This page has been fully proofread once and needs a second look.

ತೃತೀಯೋsಧ್ಯಾಯಃ
 
ವಸ್ತ್ರಾದಿಗಳಿಂದ ಪೂಜಿಸಿ, ಯಜಮಾನನು ಅವರಿಂದ ಆಶೀರ್ವಾದ ಪಡೆಯಬೇಕು.
 
[^1].
 
ನೈವೇದ್ಯದ ಪ್ರಮಾಣ
 

 
ಶತಪ್ರಸ್ಥಾದನೂನಂ ತು ನೈವೇದ್ಯಂ ಪಾಯಸೋತ್ತರಮ್ ॥127 ೧೨೭
 
127
 

 
ದಿನೇಷ್ವೇತೇಷು ದಾತವ್ಯಂ ಸಘೃತಂ ಸಸಿತಾದಿಕಮ್ ।
ಪಾ

ಪಶ್ಚಾ
ದಪಿ ಯಥಾಶಕ್ತಿ ಪೂಜಾ ಕಾರ್ಯಾ ಹರೇಃ ಸದಾ ॥128 ೧೨೮
 
-
 

 
ಅರ್ಥ - ಪ್ರತಿಷ್ಠಾದಿ ಉತ್ಸವದಿವಸಗಳಲ್ಲಿ ನೂರು ಮಂದಿ ಬ್ರಾಹ್ಮಣರು
ಹೊಟ್ಟೆ ತುಂಬ ತಿನ್ನುವಷ್ಟು ಎಂದರೆ ನೂರು ಪ್ರಸ್ಥಕ್ಕೆ ಕಮ್ಮಿ ಇಲ್ಲದಂತೆ ನೈವೇದ್ಯ-
ವನ್ನು, ಪಾಯಸ, ತುಪ್ಪ, ಸಕ್ಕರೆ, ಜೇನುತುಪ್ಪಗಳೊಂದಿಗೆ ಶ್ರೀಹರಿಗೆ ನಿವೇದಿಸ
ಬೇಕು. ಉತ್ಸವ ಮುಗಿದ ನಂತರವೂ ಪ್ರತಿದಿನವೂ ಶಕ್ತ್ಯಾನುಸಾರವಾಗಿ ಶ್ರೀಹರಿಗೆ

ಪೂಜಾ,ನೈವೇದ್ಯಾದಿಗಳು ನಡೆಯುವಂತೆ ವ್ಯವಸ್ಥೆ ಮಾಡಬೇಕು.
 

[^2].
 
ಜೀರ್ಣೋದ್ಧಾರವಿಧಿ
 

 
ಜೀರ್ಣಾಲಯೋತ್‌ದ್ಧೃತೌ ಚೈವ ತತ್ತ್ವಮಂತ್ರಾನ್ ಸ್ವಕಂ ತಥಾ ।

ಪ್ರತಿಲೋಮೇನ ಜಪ್ತ್ವೈವ ಮೂರ್ತ್ತೌ ಸಂಕೋಚಯೇದ್ರಿಮ್ ॥129 ೧೨೯
 

 
ಅರ್ಥ - ಜೀರ್ಣವಾದ ದೇವಾಲಯವನ್ನು ಪುನಃ ಕಟ್ಟಿಸುವ ಸಂದರ್ಭದಲ್ಲಿ,
ಪ್ರತಿಮೆಯಲ್ಲಿಯೂ, ಗರ್ಭಗೃಹಾದಿ ಮಂಟಪ ಮೊದಲಾದವುಗಳಲ್ಲಿ ಸನ್ನಿಹಿತನಾದ
ಭಗವಂತನನ್ನು ತಮ್ಮತ್ತ್ವ- ದೇವತಾಮಂತ್ರ ಹಾಗೂ ಆಯಾಯ ಮೂರ್ತಿಮಂತ್ರಗಳನ್ನು

ಪ್ರತಿಷ್ಠಾಕ್ರಮಕ್ಕಿಂತ ವ್ಯತ್ಯಯುತ್ಕ್ರಮವಾಗಿ ಜಪಿಸಬೇಕು. ಹಾಗೂ ಭಗವಂತನನ್ನು ಕೇವಲ
 

 
[^
1]. ಆಚಾರ್ಯನು ಪ್ರತಿಷ್ಠೆ ಮಾಡಿದ ಪೂರ್ಣಫಲವನ್ನು ಯಜಮಾನನಿಗೆ ತಲುಪುವಂತೆ
ಆಶೀರ್ವದಿಸುವುದು.
 

ಫಲಂ ಸಮರ್ಪಯೇತ್ ತಸ್ಮೈ ಪರಿತುಷ್ಟಮನಾನಾಃ ಗುರುಃ
 

[^
2]. ಪ್ರತಿಷ್ಠೆಯ ಕಾಲದ ಏಳು ದಿವಸಗಳಲ್ಲಿ ನೂರು ಪ್ರಸ್ತಕ್ಕೆ ಕಮ್ಮಿ ಇರದಂತೆ ಪಾಯಸಾದಿ
ಭಕ್ಷ್ಯಗಳಿಂದ ಶ್ರೀಹರಿಗೆ ನೈವೇದ್ಯ ಮಾಡಬೇಕು. ಪಾಯಸಾದಿಗಳು ಇರಲೇಬೇಕು. ಹಾಗೆಯೇ
ಸಧೃ

ಸಘೃ
ತಂ, ಸಸಿತಾದಿಕಮ್ ಎಂದು ಹೇಳಿದ್ದರಿಂದ ಪಂಚಾಮೃತಾದಿ ಗಳೂ ನಡೆಯಬೇಕೆಂದು
ಸೂಚಿತವಾಗುತ್ತದೆ.
 

ಪಂಚಾಮೃತಂ ಚ ಕುರ್ವಿವೀತ ದಿನೈರೇತೈ:ತೈಃ ದ್ವಿಜೋತ್ತಮಃ(?)