This page has been fully proofread once and needs a second look.

ತೃತೀಯೋsಧ್ಯಾಯಃ
 
ಆವಾಹಿಸಬೇಕು.
 

 
ಇದಲ್ಲದೆ ಕಲಶಗಳನ್ನು ಸ್ಪರ್ಶಿಸಿಕೊಂಡು ಇಲ್ಲಿ ಹೇಳಿರುವ ಎಲ್ಲ ಅಷ್ಟಮಹಾ-
ಮಂತ್ರಗಳನ್ನೂ ಯಥಾಶಕ್ತಿ ಜಪಿಸಬೇಕು.
 

 
ಕಲಶಾಭಿಷೇಕಕ್ರಮ
 
117
 

 
ತತಸ್ತು ಪಂಚಘೋಷೈಶ್ಚ ವೇದಘೋಪೈಷೈಸ್ತಥಾssದರಾತ್ ।

ಆನೀಯ ಪ್ರತಿಮಾಂ ಸ್ನಾನಂ ಕಾರಯೇತ್ ಪ್ರಣವೇನ ತು ॥108
 
ಮಂತೈಃ
೧೦೮ ॥
 
ಮಂತ್ರೈಃ
ಪುರುಷಸೂಕ್ತಾಂತೈ:ತೈಃ ವಿಶ್ವತಶ್ಚಕ್ಷುಷಾ ತಥಾ ।
 

 
ಅರ್ಥ - ಕಲಶಸ್ಥಾಪನೆಯಾದ ನಂತರ ಪ್ರತಿಷ್ಠೆ ಮಾಡುವ ಪ್ರತಿಮೆಯನ್ನು
ಯನ್ನು ಪಂಚವಾದ್ಯಗಳೊಂದಿಗೆ ವೇದಜ್ಞರು ಭಕ್ತಿಯಿಂದ ವೇದ- ಘೋಷಮಾಡುತ್ತಿರು-
ವಂತೆಯೇ ಪ್ರತಿಮೆಯನ್ನು ಸ್ನಾನಮಂಟಪಕ್ಕೆ ತಂದು, ಪ್ರಣವಮಂತ್ರ, ಪುರುಷ-
ಸೂಕ್ತ, ವಿಶ್ವಕರ್ಮಸೂಕ್ತಗಳನ್ನು ಪಠಿಸುತ್ತಾ ಆವಾಹಿತಕಲಶೋದಕಗಳಿಂದ
ಅಭಿಷೇಕಿಸಬೇಕು".
 
[^1]
 
ನಂತರ ಅಷ್ಟಾಕ್ಷರಮಂತ್ರದಿಂದಲೂ, ಪ್ರಣವದಿಂದಲೂ ಅಷ್ಟ- ಗಂಧಗಳಿಂದ
ಪರಮಳಿತವಾದ ಗಂಧೋದಕಾದಿಗಳಿಂದಲೂ ಪ್ರತಿಮೆಯನ್ನು (ಗೆ?) ಅಭಿಷೇಕ
ಮಾಡಬೇಕು. ನಂತರ ಪ್ರತಿಮೆ- ಯನ್ನು ವಸ್ತ್ರದಿಂದ ಒರೆಸಿ ಗಂಧವನ್ನು ಹಚ್ಚಿ
ಪುಷ್ಪಾದಿಗಳಿಂದ ಚೆನ್ನಾಗಿ ಅಲಂಕರಿಸಬೇಕು. ನಂತರ ಪ್ರಣವಮಂತ್ರವನ್ನು

ಉಚ್ಚರಿಸುತ್ತಾ ಗರ್ಭಗೃಹದಲ್ಲಿ ಸ್ಥಾಪಿಸಬೇಕು.
 

 
[^
1]. ಅಭಿಷೇಕ - 'ವಿಶ್ವತಃ ಚಕ್ಷು' ಮಂತ್ರದಿಂದ ಪಂಚಗವ್ಯಾ- ಭಿಷೇಕಮಾಡಿ, ಆಶ್ತ್ವಾಹಾರ್ಷಸೂಕ್ತ
ಪಠಿಸುತ್ತಾ ವಿಶೇಷ ಕಲಶ- ಗಳಿಂದಲೂ ಅಭಿಷೇಕಿಸಬೇಕು. ಈ ಕಾಲದಲ್ಲಿ ವಿಷ್ಣು ಸೂಕ್ತ,

ಪುರುಷಸೂಕ್ತ ಪಠಿಸುತ್ತಾ, ಪುನಃ ಪವಮಾನಸೂಕ್ತದಿಂದ ಅಭಿಷೇಕಿಸಬೇಕು. ನಂತರ ಪೀಠವನ್ನು
ರಚಿಸಿ, ಬಿಂಬಶುದ್ಧಿಗಾಗಿ ಅರ್ಚಿಸಬೇಕು.
 

ಸೂರ್ಯಮಂಡಲದಲ್ಲಿರುವ ಭಗವಂತನನ್ನು ಕೈಯ್ಯಲ್ಲಿರುವ ಜಲಪಾತ್ರೆಯಲ್ಲಿ ಸವಿತೃಮಂಡಲ-
ದಿಂದ ಆವಾಹಿಸಿ ಬಿಂಬದಲ್ಲಿ ಸ್ಥಾಪಿಸಬೇಕು. ಈ ನೀರನ್ನು ಪುಷ್ಪಸಹಿತವಾಗಿ ಅಭಿಷೇಕಿಸಬೇಕು.

ಸೂರ್ಯಮಂಡಲಮಧ್ಯದಲ್ಲಿರುವ ಭಗವಂತನು ಪ್ರತಿಮೆಯ ಅಭಿಮುಖನಾಗಿರುವನೆಂದು
ಚಿಂತಿಸಿ, ಉಪಚಾರಪೂಜೆ ನೀಡಿ, ಪ್ರತಿಮೆಯಲ್ಲಿ ಬ್ರಹ್ಮರಂಧ್ರವನ್ನು ಚಿಂತಿಸಿ, ಆ ಮಾರ್ಗದಿಂದ

ಸಹಸ್ರಶೀರ್ಷಮಂತ್ರದಿಂದ ಹಾಗೂ ಮೂಲಮಂತ್ರದಿಂದ ಆವಾಹಿಸಬೇಕು.