This page has been fully proofread once and needs a second look.

120
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪಠಿಸಬೇಕಾದ ವೈದಿಕಮಂತ್ರಗಳು
 
ತಾ

 
ತತ್ರಾऽ
ತ್ವಾಹಾರ್ಷಸೂಕ್ತಂ ಚ ಘರ್ಮಸೂಕ್ತಂ ಚ ವೈಷ್ಣವಮ್ ।

ಸೂಕ್ತಂ ಚ ವಿಶ್ವಕರ್ಮಿಮೀಯಂ ಪೌರುಷಂ ಸೂಕ್ತಮೇವ ಚ ॥114 ೧೧೪
 
ಅರ್ಥ -
 
-
 

 
ಜಪ್ಪಾತ್ವಾಚೈವ ನಿಜಂ ಮಂತ್ರಂ ಪುನರಷ್ಟಾಕ್ಷರಂ ಸುಧೀಃ ।

ಪ್ರಣವಂ ಚ ಜಪೇದ್ ವಿಷ್ಣುಂ ಧ್ಯಾಯನ್ ಉತ್ತಮರೂಪಿಣಮ್ ॥115೧೧೫

 
ಅರ್ಥ -
ಆವಾಹಿಸುವಾಗ ಆತ್ವಾಽಹಾರ್ಷಸೂಕ್ತ (ಋ 10/173)- ವನ್ನೂ,
'ಘರ್ಮಾ ಸಮಂತಾ ತ್ರಿವೃತಂ ವ್ಯಾಪತುತುಃ' ಇತ್ಯಾದಿ ಘರ್ಮಸೂಕ್ತವನ್ನೂ (10/-
114), 'ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ' ಎಂಬ
ವಿಷ್ಣುಸೂಕ್ತವನ್ನೂ (1/154), 'ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ' ಇತ್ಯಾದಿ
ವಿಶ್ವಕರ್ಮ ಸೂಕ್ತವನ್ನೂ (10/81), "'ಸಹಸ್ರಶೀರ್ಷಾ ಪುರುಷಃ' ಇತ್ಯಾದಿ

ಪುರುಷಸೂಕ್ತವನ್ನೂ (10/90) ಜಪಿಸುತ್ತಾ, ಸರ್ವದೇವೋತ್ತಮ- ನಾದ ವಿಷ್ಣುವನ್ನು
ಪ್ರತಿಮೆಯಲ್ಲಿ ಚಿಂತಿಸುತ್ತಾ, ಪ್ರತಿಷ್ಠಾಪಿಸಬೇ- ಕಾಗಿರುವ ಮೂರ್ತಿಯ ಮಂತ್ರವನ್ನೂ,
ಮೂಲಮಂತ್ರವನ್ನೂ, ಓಂಕಾರವನ್ನೂ ಜಪಿಸಬೇಕು. ಇದರಿಂದಾಗಿ ಪ್ರತಿಮೆಯಲ್ಲಿ

ವಿಶೇಷಸನ್ನಿಧಾನವುಂಟಾಗುತ್ತದೆ.
 

 
ಕಲಶಾಭಿಷೇಕಕ್ರಮ
 

 
ತತಸ್ತು ಕಲಶೈಃ ಬಾಹ್ಯಕ್ರಮೇಣೈವ ಜನಾರ್ದನಮ್ ।

ಸ್ನಾಪಯೇದ್ ಉಕ್ತಮಂತೈತ್ರೈಸ್ತು ಮಧ್ಯಮಂ ಪ್ರಣವೇನ ತು ॥116
 
೧೧೬ ॥
 
ಅಷ್ಟಾರ್ಣೇನ ನಿಜೇನಾಪಿ ತಥಾ ಪುರುಷಸೂಕ್ತತಃ ।

ಆವಾಹನಂ ಚ ಸ್ನಪನಂ ಪಂಚಗವ್ಯಸ್ಯ ಮಧ್ಯವತ್ ।

ಪೂರ್ವಾದ್ಯುತ್ತರಪರ್ಯಂತಃ ಕಲಶಕ್ರಮ ಉಚ್ಯತೇ ॥117
 
೧೧೭ ॥
 
ಅರ್ಥ -
 
-
 
ಪೀಠದಲ್ಲಿ ದೇವತಾಪ್ರತಿಮೆಯನ್ನು ಇಟ್ಟು ಸೂಕ್ತ, ಮಂತ್ರ ಜಪಾ-
ನಂತರ ಆವಾಹಿತಕಲಶಗಳನ್ನು ಮಂಡಲದ ಹೊರಭಾಗದಿಂದ ಪ್ರಾರಂಭಿಸಿ
ಕ್ರಮವಾಗಿ ತೆಗೆದು ಪುರುಷಸೂಕ್ತ, ಆಳ್ತ್ವಾಹಾರ್ಷ, ಘರ್ಮಸೂಕ್ತ, ವಿಷ್ಣುಸೂಕ್ತ,
ಹಿರಣ್ಯಗರ್ಭಸೂಕ್ತ, ಮೂಲಮಂತ್ರ, ಪ್ರಣವಾದಿಗಳಿಂದ ಪ್ರತಿಮೆಯನ್ನು