This page has not been fully proofread.

ತೃತೀಯೋsಧ್ಯಾಯಃ
 
ಧೈಯದೇವತೆಗಳು
 
ಪಂಚವಿಂಶತಿತತ್ವಾನಾಂ ದೇವತಾಸ್ತದನಂತರಮ್ ।
ಸ್ಥಾಪಯೇತ್ ಪ್ರತಿಮಾಮಧ್ಯೆ ಪರಿತಃ ಕೇಶವಸ್ಯ ತು ॥113॥
 
ಅರ್ಥ
 
ಪ್ರತಿಮೆಯ ಮಧ್ಯದಲ್ಲಿ ಸಾನ್ನಿಧ್ಯ ಹೊಂದಿದ ಭಗವಂತನ ಸುತ್ತಲೂ
ಇಪ್ಪತ್ತೈದು ತತ್ವಾಭಿಮಾನಿದೇವತೆಗಳ ಸಾನ್ನಿಧ್ಯವನ್ನು ಚಿಂತಿಸಬೇಕು.
 
-
 
ಅಲ್ಲಿ ಚಿದಾನಂದಘನನಾದ ಭಗವಂತನನ್ನು ಧ್ಯಾನಿಸುವುದು. ಅಥವಾ ವಿಷ್ಣು - ಲಕ್ಷ್ಮೀ -
ವಾಯುಪ್ರತಿಮೆಗಳಲ್ಲಿ ಪ್ರತಿಮಾಂತಃಸ್ಥಿತವಾದ ತೇಜಸಾರಮಯಶಜ್ಜಿತ ವಾಯುಪ್ರತಿಮೆ ಹಾಗೂ
ಲಕ್ಷ್ಮೀಪ್ರತಿಮೆ ಎಂದು ಎರಡು ಪ್ರತಿಮೆಗಳು. ಇದನ್ನೇ -
 
ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋಃ ತೇಜೋಮಯೀಂ ಸುಧೀಃ ।
ವಪುಶ್ಚತನ್ಮಧ್ಯೆ ಧ್ಯಾಯೇದ್
 
ವಿಷ್ಟೋ
 
ಎಂಬ ಪ್ರಮಾಣ ತಿಳಿಸುತ್ತದೆ.
 
119
 
ಭಗವಂತನಿಗೆ ಮುಖ್ಯ ಪ್ರತಿಮೆ ಲಕ್ಷ್ಮೀದೇವಿಯೇ ಆಗಿರುವಳು.
 
ಪ್ರತಿಮಾಧಿಕಸಾದೃಶ್ಯಾತ್ ಮುಖ್ಯಾ ವಿಷ್ಟೋಃ ಸದಾ ರಮಾ ।
 
ಇದರ ಹಿಂದಿನ ಅಭಿಪ್ರಾಯ ಹೀಗಿದೆ ವಿಷ್ಣು - ಲಕ್ಷ್ಮೀ - ವಾಯು ಪ್ರತಿಮಾಗಳಲ್ಲಿ
ವಾಯುಪ್ರತಿಮೆ, ಅದರಲ್ಲಿ ಲಕ್ಷ್ಮೀಪ್ರತಿಮೆ, ಅದರೊಳಗೆ ಶ್ರೀಹರಿ, ಹೀಗೆ ಹರಿಗೆ ಎರಡು
ಪ್ರತಿಮೆಗಳು.
 
-
 
ವಿಷ್ಣು, ಲಕ್ಷ್ಮೀ, ವಾಯುಪ್ರತಿಮೆಗಳನ್ನು ಹೊರತು ಇತರ ಶಿವಾದಿಪ್ರತಿಮೆಗಳಲ್ಲಿ ಎದುರಿಗೆ
ಇರುವ ಪ್ರತಿಮೆಗಳೊಳಗೆ ಶಿವಾದಿಪ್ರತೀಕ, ಅದರೊಳಗೆ ವಾಯುಪ್ರತಿಮೆ, ಅದರೊಳಗೆ
ಲಕ್ಷ್ಮೀಪ್ರತಿಮೆ ಅದರೊಳಗೆ ವಿಷ್ಣುವು. ಇದು ವಿಷ್ಣುವಿಗೆ ಗೋಲಕತ್ತಿತಯವೆಂದು ಹೇಳಲ್ಪಡುತ್ತದೆ.
ಭಗವಂತನ ಪ್ರತಿಮೆಯಾದರೆ ಎದುರಿಗೆ ಇರುವ ಪ್ರತಿಮೆ, ಅದರೊಳಗೆ ತೇಜಃಸಾರಮಯವಾದ
ಪ್ರತಿಮೆ ಹೀಗೆ ಗೋಲಕದ್ವಿತಯ. ಈ ಪ್ರತಿಮೆಯ ಮಧ್ಯದಲ್ಲಿ ನಾರಾಯಣನು
ರಮಾದೇವಿಯೊಂದಿಗೆ ಹಾಲು ನೀರು ಬೆರೆತಂತಿರುವ ಸ್ಥಿತಿಯೆಂದು ತಿಳಿಯಬೇಕು.
ಭಗವಂತನಿಂದ ಸಮವ್ಯಾಪ್ತಳಾದ ಲಕ್ಷ್ಮೀದೇವಿಗೆ ಗೋಲಕತ್ವ ಹಾಗೂ ಸಹಾಸೀನತ್ವವಿರುದ್ಧ-
ವಾಗುವುದಿಲ್ಲ.
 
1. ವಿಶೇಷಾಂಶ
 
-
 
ಭಗವಂತನ ಸಾನ್ನಿಧ್ಯಕ್ಕಾಗಿ ಪ್ರತಿಮೆಯ ಹೃದಯಾದಿಗಳನ್ನು ತುಲಸಿಯಿಂದ
ಸ್ಪರ್ಶಿಸುತ್ತಾ, ಪುರುಷಸೂಕ್ತ ಹಾಗೂ ತತ್ವಗಳ ನ್ಯಾಸ ಮಾಡಬೇಕು.
 
ಸಾನ್ನಿಧ್ಯಕರಣಾರ್ಥಾಯ ಹೃದಯಂ ಸ್ಪೃಶ್ಯ ದೈಶಿಕಃ ।
ಪೌರುಷಂ ತು ಜಪೇತ್ ಸೂಕ್ತಂ ಧ್ಯಾಯನ್ ದೇವಂ ಸುರೇಶ್ವರಮ್ ॥