2023-04-27 14:06:45 by ambuda-bot
This page has not been fully proofread.
122
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
ವಸ್ತ್ರರತ್ನಹಿರಣ್ಯಾರಲಂಕೃತ್ಯ ವಿಭೂತಿತಃ ।
ಗುರವೇ ದಕ್ಷಿಣಾಂ ದದ್ಯಾಟಿಂ ಲಕ್ಷಂ ಸಹಸ್ರಕಮ್ ॥119॥
ಶತಮರ್ಧ೦ ತದರ್ಧಂ ವಾ ನಿಃ ಭಾ ಕ್ಷಮಾಪಯೇತ್ ।
ತದರ್ಧಮೃಊಜಾಂ ಚೈವ ತದರ್ಧ೦ ಪಾರಣಾಕೃತಾಮ್ ॥120॥
-
ಅರ್ಥ ಕಲಶಗಳಿಂದ ಅಭಿಷೇಕವಾದ ಮೇಲೆ ಹಿಂದೆ ಹೇಳಿದ
ಆಳ್ವಾಹಾರ್ಷಾದಿ ಮಂತ್ರಗಳನ್ನು ಪುನಃ ಪುನಃ ಪಠಿಸುತ್ತಿರಬೇಕು. ಹಾಗೂ
ಪ್ರಥಮಾಧ್ಯಾಯದಲ್ಲಿ ಹೇಳಿದ ಪೂಜಾವಿಧಾನದಿಂದ ಪ್ರತಿಮೆಯನ್ನು ಪೂಜಿಸಬೇಕು.
ನಂತರ ದ್ವಾರಪಾಲಕರಿಗೂ ಹಾಗೂ ಇಂದ್ರಾದಿ ದಿಗಧಿಪತಿಗಳಿಗೂ ತಾರತಮ್ಯಾನು-
ಸಾರವಾಗಿ ನೈವೇದ್ಯೋಪಹಾರಗಳನ್ನು ಅರ್ಪಿಸಬೇಕು.
ಬಲ್ಯಾದಿ ಕಾರ್ಯಕ್ರಮ ಮುಗಿದ ಮೇಲೆ ಗುರುಗಳಿಗೆ ದಕ್ಷಿಣೆಯನ್ನು ನೀಡಬೇಕು.
ಗುರುವನ್ನು ಕೂಡಿಸಿ ವಸ್ತ್ರ, ರತ್ನ, ಹಿರಣ್ಯಾದಿಗಳಿಂದ ಅಲಂಕರಿಸಿ ಗುರುವಿಗೆ
ದಕ್ಷಿಣಾವನ್ನು ತನ್ನ ಐಶ್ವರ್ಯಕ್ಕೆ ತಕ್ಕಂತೆ ನೀಡಬೇಕು. ಕೋಟಿನಾಣ್ಯಗಳನ್ನಾಗಲೀ,
ಲಕ್ಷ ನಾಣ್ಯಗಳನ್ನಾಗಲೀ, ಸಾವಿರನಾಣ್ಯಗಳನ್ನಾಗಲೀ, ನೂರು ನಾಣ್ಯಗಳನ್ನಾಗಲೀ,
ಅಥವಾ ಐವತ್ತು ನಾಣ್ಯಗಳನ್ನಾಗಲೀ ನೀಡಬೇಕು. ಬಡವನಾಗಿದ್ದು ಮೇಲೆ
ಹೇಳಿದಷ್ಟು ನೀಡಲು ಅಶಕ್ತನಾದರೆ ಭಕ್ತಿಯಿಂದ ಗುರುಗಳನ್ನು ಕ್ಷಮೆ ಯಾಚಿಸಿದರೂ
ಪೂರ್ಣಫಲ ಬಂದೇ ಬರುತ್ತದೆ. ಇನ್ನು ಇತರ ಋತ್ವಿಕ್ಕುಗಳಿಗೆ ಪ್ರಧಾನಾಚಾರ್ಯ-
ರಿಗೆ ನೀಡಿದ ದಕ್ಷಿಣೆಯ ಅರ್ಧದಷ್ಟು ನೀಡಬೇಕು. ಅದರ ಅರ್ಧಭಾಗದಷ್ಟು
ವೇದಾದಿ ಪಾರಾಯಣ ಮಾಡಿದವರಿಗೂ, ಮಂತ್ರಾದಿ ಜಪ ಮಾಡಿದವರಿಗೂ
ನೀಡಬೇಕು.
1. 'ದ್ವಾರಲೋಕಪತಿ'' ಎಂಬಲ್ಲಿದ್ವಾರಪತಿಗಳಾದ ಜಯ-ವಿಜಯಾದಿ ಎಂಟು ದೇವತೆಗಳನ್ನೂ
ಮತ್ತು ಲೋಕಪತಿಗಳಾದ ಇಂದ್ರಾದಿದೇವತೆಗಳನ್ನೂ ಪೂಜಿಸಬೇಕು. ಅದರ ಕ್ರಮ ಹೀಗಿದೆ -
ಮೊದಲು ಎಲ್ಲರಿಗೂ ಸೇರಿ ಸಾಷ್ಟಾಂಗನಮಸ್ಕಾರ ಹಾಕಬೇಕು. ಅಂಜಲಿಮುದ್ರೆಯಿಂದ
ನಮಸ್ಕರಿಸಿ 'ನೀವೆಲ್ಲರೂ ಈ ಕಾರ್ಯದಲ್ಲಿ ಸನ್ನಿಹಿತರಾಗಿರಿ' ಎಂದು ಪ್ರಾರ್ಥಿಸಬೇಕು.
ಅವರಿಗೆ ಸಂಬಂಧಿಸಿದ ವೇದಮಂತ್ರಗಳನ್ನು ಪಠಿಸಿ, ಮೂಲಮಂತ್ರ ಜಪಿಸಬೇಕು. ನಂತರ
ಬಲಿಹರಣವನ್ನು ಮಾಡಬೇಕು.
2. ಪ್ರತಿಷ್ಠಾ, ಹೋಮಾದಿಗಳಲ್ಲಿ ಆಚಾರ್ಯರನ್ನು ವಂದಿಸಿ ಸಾವಿರಧೇನುಗಳನ್ನಾಗಲೀ ಅಥವಾ
ಅದಕ್ಕೆ ತಗಲುವ ಧನವನ್ನಾಗಲೀ ನೀಡಬೇಕು.