This page has not been fully proofread.

ತೃತೀಯೋsಧ್ಯಾಯಃ
 
ನೂತನದೇವಾಲಯ
 
ಉತ್ತೇನೈವ ವಿಧಾನೇನ ತದರ್ಧವಿಭವೈ: ಸುಧೀಃ ।
 
ಪಾದಮಾತ್ರೆರಪಿ ಹರಿಂ ಸ್ನಾಪಯಿತ್ವಾ ಯಥೋದಿತಮ್ ॥130॥
 
ಅರ್ಥ - ಜ್ಞಾನಿಯು ಹಿಂದೆ ಹೇಳಿದ ವಿಧಿಯಿಂದ ಕಲಶಾದಿಗಳನ್ನು ಇಟ್ಟು
ಪ್ರತಿಷ್ಠಾಕಾಲದಲ್ಲಿ ವ್ಯಯಮಾಡಬಹುದಾದ (ವೈಭವದ?) ಅರ್ಧ ಅಥವಾ ಕಾಲು-
ಭಾಗದಷ್ಟು ಉಪಚಾರಗಳಿಂದಾಗಲೀ ಶಾಸ್ಪೋಕ್ತಪ್ರಕಾರ ಅಭಿಷೇಕಾದಿಗಳನ್ನು ಮಾಡಿ
ದೇವಾಲಯ ನಿರ್ಮಾಣವಾಗುವವರೆಗೂ ಅನ್ಯತ್ರ ಸ್ಥಾಪಿಸಿ ಪೂಜಾದಿಗಳನ್ನು
ಅರ್ಪಿಸುತ್ತಿರಬೇಕು.
 
ಪೀಡಾಂ ಕುರ್ವಂತಿ ತೇ ಹ್ಯುಗ್ರಾಂ ದುರ್ಭಿಕ್ಷಮರಣಾದಿಕಮ್ ।
ತಸ್ಮಾತ್ ಸರ್ವಪ್ರಯತ್ನನ ಕುರ್ಯಾದ್ ಉದ್ಧರಣಕ್ರಿಯಾಮ್ ।
ಲೋಹಾದ್ಯಂ ಛಿನ್ನಭಿನ್ನಾಂಗಂ ಸದ್ಯಮಸ್ಥಾಪಯೇತ್ ಪುನಃ ॥
 
129
 
ಹೀಗೆ ಭಿನ್ನಭಿನ್ನಾಂಗವುಳ್ಳ ದಾರ್ವಾದಿಪ್ರತಿಮೆಗಳನ್ನು ಜೀರ್ಣೋದ್ಧಾರಮಾಡಿದ ನಂತರ
ಪೂರ್ಣವಾಗಿ ತುಟಿತವಾಗಿದ್ದರೆ, ದಾರು ಪ್ರತೀಕವಾಗಿದ್ದರೆ ಅದನ್ನು ಪೂರ್ಣವಾಗಿ ತ್ಯಜಿಸಿ ಹೊಸ
ಪ್ರತಿಮೆಯನ್ನು ಪೂರ್ವೋಕ್ತವಿಧಿಯಿಂದ ಪ್ರತಿಷ್ಠಾಪಿಸಬೇಕು. ತುಟಿತ ಪ್ರತಿಮೆಯು
ಮರದ್ದಾಗಿದ್ದರೆ ಅಗ್ನಿಯಲ್ಲಿ ಹಾಕಬೇಕು. ಕಲ್ಲಿನ ಪ್ರತಿಮೆಯಾದರೆ ನೀರಿನಲ್ಲಿ ತ್ಯಜಿಸಬೇಕು.
ಅಥವಾ ವಸ್ತಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳಲ್ಲಿ
 
ಹಾಕಬೇಕು.
 
ಅತಿಜೀರ್ಣಿತಾಮವ್ಯಂಗಾಂ(?) ದಾರವೀಂ ಶೈಲಜಾಮಪಿ ।
ಪರಿತ್ಯಜ್ಯ ನ್ಯಸೇದನ್ಯಾಂ ಪೂರ್ವೋಕ್ತವಿಧಿನಾ ಗುರುಃ ।
ದಾರವೀಂ ದಾಹಯೇದ್ ವ ಶೈಲಜಾಂ ಪ್ರಕ್ಷಿಪೇತ್ ಜಲೇ।
ಯಾನಮಾರೋಪ್ಯ ಜೀರ್ಣಂ ವಾಽಽಚ್ಚಾದ ವಸ್ತ್ರಾದಿನಾ ಗುರುಃ ।
ನೀತ್ವಾsಗಾಧಂ ಜಲಂ ರಮ್ಯಂ ಭಾಗೀರಥ್ಯಾಮಥಾರ್ಣವೇ ॥ - ಪಂಚರಾತ್ರ.
 
ಬಾಲಾಲಯನಿರ್ಮಾಣ
 
ಇಂದ್ರ-ಈಶಾನದಿಕ್ಕಿನಲ್ಲಿ, ಸೋಮ-ಈಶಾನದಿಕ್ಕು, ಅಗ್ನಿ -ಯಮ, ವಾಯು-ಸೋಮರ
ಮಧ್ಯದಲ್ಲಿಯಾಗಲೀ ಬಾಲಾಲಯ ನಿರ್ಮಾಣ ಮಾಡಬೇಕು.
 
ಅಲ್ಲಿ ಏಳು ಮೊಳ ಅಥವಾ ಏಳು ಮೊಳದ ಜಾಗದಲ್ಲಿ ಬಾಲಾಲಯವನ್ನು ಕಲ್ಪಿಸಬೇಕು.
 
ಮೂಲಮಂದಿರದ ಜಲಾಶಯವಿರುವ ದಿಕ್ಕಿನಲ್ಲಿ ಬಾಲಾಲಯ ನಿರ್ಮಿಸಬೇಕು.
ಬಾಲಾಲಯದಲ್ಲಿ ಶೈಲಾದಿಗಳಿಂದ ಪ್ರತಿಮೆಯನ್ನು ಮಾಡಿಸಬೇಕು. ಅದರಲ್ಲಿ ತತ್ವಮಂತ್ರಗಳನ್ನು
ವ್ಯತ್ಯಮದಿಂದ ಆವಾಹಿಸಬೇಕು.