This page has not been fully proofread.

ತೃತೀಯೋsಧ್ಯಾಯಃ
 
ಅಭಿಷೇಕಿಸಬೇಕು. ಮಂಡಲದ ಪಂಚಕಮಲದಳಗಳಲ್ಲಿ ಆವಾಹಿತವಾಗಿರುವ
ಕಲಶಗಳಲ್ಲಿ ಪೂರ್ವಾದಿದಿಕ್ಕಿನಿಂದಾರಂಭಿಸಿ ಉತ್ತರದಿಕ್ಕಿನಲ್ಲಿರುವ ಕಲಶಪರ್ಯಂತ
ಹೊರಗಿನಿಂದ ತೆಗೆದು ಅಭಿಷೇಕಿಸಿ, ನಂತರ ಮಧ್ಯದ ಕಲಶವನ್ನು ತೆಗೆದು
ಅಭಿಷೇಕಿಸಬೇಕು. ಹಾಗೆಯೇ ಪೂರ್ವದಳದ ಕಲಶಗಳನ್ನು ಪೂರ್ಣ ತೆಗೆದು
ಅಭಿಷೇಕಿಸಿದ ನಂತರ ದಕ್ಷಿಣದಿಕ್ಕಿನ ಕಲಶಗಳನ್ನು ಪೂರ್ವಾದಿಕ್ರಮದಿಂದ ತೆಗೆದು
ಅಭಿಷೇಕಿಸಬೇಕು. ನಂತರ ಪಶ್ಚಿಮ, ಕಡೆಗೆ ಉತ್ತರದಿಕ್ಕಿನ ಕಲಶಗಳನ್ನು ಬಾಹ್ಯಾದಿ
ಕ್ರಮದಿಂದ ತೆಗೆದು ಅಭಿಷೇಕಿಸಬೇಕು.
 
121
 
ಪಂಚಗವ್ಯಕಲಶದಲ್ಲಿ ಆವಾಹನೆ ಹಾಗೂ ಅಭಿಷೇಕಕ್ಕೆ ಮಂತ್ರಗಳನ್ನು ಮಧ್ಯದ
ಕಲಶದಂತೆಯೇ ನಡೆಸಬೇಕು. ಪ್ರತಿದಿಕ್ಕಿನಲ್ಲಿಯೂ ಒಂದು ಕಮಲದ ಕಲಶ-
ಗಳನ್ನು ಪೂರ್ವದಿಕ್ಕಿನಿಂದಾರಂಭಿಸಿ ಉತ್ತರದವರೆಗೂ ತೆಗೆದು ಅಭಿಷೇಕಿಸಬೇಕು.
ಹೀಗೆ ಪೂರ್ವದಿಕ್ಕಿನ ಕಮಲದ ಐದು ಕಲಶಗಳನ್ನು ತೆಗೆದು ಅಭಿಷೇಕವಾದ ಮೇಲೆ
ದಕ್ಷಿಣದಿಕ್ಕಿನಲ್ಲಿರುವ ಕಮಲದ ಕಲಶಗಳನ್ನು ತೆಗೆಯಬೇಕು.
 
ಪ್ರತಿಮಾಪೂಜೆ, ಬಲಿದಾನ, ಗುರುದಕ್ಷಿಣಾ
 

 
ಜಪ್ಪಾ ಪುನಶ್ಚ ತನ್ಮಂತ್ರಾನ್ ಪೂಜಯೇಚ್ಚ ವಿಧಾನತಃ ।
ದ್ವಾರಲೋಕಪತಿಭ್ಯಶ್ಚ ಬಲಿಂ ದತ್ವಾಯಥಾಕ್ರಮಮ್ ॥118॥
 
1. ವಿಶೇಷಾಂಶ
 
ಸಂಪ್ರೋಕ್ಷಣವಿಧಿಯಲ್ಲಿ ಹಾಗೂ ದೇವತಾಪ್ರತಿಷ್ಠಾಪನದಲ್ಲಿ ಪರಮ-
ಹಂಸಾಶ್ರಮಿಗಳಿಂದಲೇ ಅಭಿಷೇಕ ಮಾಡಿಸುವ ಪದ್ಧತಿಯಿದೆ. ಸಂಪ್ರೋಕ್ಷಣಾಭಿಷೇಕಶ್ಚ
 
ಯತಿಭೀರೇವ ಕಾರಯೇತ್ ॥
 
-
 
ಮಧ್ಯದ ಬ್ರಹ್ಮಕಲಶದಲ್ಲಿ ಆ ದೇವತೆಯನ್ನೇ ಆವಾಹಿಸಬೇಕು. ಪಂಚಗವ್ಯಕಲಶದಲ್ಲಿಯೂ
ಆವಾಹಿಸುವಾಗ ಹಾಗೂ ಅದರಿಂದ ಅಭಿಷೇಕಿಸುವಾಗಲೂ ಮಧ್ಯ ಬ್ರಹ್ಮಕಲಶದ ನಿಯಮವನ್ನೇ
ಸ್ವೀಕರಿಸಬೇಕು.
 
2. 'ಪಂಚಗವೇನ ಮಧ್ಯವತ್' ಎಂಬಲ್ಲಿ ಮಧ್ಯಮಬ್ರಹ್ಮಕಲಶದಲ್ಲಿ ಯಾವ ಭಗವದ್ರೂಪದ
ಆವಾಹನೆಯೋ ಅದೇ ರೂಪದ ಆವಾಹನೆ ಪಂಚಗವ್ಯದ ಕಲಶದಲ್ಲಿಯೂ ನಡೆಸಬೇಕು.
ಮಧ್ಯದ ಕಲಶದ ಆವಾಹನೆಯಲ್ಲಿ ಯಾವ ಮಂತ್ರವನ್ನು ಪಠಿಸಲಾಯಿತೋ ಅದೇ
ಮಂತ್ರವನ್ನೇ ಪಂಚಗವ್ಯಕಲಶದ ಆವಾಹನೆಯಲ್ಲಿಯೂ (())) ಪ್ರಣವ, ಮೂಲಮಂತ್ರ,
ಮೂರ್ತಿಮಂತ್ರ ಹಾಗೂ ಪುರುಷಸೂಕ್ತಗಳಿಂದಲೇ ಆವಾಹಿಸಬೇಕು. ಆಳ್ವಾರ್ಹಾದಿಗಳಿಂದ
ಅಲ್ಲ. ಅಭಿಷೇಕ ಮಾಡುವಾಗಲೂ ಸಹ ಮಧ್ಯಕಲಶದಲ್ಲಿ ಅಭಿಷೇಕಿಸಬಹುದಾದ ಪ್ರಣವಾದಿ
ಮಂತ್ರಗಳಿಂದ ಅಭಿಷೇಕಿಸಬೇಕು.