This page has not been fully proofread.

130
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
1.
 
ಉತ್ಸವವಿಧಿ
 
ಏತೇನೈವ ವಿಧಾನೇನ ಕೃತ್ವಾ ದೇವಾಲಯಂ ಪುನಃ ।
ಸ್ನಾಪಯೇತ್ ಪುಂಡರೀಕಾಕ್ಷಂ ದ್ವಿಗುಣೇನ ಪ್ರವಾಹಣಾತ್ ॥131॥
 
ವಿಭವೇನಾನುಲೋಮೇನ ಜಪೇನ್ಮಂತ್ರಾನ್ ಪುನಸ್ತಥಾ ।
ಆರಾಧಯೇಜ್ಜಗನ್ನಾಥಂ ಧ್ಯಾಯನ್ ಭಕ್ಷ್ಯಾ ಯಥೋದಿತಮ್ ।132॥
 
ಯಾತ್ರಾಪಿ ಪೂರ್ವವತ್ ತತ್ರಾಪ್ಯುತ್ಸವೇಷು ಚ ಸರ್ವಶಃ ।
ಕಲಶೋಕವಿಧಾನೇನ ಪೂಜಾ ಬಲಿಹೃತಿಸ್ತಥಾ
 
11133॥
 
ಉತ್ಸವೇಷು ಸದಾ ಕಾರ್ಯಾ ಕಲಶಶೋತ್ಸವಾದನು ।
ಯಾತ್ರಾ ಸ್ನಾನಂ ಚ ಕರ್ತವ್ಯಂ ಸಮ್ಯಗುಕ್ತವಿಧಾನತಃ 1134॥
 
ಅರ್ಥ ನಂತರ ಹಿಂದೆ ಹೇಳಿದ ಕ್ರಮದಂತೆ ದೇವಾಲಯ ನಿರ್ಮಿಸಿ
ಭಗವಂತನನ್ನು ಪ್ರತಿಷ್ಠಾಪಿಸಿ, ಪ್ರತಿಮೋದ್ಧಾರಕಾಲದಲ್ಲಿ ಮಾಡಿದ ವೈಭವಕ್ಕಿಂತ
ಎರಡು ಪಟ್ಟು ವೈಭವದಿಂದ ಹವನ ಹೋಮಾದಿಗಳನ್ನು ಮಾಡಬೇಕು.
ತತ್ವದೇವತಾ ತತ್ತನ್ಮೂರ್ತಿ ಮಂತ್ರಗಳನ್ನು ಪ್ರಥಮಾಧ್ಯಾಯದಲ್ಲಿ ನಿರೂಪಿಸಿದಂತೆ
ಅನುಲೋಮವಾಗಿ (ಸೃಷ್ಟಿಕ್ರಮ) ಜಪಿಸಿ, ಪ್ರತಿಷ್ಠೆಯ ಕಾಲದ ಕಲಶಸ್ಥಾಪನಾದಿಗಳನ್ನು
ಮಾಡಿ ಭಕ್ತಿಯಿಂದ ಪೂಜಿಸಬೇಕು.
 
ಇದೇ ರೀತಿ ವಾರ್ಷಿಕ ಉತ್ಸವ ಮಾಡುವಾಗಲೂ ಕಲಶಸ್ಥಾಪನೆ, ಹೋಮಾದಿ-
ಉತ್ಸವಪ್ರಯೋಗ
 
ಗರುಡಾದಿ ಪ್ರತಿಷ್ಠಾರೆ ಮೊದಲು ಸುಮುಹೂರ್ತದಲ್ಲಿ ವಿಷ್ಟನ - ಗರುಡಾದಿಗಳ ಪೂಜೆ
ಮಾಡಬೇಕು. ಪ್ರತಿಮೆಯನ್ನು ಅಲಂಕರಿಸಿ ಪಲ್ಲಕ್ಕಿಯಲ್ಲಿ ಕೂಡಿಸಿ, ವೇದಾದಿಮಂಗಳಘೋಷ
ದಿಂದ ಪೂರ್ವೋತ್ತರಾದಿ ದಿಕ್ಕುಗಳಿಗೆ ಹೋಗಬೇಕು. ಪೀಠದಲ್ಲಿ ಕುಳ್ಳಿರಿಸಿ ಹೀಗೆ ಸಂಕಲ್ಪಿಸಬೇಕು.
'ಶುಭತಿಥ್ ಅಸ್ಯ ದೇವದೇವಸ್ಯ ಶ್ರೀಭೂದುರ್ಗಾಸಮೇತಸ್ಯ ಭಗವತೋ ವಾಸುದೇವಸ್ಯ
 
ನವದಿನ (ಸಪ್ತದಿನ/ದಿನ ಮಹೋತ್ಸವಕರ್ಮಕುರ್ವಾಣಃ ತದಂಗಭೂತಂ ಮೃತ್ಸಂಗ್ರಹಣಂ
ಕರಿಷ್ಯ । ತದಂಗ ಶುದ್ಧಪುಣ್ಯಾಹವಾಚನಂ ಕರಿಷ್ಯ' . ಹೀಗೆ ಸಂಕಲ್ಪಿಸಿದನಂತರ ಅಂಕುರಾರ್ಪಣ,
ವಾಸ್ತುಪೂಜಾದಿಗಳನ್ನು, ಪರ್ಯಗ್ನಿಕರಣಾಂತವಾಗಿ ಮಾಡಬೇಕು.
 
ಉತ್ಸವದಿನ ಪ್ರಾತಃಕಾಲದಲ್ಲಿ ಆಚಾರ್ಯನು ನಿತ್ಯಾಹ್ನಕವನ್ನು ಮುಗಿಸಿ, ತಿಥ್ಯಾದಿಗಳನ್ನು ಹೇಳಿ,
'ಶ್ರೀಭಗವತಃ ನವದಿನಪರ್ಯಂತಂ ಕಲಶೋಕ್ತವಿಧಾನೇನ ಪೂಜಾಬಲಿದಾನಂ