This page has not been fully proofread.

126
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ದಾನವಿಧಿ
 
ತತಃ ಪೂರ್ವವದಾಗತ್ಯ ಪ್ರವೇಶ ಪುರುಷೋತ್ತಮಮ್ ।
ಪೂಜಯಿತ್ವಾವಿಧಾನೇನ
 
ದತ್ವಾ ದಾನಾನಿ ಶಕ್ತಿತಃ ॥126॥
 
ಗುರುಂ ಚ ಭಾಸಂಪೂಜ್ಯ ಸ್ವೀಕುರ್ಯಾದ್ ಆಶಿಷಸ್ತತಃ ।
 
.
 
-
 
ಅರ್ಥ - ಅವಧೃಥಸ್ನಾನಾನಂತರ ಹಿಂದಿನಂತೆ ರಾಜೋಪಚಾರಗಳಿಂದ ಭಗ
ವಂತನನ್ನು ಗರ್ಭಗುಡಿಗೆ ಕರೆತಂದು ಪೀಠದಲ್ಲಿ ಕುಳ್ಳಿರಿಸಬೇಕು. ನಂತರ
ಷೋಡಶೋಪಚಾರಪೂಜೆಯನ್ನು ಮಾಡಬೇಕು. ಅವಭ್ರಥಾಂಗವಾಗಿ ಯಥಾಶಕ್ತಿ
ಬ್ರಾಹ್ಮಣರನ್ನು ದಕ್ಷಿಣಾದಿಗಳಿಂದ ಸಂತೋಷಪಡಿಸಬೇಕು. ಆಚಾರ್ಯನನ್ನು
 
ಪ್ರಾರ್ಥಿಸಬೇಕು.
 
ನಂತರ ನದ್ಯಾದಿ ಜಲದಲ್ಲಿ ಚತುಸ್ರಯಂತ್ರವನ್ನು ಬರೆದು, ಮೂಲಮಂತ್ರವನ್ನು ಬರೆಯಬೇಕು.
ಮೂರುವರೆಕೋಟಿ ತೀರ್ಥಾಭಿಮಾನಿಗಳನ್ನು ಆವಾಹಿಸಬೇಕು. ಶಂಖ,ಚಕ್ರ,ಗರುಡಮುದ್ರೆ-
ಗಳನ್ನು ತೋರಿಸಿ ಯಾ ಪ್ರವತ ನಿವೃತ ಉದ್ವತಃ' ಇತ್ಯಾದಿ ಮಂತ್ರದಿಂದ ಪ್ರಾರ್ಥಿಸಿ, 'ಋತಂ ಚ
ಸತ್ಯಂ ಚ' ಇತ್ಯಾದಿ ಅಘಮರ್ಷಣದಿಂದ ಜಲವನ್ನು ಅವಲೋಡನ ಮಾಡಿ, ಪುರುಷಸೂಕ್ತ
ಪಠನ ಮಾಡುತ್ತಾ ಚಕ್ರ ಹಾಗೂ ಉತ್ಸವಮೂರ್ತಿಯನ್ನು ಆಚಾರ್ಯರು ತಲೆಯ ಮೇಲಿಟ್ಟು
ಕೊಂಡು ಮುಳುಗಿ ಅಭಿಷೇಕಿಸಬೇಕು. ಈ ಉತ್ಸವಮೂರ್ತಿ ಮುಳುಗಿದಾಗ ಸಮಸ್ತ
ಭಕ್ತವೃಂದವೂ ಅವಭಥಾನಮಾಡಬೇಕು. ಈ ರೀತಿ ದೇವನೊಂದಿಗೆ ಮುಳುಗಿದವರ ಸಮಸ್ತ
ಮಹಾಪಾತಕಗಳು ಪರಿಹೃತವಾಗಿ ಶುದ್ಧರಾಗುತ್ತಾರೆ. ಮುಂದೆ ಉತ್ತಮಲೋಕಗಳನ್ನು
 
ಹೊಂದುವರು.
 
ನಿಮಜ್ಜಯೇತ್ ತತ್ರ ಬಿಂಬಂ ಚಕ್ರಂ ಮಂತೈಃ ಯಥಾವಿಧಿ
ದೇವೇನ ಸಹ ತತ್ಕಾಲೇ ನಿಮಜ್ಜಂತಿ ಚ ಯೇ ಜನಾಃ ॥
ತೇ ನಿರ್ಧೂಯಾಶುಭಂ ಸರ್ವಂ ಮಹಾಪಾತಕಮಪ್ಯುತ ।
ಯಾಂತಿ ಧ್ರುವಂ ಸುದುಷ್ಟಾಪ್ಯಂ ಸ್ಥಾನಂ ಆಚಂದ್ರತಾರಕಮ್ ।
 
ಅವಭ್ಯಥಸ್ನಾನವಾದಮೇಲೆ ಬಿಂಬಕ್ಕೆ ಷೋಡಶೋಪಚಾರಪೂಜೆಯನ್ನು ಮಾಡಿ ದೇವಾಲಯಕ್ಕೆ
ತರಬೇಕು. ಈ ರೀತಿ ಅವಭ್ರಥಸ್ನಾನಮಾಡುವವರು ರಾಜಸೂಯಯಾಗದ ಫಲವನ್ನು
 
ಪಡೆಯುವರು.
 
ಯ ಏವಂ ಕುರುತೇ ಸ್ನಾನಂ ದೇವದೇವಸ್ಯ ಚಕ್ರಿಣಃ ।
ರಾಜಸೂಯಫಲಂ ಸೋಽಪಿ ಪ್ರಾತ್ಯೇವ ನ ಸಂಶಯಃ ॥