This page has been fully proofread once and needs a second look.

128
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪ್ರತಿಮೆಯಲ್ಲಿಯೇ
 
ಸನ್ನಿಹಿತನಾಗಿರುವಂತೆ
 
ಪ್ರಾರ್ಥಿಸಬೇಕು.
 
[^1].
 
[^1]
. ದೇವಾಲಯವು ಜೀರ್ಣವಾದರೆ ಉದ್ಧಾರವನ್ನು ಇಲ್ಲಿ ಹೇಳಿದ್ದರೂ 'ಚ'ಶಬ್ದದಿಂದ ಪ್ರತಿಮೆ
ಜೀರ್ಣವಾಗಿದ್ದರೂ ಅದರ ಉದ್ಧಾರವನ್ನೂ ತಿಳಿಯಬೇಕು.
 

-
ಅಜೀರ್ಣ ಧ್ರುವಬೇರೇ ತು ಜೀರ್ಣೇ ಧಾಮನಿ ತಾನ್ ಸ್ಥಿತಾನ್ ।

ದೇವಾನ್ ದೇವಪರೀವಾರಾನ್ ಮೂಲಬೇರೇ ನಿವೇಶಯೇತ್ ।

ಪ್ರಾಸಾದೇ ಪತಿತೇ ಹರ್ಮೆಮ್ಯೇ ಗೋಪುರೇ ಮಂಟಪಾದಿಕೇ।

ತದಕಾರಂ ಚ ತದ್ಧವಂದ್ರವ್ಯಂ ತನ್ಮಾನಂ ತತ್ರ ಕಾರಯೇತ್ ॥
 

ಪ್ರಾಚೀನ ಋಷಿ, ಮುನಿಗಳು ಪ್ರತಿಷ್ಠಾಪಿಸಿದ ಪ್ರತಿಮೆಗಳ ಅಂಗಾಂಗಗಳು ಮುರಿದಿದ್ದರೆ
ಪ್ರತಿಮೆಯನ್ನೇ ಬದಲಿಸದೆ ಮುರಿದ ಅಂಗವನ್ನು ಸುವರ್ಣದಿಂದ ಮಾಡಿಸಬೇಕು. ನಂತರ
ಕಲಾ- ಕರ್ಣಮಾಡಿ ಪ್ರತಿಮೆಯಲ್ಲಿರುವ ಜೀವಕಲೆಯನ್ನು ಕಲಶೋ- ದಕದಲ್ಲಿ ಆವಾಹಿಸಿ,
ಮುರಿದ ಅಂಗವನ್ನು ಸರಿಮಾಡಿಸಿ, ನಂತರ ಅಧಿವಾಸಾದಿಗಳಿಂದ ಬಿಂಬಶುದ್ಧಿಮಾಡಿ, ನಂತರ
ಯಥಾವಿಧಿ ಪ್ರತಿಷ್ಠಾಪಿಸಬೇಕು.
 

ಪ್ರಾಸಾದ ಹಾಗೂ ಪ್ರತಿಮೆ ಎರಡೂ ಶಿಥಿಲವಾಗಿದ್ದರೆ ಹೊಸದಾಗಿ ತಾತ್ಕಾಲಿಕವಾಗಿ ತಯಾರಿಸಿದ
ಗರ್ಭಗೃಹದಲ್ಲಿ ಪೂಜಿಸುತ್ತಿರ- ಬೇಕು.
 

ಪ್ರತಿಮಾಶೈಥಿಲ್ಯದ ಅನೇಕವಿಧಗಳು -
 

 
ಪ್ರತಿಷ್ಠಿತಸ್ಥಾನದಿಂದ ಬೇರೆಡೆ ಹೋಗುವುದು, ಪ್ರವಾಹದಿಂದ ಅನ್ಯತ್ರ ಹೊರಟಿದ್ದು,
ಜೋ
ಚೋರಾದಿಗಳು ಕಿತ್ತುಹಾಕಿದ್ದು ಇಂತಹ ಪ್ರತಿಮೆಗಳನ್ನು ಪುನಃ ಸ್ಥಾಪಿಸಬಹುದು.
 

ಪೂಜಾದಿಗಳನ್ನು ಮಾಡಲು ಶಕ್ಯವಲ್ಲದ ಸ್ಥಳದಲ್ಲಿರುವ ಪ್ರತಿಮೆ ದಿಙ್ಮೂಢಪ್ರತಿಮೆಯೆನಿಸಿದೆ.

ಹಳ್ಳದಲ್ಲಿ ಬಿದ್ದಿರುವ ಪ್ರತಿಮೆಯಾಗಲೀ, ಮಹಾನುಭಾವರು ಪ್ರತಿಷ್ಠಾಪಿಸಿದ್ದರೆ ಅದು
ಜೀರ್ಣವಾಗಿರಲಿ, ಭಗ್ನವಾಗಿರಲೀ, ಅದನ್ನು ಜೀರ್ಣೋದ್ಧಾರಕ್ರಮದಿಂದ ವಿಧಿವತ್ತಾಗಿಯೂ ಆ

ಸ್ಥಾನದಿಂದ ಪಲ್ಲಟಗೊಳಿಸಬಾರದು.
 

ಸಿದ್ಧೈಸ್ತು ಮುನಿಭಿರ್ದೆ:ಧೇವೈಃ ತತ್ವವಿದ್ವಿಭಿ ಪ್ರತಿಷ್ಠಿತಮ್ ।
 

ಜೀರ್ಣ೦ ವಾಪೃಣಂ ವಾಪ್ಯಥವಾ ಭಗ್ನಂ ವಿಧಿನಾಪಿ ನ ಚಾಲಯೇತ್ ॥
 

ಇತರ ಪ್ರತಿಷ್ಠೆಯಾದ ಪ್ರತಿಮೆಗಳು ಅಂಗಹೀನವಾಗುವುದು, ಭಗ್ನವಾಗುವುದು, ಪೀಠಾದಿಗಳು
ಭಗ್ನವಾಗಿರುವುದು, ಕಳ್ಳಕಾಕ- ರಿಂದ ಶಿಥಿಲಗೊಂಡಿರುವ ಪ್ರತಿಮೆಗಳಲ್ಲಿರುವ ದೈವಶಕ್ತಿಯು

ಅನ್ಯತ್ರ ನೆಲೆಸುತ್ತದೆ. ತುಂಡಾದ ಲಿಂಗಾದಿ ಪ್ರತೀಕಗಳಲ್ಲಿ ಭೂತ- ಪ್ರೇತಗಳು ವಾಸಿಸುತ್ತವೆ. ದೇವತೆ
ಹೋದಾಗ ನಿಃಸತ್ವವಾದ ಪ್ರತಿಮೆಗಳನ್ನು ಬ್ರಹ್ಮರಾಕ್ಷಸರು ಆಶ್ರಯಿಸುತ್ತಾರೆ.

ಖಂಡಿತಂ ಚೂರ್ಣಿತಂ ಬಿಂಬಂ ಪ್ರೇತಾದ್ಯಾಯಾಃ ಆಶ್ರಯಂತಿ ಯತ್

ಬಿಂಬಾದ್ಯಂ ಸತ್ವಶೂನ್ಯತ್ವಾತ್ ತಥಾ ಬ್ರಹ್ಮಾದಿರಾಕ್ಷಸಾಃ ।

ಕರ್ತು:ತುಃ ನೃಪಾಣಾಂ ರಾಷ್ಟ್ರ ತಾಸ್ಯ ತದ್ಗ್ರಾಮಸ್ಯ ವಿಶೇಷತಃ ।