This page has been fully proofread once and needs a second look.

122
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ವಸ್ತ್ರರತ್ನಹಿರಣ್ಯಾದ್ಯೈರಲಂಕೃತ್ಯ ವಿಭೂತಿತಃ ।
 

ಗುರವೇ ದಕ್ಷಿಣಾಂ ದದ್ಯಾತ್ಕೋಟಿಂ ಲಕ್ಷಂ ಸಹಸ್ರಕಮ್ ॥119 ೧೧೯
 

 
ಶತಮರ್ಧ೦ ತದರ್ಧಂ ವಾ ನಿಃ ಭಾಸ್ವೋ ಭಕ್ತ್ಯಾ ಕ್ಷಮಾಪಯೇತ್ ।

ತದರ್ಧಮೃತ್ವಿಜಾಂ ಚೈವ ತದರ್ಧ೦ ಪಾರಣಾಕೃತಾಮ್ ॥120 ೧೨೦
 

 
ಅರ್ಥ
-
 
ಅರ್ಥ
ಕಲಶಗಳಿಂದ ಅಭಿಷೇಕವಾದ ಮೇಲೆ ಹಿಂದೆ ಹೇಳಿದ

ಳ್ತ್ವಾಹಾರ್ಷಾದಿ ಮಂತ್ರಗಳನ್ನು ಪುನಃ ಪುನಃ ಪಠಿಸುತ್ತಿರಬೇಕು. ಹಾಗೂ
ಪ್ರಥಮಾಧ್ಯಾಯದಲ್ಲಿ ಹೇಳಿದ ಪೂಜಾವಿಧಾನದಿಂದ ಪ್ರತಿಮೆಯನ್ನು ಪೂಜಿಸಬೇಕು.
ನಂತರ ದ್ವಾರಪಾಲಕರಿಗೂ ಹಾಗೂ ಇಂದ್ರಾದಿ ದಿಗಧಿಪತಿಗಳಿಗೂ ತಾರತಮ್ಯಾನು-
ಸಾರವಾಗಿ ನೈವೇದ್ಯೋಪಹಾರಗಳನ್ನು ಅರ್ಪಿಸಬೇಕು.
 
[^1].
 
ಬಲ್ಯಾದಿ ಕಾರ್ಯಕ್ರಮ ಮುಗಿದ ಮೇಲೆ ಗುರುಗಳಿಗೆ ದಕ್ಷಿಣೆಯನ್ನು ನೀಡಬೇಕು.
 

 
ಗುರುವನ್ನು ಕೂಡಿಸಿ ವಸ್ತ್ರ, ರತ್ನ, ಹಿರಣ್ಯಾದಿಗಳಿಂದ ಅಲಂಕರಿಸಿ ಗುರುವಿಗೆ
ದಕ್ಷಿಣಾವನ್ನು ತನ್ನ ಐಶ್ವರ್ಯಕ್ಕೆ ತಕ್ಕಂತೆ ನೀಡಬೇಕು. ಕೋಟಿನಾಣ್ಯಗಳನ್ನಾಗಲೀ,
ಲಕ್ಷ ನಾಣ್ಯಗಳನ್ನಾಗಲೀ, ಸಾವಿರ- ನಾಣ್ಯಗಳನ್ನಾಗಲೀ, ನೂರು ನಾಣ್ಯಗಳನ್ನಾಗಲೀ,
ಅಥವಾ ಐವತ್ತು ನಾಣ್ಯಗಳನ್ನಾಗಲೀ ನೀಡಬೇಕು. ಬಡವನಾಗಿದ್ದು ಮೇಲೆ

ಹೇಳಿದಷ್ಟು ನೀಡಲು ಅಶಕ್ತನಾದರೆ ಭಕ್ತಿಯಿಂದ ಗುರುಗಳನ್ನು ಕ್ಷಮೆ ಯಾಚಿಸಿದರೂ
ಪೂರ್ಣಫಲ ಬಂದೇ ಬರುತ್ತದೆ. ಇನ್ನು ಇತರ ಋತ್ವಿಕ್ಕುಗಳಿಗೆ ಪ್ರಧಾನಾಚಾರ್ಯ-
ರಿಗೆ ನೀಡಿದ ದಕ್ಷಿಣೆಯ ಅರ್ಧದಷ್ಟು ನೀಡಬೇಕು. ಅದರ ಅರ್ಧಭಾಗದಷ್ಟು
ವೇದಾದಿ ಪಾರಾಯಣ ಮಾಡಿದವರಿಗೂ, ಮಂತ್ರಾದಿ ಜಪ ಮಾಡಿದವರಿಗೂ

ನೀಡಬೇಕು.
 
[^2].
 
[^
1]. 'ದ್ವಾರಲೋಕಪತಿ'' ಎಂಬಲ್ಲಿ ದ್ವಾರಪತಿಗಳಾದ ಜಯ-ವಿಜಯಾದಿ ಎಂಟು ದೇವತೆಗಳನ್ನೂ
ಮತ್ತು ಲೋಕಪತಿಗಳಾದ ಇಂದ್ರಾದಿದೇವತೆಗಳನ್ನೂ ಪೂಜಿಸಬೇಕು. ಅದರ ಕ್ರಮ ಹೀಗಿದೆ -

ಮೊದಲು ಎಲ್ಲರಿಗೂ ಸೇರಿ ಸಾಷ್ಟಾಂಗನಮಸ್ಕಾರ ಹಾಕಬೇಕು. ಅಂಜಲಿಮುದ್ರೆಯಿಂದ
ನಮಸ್ಕರಿಸಿ 'ನೀವೆಲ್ಲರೂ ಈ ಕಾರ್ಯ- ದಲ್ಲಿ ಸನ್ನಿಹಿತರಾಗಿರಿ' ಎಂದು ಪ್ರಾರ್ಥಿಸಬೇಕು.
ಅವರಿಗೆ ಸಂಬಂಧಿಸಿದ ವೇದಮಂತ್ರಗಳನ್ನು ಪಠಿಸಿ, ಮೂಲಮಂತ್ರ ಜಪಿಸಬೇಕು. ನಂತರ
ಬಲಿಹರಣವನ್ನು ಮಾಡಬೇಕು.
 

[^
2]. ಪ್ರತಿಷ್ಠಾ, ಹೋಮಾದಿಗಳಲ್ಲಿ ಆಚಾರ್ಯರನ್ನು ವಂದಿಸಿ ಸಾವಿರಧೇನುಗಳನ್ನಾಗಲೀ ಅಥವಾ
ಅದಕ್ಕೆ ತಗಲುವ ಧನ- ವನ್ನಾಗಲೀ ನೀಡಬೇಕು.