬೇಕು. ಇಲ್ಲಿ ಕೇವಲ ಅಭಿಷೇಕವನ್ನು ಮಾತ್ರ ಹೇಳಿದ್ದರಿಂದ ಪಂಚಗವ್ಯಾದಿ ಅಧಿ
ವಾಸನವಾಗಲೀ, ಅಂಕುರಾರ್ಪಣಾದಿಗಳು ಬೇಕಾಗಿಲ್ಲ. 'ಜಲಾಧಿವಾಸರಹಿತಂ ನೇತ್ರೋ-
ನೀಲನವರ್ಜಿತಾ'.
 
ಸಂಪ್ರೋಕ್ಷಣವಿಧಿ
 
ಆಚಮನ, ಪವಿತ್ರಪಾಣಿಯಾಗಿ ಪ್ರಾಣಾಯಾಮ ಮಾಡಿ 'ಶುಭತಿಥ್ ಅಸ್ಯಾಃ ಪ್ರತಿಮಾಯಾಃ
ಚೋರಚಂಡಾಲಪತಿತಾದಿಜನಿತಸ್ಪಷ್ಟಾಸ್ಪಷ್ಟದೋಷಪರಿಹಾರಾರ್ಥಂ ತಥಾ ಪ್ರತಿಮಾಯಾಂ
ಭಗವತ್ಪನ್ನಿಧಾನಸಿದ್ಧರ್ಥಂ ಸಂಪ್ರೋಕ್ಷಣಂ ಕರಿಷ್ಯ ಎಂದು ಸಂಕಲ್ಪಿಸಿ, ಗಣಪತಿಪೂಜೆ,
ವರುಣಪೂಜೆ, ಪುಣ್ಯಾಹ, ಋತ್ವಿಕ್‌ವರಣ, 'ಶುಚೀವೋ ಹವ್ಯಾ' ಇತ್ಯಾದಿ ಮಂತ್ರದಿಂದ
ಯಾಗಭೂಮಿಯನ್ನು ಶುದ್ಧಿಮಾಡಿ, 'ಸ್ವಸ್ಯಯನಂ' ಇತ್ಯಾದಿ ಮಂತ್ರದಿಂದ ಬಿಳಿಸಾಸಿವೆಯನ್ನು
ಎರಚಿ, ದೇವರ ಮುಂದೆ ಗೋಮಯಾದಿಗಳಿಂದ ಶುದ್ಧಿಮಾಡಿ, ಚಕ್ರಾಬ್ದಮಂಡಲವನ್ನು
ಬರೆಯಬೇಕು. ಅದರ ಮೇಲೆ ಎಂಟು ದಿಕ್ಕುಗಳಲ್ಲಿಯೂ ತೊಗರಿ, ಉದ್ದು, ಹುರುಳಿ, ಯವ,
ಗೋಧಿ, ಅವರೆ, ಕಡಲೆ, ಅಲಸಂದೆಗಳನ್ನು ಇಡಬೇಕು. ಮಧ್ಯ ಅಕ್ಕಿಯ ರಾಶಿಯಲ್ಲಿ ಬ್ರಹ್ಮನ
ಕಲಶವನ್ನು ಸ್ಥಾಪಿಸಿ, ಉಳಿದ ಎಂಟು ದಿಕ್ಕುಗಳಲ್ಲಿ ಕಲಶಸ್ಥಾಪಿಸಬೇಕು.
 
ಪೂರ್ವಕಲಶದಲ್ಲಿ ಅರಿಷಿಣದ ನೀರು, ಆಗೇಯಕಲಶದಲ್ಲಿ ಪಂಚಾಮೃತ, ದಕ್ಷಿಣಕಲಶದಲ್ಲಿ