This page has been fully proofread once and needs a second look.

ಬ್ರಹ್ಮರುದ್ರಾದಿವಂದಿತತ್ವ ಸಿದ್ಧವಾದ ಮೇಲೆ ಜಗದ್ವಂದ್ಯತ್ವವು ಸಿದ್ಧಿಸಿದಂತೆಯೇ. ಈ ಬ್ರಹ್ಮರುದ್ರಾದಿಗಳಿಗೂ ಸ್ವೇಚ್ಛಯಾ ಬ್ರಹ್ಮಾದಿಪದವಿಯನ್ನು ನೀಡುವ ಲಕ್ಷ್ಮೀದೇವಿಗೂ ನಿಯಾಮಕ- ನೆಂದು ಕಮಲಾಪತಿ ಎಂಬ ವಿಶೇಷಣ ಸೂಚಿಸುತ್ತದೆ.
 
ವಿಧಿಂ ವಿಧಾಯ ಸರ್ಗಾದೌ ತೇನ ಪೃಷ್ಟೋಽಬ್ಜಲೋಚನಃ ।
ಆಹ ದೇವೋ ರಮೋತ್ಸಂಗವಿಲಸತ್ ಪಾದಪಲ್ಲವಃ ॥ ೨ ॥
 
ಅ : ರಮಾದೇವಿಯ ಉತ್ಸಂಗದಲ್ಲಿ ತನ್ನ ಚಿಗುರಿನಂತಿರುವ ಪಾದಗಳನ್ನಿರಿಸಿದ ಶ್ರೀಮನ್ನಾರಾಯಣನು ಸೃಷ್ಟಿಯ ಮೊದಲು, ತನ್ನಿಂದ ಜನಿಸಿದ ಬ್ರಹ್ಮದೇವನು ಕೇಳಿದ ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡಿದನು.
 
ವ.ಟೀ - ಸರ್ಗಾದೌ = ಜಗದುತ್ಪತೇಃ ಪೂರ್ವಮ್, ವಿಧಿಂ = ಬ್ರಹ್ಮಾಣಂ, ರಮಾಯಾ ಉತ್ಸಂಗಃ ತಸ್ಮಿನ್ ವಿಲಸನ್ಪಾದಪಲ್ಲವಃ ಯಸ್ಯ ಸಃ । ತಥಾ ಸುಖೋಪವಿಷ್ಟಃ ವಿಷ್ಣು ವಿಧಿಮಾಹ ಇತ್ಯನೇನ ವಿಷ್ಣೋಃ ವಿಪ್ರಲಂಭಕತ್ವಾದಯೋ ದೋಷಾಃ ಪರಿಹೃತಾ ಭವತಿ ॥
 
ಟೀಕಾರ್ಥ - ಇಲ್ಲಿರುವ ಸರ್ಗಾದೌ ಎಂದರೆ ಈ ಜಗತ್ತನ್ನು ಸೃಷ್ಟಿ ಮಾಡುವ ಮೊದಲು ಎಂದರ್ಥ. ವಿಧಿಂ ಎಂದರೆ ಬ್ರಹ್ಮನನ್ನು ಎಂದರ್ಥ; 'ರಮಾದೇವಿಯ ತೊಡೆಯಲ್ಲಿರಿಸಿದ ಪಾದಕಮಲ- ಗಳನ್ನಿಟ್ಟು ಸುಖವಾಗಿದ್ದ ಭಗವಂತನು ಬ್ರಹ್ಮದೇವನಿಗೆ ಉತ್ತರಿ- ಸಿದನು' ಎಂಬುದರಿಂದ ವಕ್ತ್ರಾನುಕೂಲ್ಯಕ್ಕೆ ಆವಶ್ಯವೆನಿಸಿದ ಅವಿಪ್ರಲಂಭಕತ್ವಾದಿ ದೋಷಗಳಾವುವೂ ಇರುವುದಿಲ್ಲವಾದ್ದ- ರಿಂದ ವಕ್ತ್ರಾನುಕೂಲ್ಯಾದಿಗಳು ಲಭಿಸುತ್ತವೆ ಎಂದುತಿಳಿಯಬೇಕು.
[^1]
 
 
 
 
[^1]. ವಿಶೇಷಾಂಶ -"ಆಹ'' ಉತ್ತರಿಸಿದನು ಎಂಬುದರಿಂದ ವಕ್ತೃವಿಗೆ ಬೇಕಾದ ಹೇಳಬೇಕೆಂಬ ಇಚ್ಛೆಯು (ವಿವಕ್ಷಾ) ಇದೆಯೆಂದೂ, 'ದೇವಃ' ಎಂಬುದರಿಂದ ವಿವಕ್ಷಿತಾರ್ಥತತ್ತ್ವಜ್ಞಾನವೂ, ಕರಣ- ಪಾಟವವೂ ಇದೆಯೆಂದೂ ಸೂಚಿಸಿ ವಕ್ತ್ರಾನುಕೂಲ್ಯವಿದೆ-
ಯೆಂದು ತಿಳಿಸಲಾಗಿದೆ.
ವಿಧಯೇ ಬ್ರಹ್ಮನಿಗಾಗಿ ಎಂದದ್ದರಿಂದ ಬ್ರಹ್ಮದೇವನು ಅಧಿಕಾರಿ ಗಳಲ್ಲಿ ಉತ್ತಮನಾದ್ದರಿಂದ ತತ್ತ್ವಜ್ಞಾನಯೋಗ್ಯತೆಯೆಂಬ ಶ್ರೋತ್ರಾನುಕೂಲ್ಯವೂ ಸಿದ್ಧಿಸುತ್ತದೆ.
ಸರ್ಗಾದೌ ಎಂದದ್ದರಿಂದ ವಿರಿಂಚಿಯನ್ನು ಹೊರತು ಬೇರೆ ಪ್ರಪಂಚವೇ ಸೃಷ್ಟಿಯಾಗಿಲ್ಲವಾಗಿ, ಬ್ರಹ್ಮನು ಪುತ್ರನಾದ್ದರಿಂದ ವಕ್ತುಪ್ರೀತಿವಿಷಯತ್ವವೂ ಸೂಚಿತವಾಗಿದೆ.
ಪೃಷ್ಟ ಆಹ ಪ್ರಶ್ನಿಸಿದಾಗ ಉತ್ತರಿಸಿದನು ಎಂಬುದರಿಂದ ಪ್ರಸಂಗಾ ನುಕೂಲ್ಯವನ್ನು ತಿಳಿಸಿರುವರು. ಬ್ರಹ್ಮದೇವರು ಜ್ಞಾನಿಗಳಾದರೂ ವಿಶೇಷಜ್ಞಾನಕ್ಕಾಗಿ ಈ ಪ್ರಶ್ನೆಯಾಗಿದೆ.
ಜಾನಂತೋಪಿ ವಿಶೇಷಾರ್ಥಜ್ಞಾನಾಯ ಸ್ಥಾಪನಾಯ ಚ ।
ಪೃಚ್ಛಂತಿ ಸಾಧವೋ ಯಸ್ಮಾತ್ ತಸ್ಮಾತ್ ಪೃಚ್ಛಸಿ ಪಾರ್ಥಿವ !! (ಭಾ.ತಾ.)
 
-