This page has been fully proofread once and needs a second look.

ಪ್ರಣವಮಾಹಾತ್ಮ್ಯೆ
 
ಅಹಮೇಕೋಽಖಿಲಗುಣೋ ವಾಚಕಃ ಪ್ರಣವೋ ಮಮ ।
ಅಕಾರಾದ್ಯತಿಶಾಂತಾಂತಃ ಸೋಽಯಮಷ್ಟಾಕ್ಷರೋ ಮತಃ ॥ ೩ ॥
 
ಅ : ಬ್ರಹ್ಮನೇ! ನಾನೊಬ್ಬನೇ ಅನಂತಗುಣಪೂರ್ಣನಾದವನು. ಅಕಾರ,ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂಬ ಅಷ್ಟಾಕ್ಷರಗಳಿಂದ ಕೂಡಿದ ಪ್ರಣವವಾದರೂ ನನ್ನನ್ನೇ ಮುಖ್ಯವಾಗಿ ಪ್ರತಿಪಾದಿಸುತ್ತದೆ ಎಂದು ತಿಳಿ.
 
ವ.ಟೀ. - ಪ್ರಣವೋ ಮತ್ಸ್ವರೂಪವಾಚಕಃ । ಸೋಽಯಂ ಪ್ರಣವಃ ಅಷ್ಟಾಕ್ಷರಃ, ಕಥಮ್? ಅಕಾರಾದ್ಯತಿಶಾಂತಾಂತಃ = ಆಕಾರದ್ಯತಿ
ಶಾಂತಾವಸಾನಃ, ಅಕಾರೋಕಾರ-ಮಕಾರ-ನಾದ-ಬಿಂದು-ಘೋಷ-ಶಾಂತಾತಿಶಾಂತಭೇದೇನ ಅಷ್ಟಾಕ್ಷರೋ ಮತಃ ಪ್ರಸಿದ್ಧ
ಇತ್ಯರ್ಥಃ ॥
 
ಟೀಕಾರ್ಥ - ಪ್ರಣವವು = ಓಂಕಾರವು ನನ್ನ ಸ್ವರೂಪವನ್ನೇ ನಿರೂಪಿಸುತ್ತದೆ. ಈ ಪ್ರಣವವಾದರೂ ಎಂಟು ಅಕ್ಷರಗಳಿಂದ ಕೂಡಿದೆ. ಹೇಗೆಂದರೆ? ಅಕಾರ, ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂದು ಅಕಾರದಿಂದ ಅತಿಶಾಂತ- ದವರೆಗೂ ಎಂಟಾಗುತ್ತವೆ.
 
ವಿಶೇಷಾಂಶ - ಓಂಕಾರದಲ್ಲಿ ಅಕಾರ-ಉಕಾರ-ಮಕಾರ-ನಾದ- ಬಿಂದು-ಘೋಷ-ಶಾಂತ-ಅತಿಶಾಂತ ಎಂದು ಎಂಟು ಅಕ್ಷರಗಳಿವೆ. ಕೆಲವು ಕಡೆ ಘೋಷದ ಬದಲಾಗಿ 'ಕಲಾ' ಎನ್ನಲಾಗಿದೆ.
ಬೃಹದಾರಣ್ಯಕಭಾವಬೋಧದಲ್ಲಿ ಪ್ರಣವ ಅಕಾರೋಕಾರಮ-ಕಾರನಾದಬಿಂದುಕಲಾಶಾಂತಾತಿಶಾಂತರೂಪಾಷ್ಟಾಕ್ಷರಾತ್ಮಕಃ' ಎನ್ನಲಾಗಿದೆ.
 
ಆದರೆ ಶ್ರೀರಾಘವೇಂದ್ರತೀರ್ಥರ ಬೃಹದಾರಣ್ಯಕಖಂಡಾರ್ಥದಲ್ಲಿ 'ಕಲಾ' ಬದಲಾಗಿ'ಘೋಷ'ವೆನ್ನಲಾಗಿದೆ. ಗುರುಗಳ ಮಾರ್ಗವನ್ನೇ ವಸುಧೇಂದ್ರರೂ ಅನುಸರಿಸಿದ್ದಾರೆ. ಕೆಲವು ಕಡೆ ಶಾಂತಾತಿ- ಶಾಂತದ ಬದಲಾಗಿ 'ಕಲಾತೀತ', 'ತತ್ಪರ'ವೆಂದು ಹೇಳಲಾಗಿದೆ.[^1]
 
ಪ್ರಣವಪ್ರತಿಪಾದ್ಯಹರಿಮೂರ್ತಿಗಳು
 
ಸ ವಿಶ್ವತೈಜಸಪ್ರಾಜ್ಞತುರೀಯಾತ್ಮಾಂತರಾತ್ಮನಾಮ್।
ಪರಮಾತ್ಮಜ್ಞಾನಾತ್ಮಯುಜಾಂ ಮದ್ರೂಪಾಣಾಂ ಚ ವಾಚಕಃ
॥ ೪ ॥
 
 
 
 
1. ಕಲಾತೀತಾ ಸಪ್ತಮಾಕ್ಷರೋ ಭವತಿ । ತತ್ಪರಶ್ಚಾಷ್ಟಮೋಽಕ್ಷರೋ ಭವತಿ' - ತಾರೋಪನಿಷತ್