2023-05-04 06:04:45 by jayusudindra
This page has been fully proofread once and needs a second look.
( ಪ್ರಣವಮಾಹಾತ್ಮ)
3
ಪ್ರಣವಮಾಹಾತ್ಮ
ಮಮ ।
ಅಹಮೇಕೋಽಖಿಲಗುಣೋ ವಾಚಕಃ ಪ್ರಣವೋ
ಮಮ ।
ಅಕಾರಾದ್ಯತಿಶಾಂತಾಂತಃ ಸೋಽಯಮಷ್ಟಾಕ್ಷರೋ ಮತಃ ॥3 ೩ ॥
ಅ : ಬ್ರಹ್ಮನೇ! ನಾನೊಬ್ಬನೇ ಅನಂತಗುಣಪೂರ್ಣನಾದವನು. ಅಕಾರ,
ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂಬ
ಅಷ್ಟಾಕ್ಷರಗಳಿಂದ ಕೂಡಿದ ಪ್ರಣವವಾದರೂ ನನ್ನನ್ನೇ ಮುಖ್ಯವಾಗಿ ಪ್ರತಿಪಾದಿಸುತ್ತದೆ
ಎಂದು ತಿಳಿ.
ವ.ಟೀ.
- ಪ್ರಣವೋ ಮತ್ಸ್ವರೂಪವಾಚಕಃ । ಸೋಽಯಂ ಪ್ರಣವಃ ಅಷ್ಟಾಕ್ಷರಃ,
ಕಥಮ್? ಅಕಾರಾದ್ಯತಿಶಾಂತಾಂತಃ = ಆಕಾರ
ಕಾರಾದತಿದ್ಯತಿ
ಶಾಂತಾವಸಾನಃ, ಅಕಾರೋಕಾರ-
ಮಕಾರ-ನಾದ-ಬಿಂದು-ಘೋಷ-ಶಾಂತಾತಿಶಾಂತಭೇದೇನ ಅಷ್ಟಾಕ್ಷರೋ ಮತಃ ಪ್ರಸಿದ್ಧ
-
ಇತ್ಯರ್ಥಃ ॥
ಟೀಕಾರ್ಥ - ಪ್ರಣವವು := ಓಂಕಾರವು ನನ್ನ ಸ್ವರೂಪವನ್ನೇ ನಿರೂಪಿಸುತ್ತದೆ. ಈ
ಪ್ರಣವವಾದರೂ ಎಂಟು ಅಕ್ಷರಗಳಿಂದ ಕೂಡಿದೆ. ಹೇಗೆಂದರೆ? ಅಕಾರ, ಉಕಾರ,
ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂದು ಅಕಾರದಿಂದ
ಅತಿಶಾಂತ ಅತಿಶಾಂತ- ದವರೆಗೂ ಎಂಟಾಗುತ್ತವೆ.
ವಿಶೇಷಾಂಶ - ಓಂಕಾರದಲ್ಲಿ ಅಕಾರ- ಉಕಾರ- ಮಕಾರ- ಮಕಾರ-ನಾದ - ಬಿಂದು -
-ಘೋಷ ಶಾಂತ - -ಶಾಂತ-ಅತಿಶಾಂತ ಎಂದು ಎಂಟು ಅಕ್ಷರಗಳಿವೆ. ಕೆಲವು ಕಡೆ ಘೋಷದ
ಬದಲಾಗಿ 'ಕಲಾ' ಎನ್ನಲಾಗಿದೆ.
ಬೃಹದಾರಣ್ಯಕಭಾವಬೋಧದಲ್ಲಿ ಪ್ರಣವ ಅಕಾರೋ-
ಕಾರಮಕಾರಮ-ಕಾರನಾದಬಿಂದುಕಲಾಶಾಂತಾತಿಶಾಂತರೂಪಾಷ್ಟಾಕ್ಷರಾತ್ಮಕಕಃ' ಎನ್ನಲಾಗಿದೆ.
ಆದರೆ ಶ್ರೀರಾಘವೇಂದ್ರತೀರ್ಥರ ಬೃಹದಾರಣ್ಯಕಖಂಡಾರ್ಥದಲ್ಲಿ 'ಕಲಾ' ಬದಲಾಗಿ
'ಘೋಷ'ವೆನ್ನಲಾಗಿದೆ. ಗುರುಗಳ ಮಾರ್ಗವನ್ನೇ ವಸುಧೇಂದ್ರರೂ ಅನುಸರಿಸಿದ್ದಾರೆ.
ಕೆಲವು ಕಡೆ ಶಾಂತಾತಿ- ಶಾಂತದ ಬದಲಾಗಿ 'ಕಲಾತೀತ', 'ತತ್ಪರ'ವೆಂದು ಹೇಳಲಾಗಿದೆ.
[^1]
ಪ್ರಣವಪ್ರತಿಪಾದ್ಯಹರಿಮೂರ್ತಿಗಳು
ಸ ವಿಶ್ವತೈಜಸಪ್ರಾಜ್ಞತುರೀಯಾತ್ಮಾಂತರಾತ್ಮನಾಮ್
।
ಪರಮಾತತ್ಮಜ್ಞಾನಾತ್ಮಯುಜಾಂ ಮದ್ರರೂಪಾಣಾಂ ಚ ವಾಚಕಃ
॥4 ೪ ॥
1. ಕಲಾತೀತಾ ಸಪ್ತಮಾಕ್ಷರೋ ಭವತಿ । ತತ್ಪರತ್ನಾಶ್ಚಾಷ್ಟಮೋಽಕ್ಷರೋ ಭವತಿ' - ತಾರೋಪನಿಷತ್