This page has been fully proofread once and needs a second look.

(116
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
(1) ದರ್ಭ
) ದರ್ಭೆ ಮಿಶ್ರಿತನೀರು;

(2) ಪಚ್ಚಕರ್ಪೂರಮಿಶ್ರಿತ ಜಲ;
(3) ಕೇಸರೀಮಿಶ್ರಿತನೀರು;
 
(2) ಪಚ್ಚಕರ್ಪೂರಮಿಶ್ರಿತ ಜಲ;

(4) ಗಂಧಮಿಶ್ರಿತಜಲ;

(5) ಹಿಮಕರಗಿದ ನೀರು;
(6) ಅರಿಷಿಣಬೆರತಜಲ;

(7) ಲಾವಂಚ ಬೆರತಜಲ;
(8) ಕಂಕುಷ್ಠಬೆರೆತ ಜಲ;

(9) ಕೃಷ್ಣಾಗರು ಬೆರತಜಲ;
(10) ನದೀಸಂಗಮಜಲ;

(11) ತಡಾಗೋದಕ;
(12) ಕೂಪೋದಕ;
(13)ಝರಿಯ ನೀರು.
 

 
ಕಲಶಗಳಲ್ಲಿ ಆವಾಹಿಸಬೇಕಾದ ಮೂರ್ತಿಗಳು
 

 
ಚತುರ್ವಿಂಶತಿಮೂರ್ತಿತೀನಾಂ ವರ್ಣಮೂರ್ತಿಃತೀಃ ತಥಾಪರಾಃ।

ಆವಾಹಯೇತ್ ಶತಪ್ಪೇತ್ವೇ ತು ಕ್ರಮವ್ಯುತ್ಕ್ರಮತಸ್ತು ತಾಃ ॥106 ೧೦೬
 

 
ವರ್ಣಮೂರ್ತಿ:ತಿಃ ಪುನಶ್ಚಿಚೈವ ದ್ವಿಚತುರ್ವಾರಮೇವ ಚ ।

ಸಹಸ್ರಕಲಶಾದಿತೇತ್ವೇ ಜಪೇನ್ ಮಂತ್ರಾಂಶ್ಚ ಶಕ್ತಿತಃ
 
1110711
 
w
 
॥ ೧೦೭ ॥
 
ಅರ್ಥ - ಇಪ್ಪತ್ತೈದು ಕಲಶಗಳನ್ನಿಡುವುದಾದರೆ ಇಪ್ಪತ್ತನಾಲ್ಕು ಕಲಶಗಳಲ್ಲಿ
ಕೇಶವಾದಿ ಚತುರ್ವಿಂಶತಿರೂಪಗಳನ್ನು ಕೇಶವಾಯ ನಮಃ ಕೇಶವಂ ತರ್ಪಯಾಮಿ
ಎಂದು ಆವಾಹಿಸಬೇಕು. ಐವತ್ತು ಕಲಶಗಳಾದರೆ ಮಾತೃಕಾನ್ಯಾಸಪ್ರತಿಪಾದ್ಯ ಐವತ್ತು
ವರ್ಣಗಳ ದೇವತಾಮೂರ್ತಿಯನ್ನು ಆವಾಹಿಸುವುದು, ನೂರು ಕಲಶಗಳಾ- ದರೆ
ಕೇಶವಾದಿ 24, ಅಜಾದಿ 51, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ,
ವಾಸುದೇವಾದಿ ನಾಲ್ಕು ರೂಪಗಳು, ವಿಶ್ವಾದಿ ನಾಲ್ಕು ರೂಪಗಳು, ಮತ್ಸ್ಯಾದಿ ಹತ್ತು
ರೂಪಗಳು, ವೇದವ್ಯಾಸ, ದತ್ತಾತ್ರೇಯ, ಶಿಂಶುಮಾರ ಹೀಗೆ ದೇವತಾರ್ಚನೆಯ
ಕಲಶಪೂಜೆ- ಯಲ್ಲಿ ಹೇಳಿದ ನೂರು ಮೂರ್ತಿಗಳನ್ನು ಆವಾಹಿಸಬೇಕು.
 

 
ಇನ್ನೂರ ಐವತ್ತು ಕಲಶಗಳನ್ನು ಇಡುವುದಾದರೆ ಮೇಲೆ ಹೇಳಿದಂತೆ ನೂರು
 
ಮೂರ್ತಿಗಳು ಹಾಗೂ ಶಿಂಶುಮಾರಾದಿ ಅಜಾದಿಪರ್ಯಂತ ಹಿಂದಿನಿಂದ ನೂರು
ಮೂರ್ತಿಗಳನ್ನು, ಪುನಃ ಅಜಾದಿ ಕಾಳಾಳುಕಾಯ ಐವತ್ತು ಮಾತೃಕಾನ್ಯಾಸಮೂರ್ತಿ-
ಗಳು ಹೀಗೆ ಇನ್ನೂರೈವತ್ತು ರೂಪಗಳು.
 

 
ಐನೂರು ಕಲಶಗಳಾದರೆ ಮೇಲೆ ಹೇಳಿದ ಇನ್ನೂರೈವತ್ತು ಮೂರ್ತಿಗಳನ್ನೇ
ಎರಡು ಬಾರಿ ಆವಾಹಿಸುವುದು. ಸಾವಿರಕಲಶ- ಗಳನ್ನಿಡುವುದಾದರೆ ನಾಲ್ಕು ಬಾರಿ