This page has been fully proofread once and needs a second look.

125
 
ತೃತೀಯೋsಧ್ಯಾಯಃ
 
ಕಾರಯೇದ್ ದೇವದೇವಸ್ಯ ಸ್ವಾಧ್ಯಾಯ್ಯಃಯೈಃ ಗೀತನೃತ್ತಕೈಃ 124
 
॥ ೧೨೪ ॥
 
ಮಹಾನದೀಸಂಗಮೇ ತು ತೀರ್ಥೇ ವಾತಿಪ್ರಶಸ್ತಕೇ ।
 

ಸ್ನಾಪಯೇತ್ ಪೂರ್ವವನಂತೈಃನ್ಮಂತ್ರೈಃ ಪುಂಸೂಕ್ತಾಂತೈ:ತೈಃ ಸ್ಮರನ್ ಹರಿಮ್ 125
 
-
 
ವಾಚನ,
 
೧೨೫ ॥
 
ಅರ್ಥ - ಪ್ರತಿಷ್ಠೆಯಾದ ನಂತರವೂ ಏಳು ದಿನಗಳಲ್ಲಿ ಗಾನ, ನರ್ತನ,
ವಾದ್ಯಘೋಷ, ವೇದಪುರಾಣ, ಇತಿಹಾಸಾದಿಗಳ ಪಠನ,

ವಾಚನ,
ಸೂಕ್ತಪಾರಾಯಣ, ಋಗಾದಿವೇದಗಳ ಮಂಗಳಧ್ವನಿ- ಗಳಿಂದ ಮಹೋತ್ಸವವನ್ನು
ಆಚರಿಸಬೇಕು. ಸಪ್ತಾಹ ಕಳೆದ ನಂತರ ಛತ್ರ, ಚಾಮರ ಮೊದಲಾದ
ರಾಜೋಪಚಾರ, ಗಾನ, ನರ್ತನಾದಿಗಳಿಂದ ಮಹಾನದಿಗಳು, ಸಂಗಮಸ್ಥಾನಾದಿಗಳ

ಸಮೀಪ ಹೋಗಿ ಪುರುಷಸೂಕ್ತಾದಿ ವೇದಮಂತ್ರಗಳನ್ನು ಪಠಿಸುತ್ತಾ ಭಗವಂತನ
ಉತ್ಸವಮೂರ್ತಿಗೆ ಅವಕೃಭೃಥಸ್ನಾನ[^1] ಮಾಡಿಸಬೇಕು.
 

 
ಅವಭ್ಯಭೃಥಸ್ನಾನ
 

 
[^
1.
 
]. - ಯಜಮಾನನು ಆಚಾರ್ಯಸಹಿತನಾಗಿ ನಿತ್ಯಕರ್ಮ ಮುಗಿಸಿ, ದೇವಾಲಯಕ್ಕೆ ಬಂದು,
'ಉತ್ತಿಷ್ಟೋಠೋತ್ತಿಷ್ಠಗೋವಿಂದ' ಎಂದು ಎಬ್ಬಿಸಿ ನಿರ್ಮಾಲ್ಯ ವಿಸರ್ಜನೆ ಮಾಡಿ ಹೀಗೆ
ಪ್ರಾರ್ಥಿಸ- ಬೇಕು.
 

ತೀರ್ಥಯಾತ್ರಾ ತ್ವಯಾ ದೇವ ಸ್ವೀಕರ್ತವ್ಯಾ ಸುರೇಶ್ವರ

ತತ್ರ ಪ್ರತಿಸರಾಮ ತ್ವಂ ಅನುಜ್ಞಾಂ ದಾತುಮರ್ಹಸಿ ॥
 

ಹೀಗೆ ಪಲ್ಲಕ್ಕಿಯಲ್ಲಿ ಕೂಡಿಸಿ, ನಾನಾವಿಧ ವಾದ್ಯಘೋಷ, ವೇದ- ಘೋಷಗಳನ್ನು ಮಾಡುತ್ತಾ
ದೇವಾಲಯಕ್ಕೆ ಪ್ರದಕ್ಷಿಣೆ ಬರಬೇಕು.
 

ನದೀಸಂಗಮ, ದೇವತಟಾಕಾದಿಗಳ ಸಮೀಪ ದಾರಿಯಲ್ಲಿ ಅರಳನ್ನು ಎರಚುತ್ತಾ ದೇವನನ್ನು ಕರೆ
 
ತರಬೇಕು.
 

ನದ್ಯಾದಿ ತೀರದಲ್ಲಿ ರಂಗಾವಲಿಯಿಂದ ಅಲಂಕೃತವಾದ ಸ್ಥಳ- ದಲ್ಲಿ ದೇವಪ್ರತಿಮೆಯನ್ನು
 
ಕೂಡಿಸಬೇಕು.
 

ಮಹಾಕುಂಭವನ್ನು ಸ್ಥಾಪಿಸಿ, ಕಲಶಪೂಜೆ ವರುಣಪೂಜೆ ಮಾಡಿ ಗಂಗಾದಿ ಸಕಲತೀರ್ಥಾಭಿ-
ಮಾನಿಗಳನ್ನೂ ಆವಾಹಿಸಿ ಪೂಜಿಸು- ವುದು. ನಂತರ ಆಹ್ತ್ವಾಹಾರ್ಷ, ಪುರುಷಸೂಕ್ತಾದಿಗಳಿಂದ

ಶಂಖದಿಂದ ಪ್ರತಿಮೆಗೆ ಅಭಿಷೇಕವನ್ನು ಮಾಡಬೇಕು.
 

ಪ್ರತಿಮೆಗೆ ಉದ್ವರ್ತನಸೇವೆಯನ್ನು ಮಾಡಬೇಕು. ಅಂದರೆ ಕಡಲೇ ಹಿಟ್ಟಿನಿಂದ ಉಜ್ಜಿ
ತೊಳೆಯುವುದು. ಹಿಂದೆ ಸ್ಥಾಪಿಸಿದ ಅಂಕುರಾ ರೋಪಣಪಾಲಿಕೆಗಳನ್ನು ಬ್ರಾಹ್ಮಣರು ಶಿರಸ್ಸಿನಲ್ಲಿ
ಧರಿಸಿ 'ಹಿರಣ್ಯಶೃಂಗಂ', 'ಅಂಬಯೋ ಯಂತ್ಯಧ್ವಭಿಃ' ಇತ್ಯಾದಿ ನವಮಂತ್ರಗಳಿಂದ ವರುಣನನ್ನು