This page has not been fully proofread.

128
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪ್ರತಿಮೆಯಲ್ಲಿಯೇ
 
ಸನ್ನಿಹಿತನಾಗಿರುವಂತೆ
 
ಪ್ರಾರ್ಥಿಸಬೇಕು.
 
1. ದೇವಾಲಯವು ಜೀರ್ಣವಾದರೆ ಉದ್ಧಾರವನ್ನು ಇಲ್ಲಿ ಹೇಳಿದ್ದರೂ 'ಚ'ಶಬ್ದದಿಂದ ಪ್ರತಿಮೆ
ಜೀರ್ಣವಾಗಿದ್ದರೂ ಅದರ ಉದ್ಧಾರವನ್ನೂ ತಿಳಿಯಬೇಕು.
 
ಅಜೀರ್ಣ ಧ್ರುವಬೇರೇ ತು ಜೀರ್ಣ ಧಾಮನಿ ತಾನ್ ಸ್ಥಿತಾನ್ ।
ದೇವಾನ್ ದೇವಪರೀವಾರಾನ್ ಮೂಲಬೇರೇ ನಿವೇಶಯೇತ್ ।
ಪ್ರಾಸಾದೇ ಪತಿತೇ ಹರ್ಮೆ ಗೋಪುರೇ ಮಂಟಪಾದಿಕೇ।
ತದಕಾರಂ ಚ ತದ್ಧವಂ ತನ್ಮಾನಂ ತತ್ರ ಕಾರಯೇತ್ ॥
 
ಪ್ರಾಚೀನ ಋಷಿ, ಮುನಿಗಳು ಪ್ರತಿಷ್ಠಾಪಿಸಿದ ಪ್ರತಿಮೆಗಳ ಅಂಗಾಂಗಗಳು ಮುರಿದಿದ್ದರೆ
ಪ್ರತಿಮೆಯನ್ನೇ ಬದಲಿಸದೆ ಮುರಿದ ಅಂಗವನ್ನು ಸುವರ್ಣದಿಂದ ಮಾಡಿಸಬೇಕು. ನಂತರ
ಕಲಾಕರ್ಷಣಮಾಡಿ ಪ್ರತಿಮೆಯಲ್ಲಿರುವ ಜೀವಕಲೆಯನ್ನು ಕಲಶೋದಕದಲ್ಲಿ ಆವಾಹಿಸಿ,
ಮುರಿದ ಅಂಗವನ್ನು ಸರಿಮಾಡಿಸಿ, ನಂತರ ಅಧಿವಾಸಾದಿಗಳಿಂದ ಬಿಂಬಶುದ್ಧಿಮಾಡಿ, ನಂತರ
ಯಥಾವಿಧಿ ಪ್ರತಿಷ್ಠಾಪಿಸಬೇಕು.
 
ಪ್ರಾಸಾದ ಹಾಗೂ ಪ್ರತಿಮೆ ಎರಡೂ ಶಿಥಿಲವಾಗಿದ್ದರೆ ಹೊಸದಾಗಿ ತಾತ್ಕಾಲಿಕವಾಗಿ ತಯಾರಿಸಿದ
ಗರ್ಭಗೃಹದಲ್ಲಿ ಪೂಜಿಸುತ್ತಿರಬೇಕು.
 
ಪ್ರತಿಮಾಶೈಥಿಲ್ಯದ ಅನೇಕವಿಧಗಳು -
 
ಪ್ರತಿಷ್ಠಿತಸ್ಥಾನದಿಂದ ಬೇರೆಡೆ ಹೋಗುವುದು, ಪ್ರವಾಹದಿಂದ ಅನ್ಯತ್ರ ಹೊರಟಿದ್ದು,
ಜೋರಾದಿಗಳು ಕಿತ್ತುಹಾಕಿದ್ದು ಇಂತಹ ಪ್ರತಿಮೆಗಳನ್ನು ಪುನಃ ಸ್ಥಾಪಿಸಬಹುದು.
 
ಪೂಜಾದಿಗಳನ್ನು ಮಾಡಲು ಶಕ್ಯವಲ್ಲದ ಸ್ಥಳದಲ್ಲಿರುವ ಪ್ರತಿಮೆ ದಿಢಪ್ರತಿಮೆಯೆನಿಸಿದೆ.
ಹಳ್ಳದಲ್ಲಿ ಬಿದ್ದಿರುವ ಪ್ರತಿಮೆಯಾಗಲೀ, ಮಹಾನುಭಾವರು ಪ್ರತಿಷ್ಠಾಪಿಸಿದ್ದರೆ ಅದು
ಜೀರ್ಣವಾಗಿರಲಿ, ಭಗ್ನವಾಗಿರಲೀ, ಅದನ್ನು ಜೀರ್ಣೋದ್ಧಾರಕ್ರಮದಿಂದ ವಿಧಿವತ್ತಾಗಿಯೂ ಆ
ಸ್ಥಾನದಿಂದ ಪಲ್ಲಟಗೊಳಿಸಬಾರದು.
 
ಸಿದ್ಧಸ್ತು ಮುನಿಭಿರ್ದೆ: ತತ್ವವಿದ್ವಿ ಪ್ರತಿಷ್ಠಿತಮ್ ।
 
ಜೀರ್ಣ೦ ವಾಪೃಥವಾ ಭಗ್ನಂ ವಿಧಿನಾಪಿ ನ ಚಾಲಯೇತ್ ॥
 
ಇತರ ಪ್ರತಿಷ್ಠೆಯಾದ ಪ್ರತಿಮೆಗಳು ಅಂಗಹೀನವಾಗುವುದು, ಭಗ್ನವಾಗುವುದು, ಪೀಠಾದಿಗಳು
ಭಗ್ನವಾಗಿರುವುದು, ಕಳ್ಳಕಾಕರಿಂದ ಶಿಥಿಲಗೊಂಡಿರುವ ಪ್ರತಿಮೆಗಳಲ್ಲಿರುವ ದೈವಶಕ್ತಿಯು
ಅನ್ಯತ್ರ ನೆಲೆಸುತ್ತದೆ. ತುಂಡಾದ ಲಿಂಗಾದಿ ಪ್ರತೀಕಗಳಲ್ಲಿ ಭೂತಪ್ರೇತಗಳು ವಾಸಿಸುತ್ತವೆ. ದೇವತೆ
ಹೋದಾಗ ನಿಃಸತ್ವವಾದ ಪ್ರತಿಮೆಗಳನ್ನು ಬ್ರಹ್ಮರಾಕ್ಷಸರು ಆಶ್ರಯಿಸುತ್ತಾರೆ.
ಖಂಡಿತಂ ಚೂರ್ಣಿತಂ ಬಿಂಬಂ ಪ್ರೇತಾದ್ಯಾ ಆಶ್ರಯಂತಿ ಯತ್
ಬಿಂಬಾದ್ಯಂ ಸತ್ವಶೂನ್ಯತ್ವಾತ್ ತಥಾ ಬ್ರಹ್ಮಾದಿರಾಕ್ಷಸಾಃ ।
ಕರ್ತು: ನೃಪಾಣಾಂ ರಾಷ್ಟ್ರ ತಾಮಸ್ಯ ವಿಶೇಷತಃ ।