This page has not been fully proofread.

125
 
ತೃತೀಯೋsಧ್ಯಾಯಃ
 
ಕಾರಯೇದ್ ದೇವದೇವಸ್ಯ ಸ್ವಾಧ್ಯಾಯ್ಯಃ ಗೀತನೃತ್ತಕೈಃ 124
 
ಮಹಾನದೀಸಂಗಮೇ ತು ತೀರ್ಥ ವಾತಿಪ್ರಶಸ್ತಕೇ ।
 
ಸ್ನಾಪಯೇತ್ ಪೂರ್ವವನಂತೈಃ ಪುಂಸೂಕ್ತಾಂತೈ: ಸ್ಮರನ್ ಹರಿಮ್ 125॥
 
-
 
ವಾಚನ,
 
ಅರ್ಥ - ಪ್ರತಿಷ್ಠೆಯಾದ ನಂತರವೂ ಏಳು ದಿನಗಳಲ್ಲಿ ಗಾನ, ನರ್ತನ,
ವಾದ್ಯಘೋಷ ವೇದಪುರಾಣ, ಇತಿಹಾಸಾದಿಗಳ ಪಠನ,
ಸೂಕ್ತಪಾರಾಯಣ, ಋಗಾದಿವೇದಗಳ ಮಂಗಳಧ್ವನಿಗಳಿಂದ ಮಹೋತ್ಸವವನ್ನು
ಆಚರಿಸಬೇಕು. ಸಪ್ತಾಹ ಕಳೆದ ನಂತರ ಛತ್ರ, ಚಾಮರ ಮೊದಲಾದ
ರಾಜೋಪಚಾರ, ಗಾನ, ನರ್ತನಾದಿಗಳಿಂದ ಮಹಾನದಿಗಳು, ಸಂಗಮಸ್ಥಾನಾದಿಗಳ
ಸಮೀಪ ಹೋಗಿ ಪುರುಷಸೂಕ್ತಾದಿ ವೇದಮಂತ್ರಗಳನ್ನು ಪಠಿಸುತ್ತಾ ಭಗವಂತನ
ಉತ್ಸವಮೂರ್ತಿಗೆ ಅವಕೃಥಸ್ನಾನ ಮಾಡಿಸಬೇಕು.
 
ಅವಭ್ಯಥಸ್ನಾನ
 
1.
 
ಯಜಮಾನನು ಆಚಾರ್ಯಸಹಿತನಾಗಿ ನಿತ್ಯಕರ್ಮಮುಗಿಸಿ, ದೇವಾಲಯಕ್ಕೆ ಬಂದು,
ಉತ್ತಿಷ್ಟೋತ್ತಿಷ್ಠಗೋವಿಂದ' ಎಂದು ಎಬ್ಬಿಸಿ ನಿರ್ಮಾಲ್ಯ ವಿಸರ್ಜನೆ ಮಾಡಿ ಹೀಗೆ
ಪ್ರಾರ್ಥಿಸಬೇಕು.
 
ತೀರ್ಥಯಾತ್ರಾ ತ್ವಯಾ ದೇವ ಸ್ವೀಕರ್ತವ್ಯಾ ಸುರೇಶ್ವರ
ತತ್ರ ಪ್ರತಿಸರಾಮ ತ್ವಂ ಅನುಜ್ಞಾಂ ದಾತುಮರ್ಹಸಿ ॥
 
ಹೀಗೆ ಪಲ್ಲಕ್ಕಿಯಲ್ಲಿ ಕೂಡಿಸಿ, ನಾನಾವಿಧ ವಾದ್ಯಘೋಷ, ವೇದಘೋಷಗಳನ್ನು ಮಾಡುತ್ತಾ
ದೇವಾಲಯಕ್ಕೆ ಪ್ರದಕ್ಷಿಣೆ ಬರಬೇಕು.
 
ನದೀಸಂಗಮ, ದೇವತಟಾಕಾದಿಗಳ ಸಮೀಪ ದಾರಿಯಲ್ಲಿ ಅರಳನ್ನು ಎರಚುತ್ತಾ ದೇವನನ್ನು ಕರೆ
 
ತರಬೇಕು.
 
ನದ್ಯಾದಿ ತೀರದಲ್ಲಿ ರಂಗಾವಲಿಯಿಂದ ಅಲಂಕೃತವಾದ ಸ್ಥಳದಲ್ಲಿ ದೇವಪ್ರತಿಮೆಯನ್ನು
 
ಕೂಡಿಸಬೇಕು.
 
ಮಹಾಕುಂಭವನ್ನು ಸ್ಥಾಪಿಸಿ, ಕಲಶಪೂಜೆ ವರುಣಪೂಜೆ ಮಾಡಿ ಗಂಗಾದಿ ಸಕಲತೀರ್ಥಾಭಿ-
ಮಾನಿಗಳನ್ನೂ ಆವಾಹಿಸಿ ಪೂಜಿಸುವುದು. ನಂತರ ಆಹ್ವಾಹಾರ್ಷ, ಪುರುಷಸೂಕ್ತಾದಿಗಳಿಂದ
ಶಂಖದಿಂದ ಪ್ರತಿಮೆಗೆ ಅಭಿಷೇಕವನ್ನು ಮಾಡಬೇಕು.
 
ಪ್ರತಿಮೆಗೆ ಉದ್ವರ್ತನಸೇವೆಯನ್ನು ಮಾಡಬೇಕು. ಅಂದರೆ ಕಡಲೇ ಹಿಟ್ಟಿನಿಂದ ಉಜ್ಜಿ
ತೊಳೆಯುವುದು. ಹಿಂದೆ ಸ್ಥಾಪಿಸಿದ ಅಂಕುರಾರೋಪಣಪಾಲಿಕೆಗಳನ್ನು ಬ್ರಾಹ್ಮಣರು ಶಿರಸ್ಸಿನಲ್ಲಿ
ಧರಿಸಿ 'ಹಿರಣ್ಯಶೃಂಗಂ', 'ಅಂಬಯೋ ಯಂತ್ಯಭಿಃ' ಇತ್ಯಾದಿ ನವಮಂತ್ರಗಳಿಂದ ವರುಣನನ್ನು