This page has not been fully proofread.

116
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
(1) ದರ್ಭ ಮಿಶ್ರಿತನೀರು;
(3) ಕೇಸರೀಮಿಶ್ರಿತನೀರು;
 
(2) ಪಚ್ಚಕರ್ಪೂರಮಿಶ್ರಿತ ಜಲ;
(4) ಗಂಧಮಿಶ್ರಿತಜಲ;
(5) ಹಿಮಕರಗಿದ ನೀರು; (6) ಅರಿಷಿಣಬೆರತಜಲ;
(7) ಲಾವಂಚ ಬೆರತಜಲ; (8) ಕಂಕುಷ್ಠಬೆರೆತ ಜಲ;
(9) ಕೃಷ್ಣಾಗರು ಬೆರತಜಲ; (10) ನದೀಸಂಗಮಜಲ;
(11) ತಡಾಗೋದಕ; (12) ಕೂಪೋದಕ; (13)ಝರಿಯ ನೀರು.
 
ಕಲಶಗಳಲ್ಲಿ ಆವಾಹಿಸಬೇಕಾದ ಮೂರ್ತಿಗಳು
 
ಚತುರ್ವಿಂಶತಿಮೂರ್ತಿನಾಂ ವರ್ಣಮೂರ್ತಿಃ ತಥಾಪರಾಃ।
ಆವಾಹಯೇತ್ ಶತಪ್ಪೇ ತು ಕ್ರಮವ್ಯಮತಸ್ತು ತಾಃ ॥106॥
 
ವರ್ಣಮೂರ್ತಿ: ಪುನಶ್ಚಿವ ದ್ವಿಚತುರ್ವಾರಮೇವ ಚ ।
ಸಹಸ್ರಕಲಶಾದಿತೇ ಜಪೇನ್ ಮಂತ್ರಾಂಶ್ಚ ಶಕ್ತಿತಃ
 
1110711
 
w
 
ಅರ್ಥ - ಇಪ್ಪತ್ತೈದು ಕಲಶಗಳನ್ನಿಡುವುದಾದರೆ ಇಪ್ಪತ್ತನಾಲ್ಕು ಕಲಶಗಳಲ್ಲಿ
ಕೇಶವಾದಿ ಚತುರ್ವಿಂಶತಿರೂಪಗಳನ್ನು ಕೇಶವಾಯ ನಮಃ ಕೇಶವಂ ತರ್ಪಯಾಮಿ
ಎಂದು ಆವಾಹಿಸಬೇಕು. ಐವತ್ತು ಕಲಶಗಳಾದರೆ ಮಾತೃಕಾನ್ಯಾಸಪ್ರತಿಪಾದ್ಯ ಐವತ್ತು
ವರ್ಣಗಳ ದೇವತಾಮೂರ್ತಿಯನ್ನು ಆವಾಹಿಸುವುದು, ನೂರು ಕಲಶಗಳಾದರೆ
ಕೇಶವಾದಿ 24, ಅಜಾದಿ 51, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ,
ವಾಸುದೇವಾದಿ ನಾಲ್ಕು ರೂಪಗಳು, ವಿಶ್ವಾದಿ ನಾಲ್ಕು ರೂಪಗಳು, ಮತ್ಯಾದಿ ಹತ್ತು
ರೂಪಗಳು, ವೇದವ್ಯಾಸ, ದತ್ತಾತ್ರೇಯ, ಶಿಂಶುಮಾರ ಹೀಗೆ ದೇವತಾರ್ಚನೆಯ
ಕಲಶಪೂಜೆಯಲ್ಲಿ ಹೇಳಿದ ನೂರು ಮೂರ್ತಿಗಳನ್ನು ಆವಾಹಿಸಬೇಕು.
 
ಇನ್ನೂರ ಐವತ್ತು ಕಲಶಗಳನ್ನು ಇಡುವುದಾದರೆ ಮೇಲೆ ಹೇಳಿದಂತೆ ನೂರು
 
ಮೂರ್ತಿಗಳು ಹಾಗೂ ಶಿಂಶುಮಾರಾದಿ ಅಜಾದಿಪರ್ಯಂತ ಹಿಂದಿನಿಂದ ನೂರು
ಮೂರ್ತಿಗಳನ್ನು, ಪುನಃ ಅಜಾದಿ ಕಾಳುಕಾಯ ಐವತ್ತು ಮಾತೃಕಾನ್ಯಾಸಮೂರ್ತಿ-
ಗಳು ಹೀಗೆ ಇನ್ನೂರೈವತ್ತು ರೂಪಗಳು.
 
ಐನೂರು ಕಲಶಗಳಾದರೆ ಮೇಲೆ ಹೇಳಿದ ಇನ್ನೂರೈವತ್ತು ಮೂರ್ತಿಗಳನ್ನೇ
ಎರಡು ಬಾರಿ ಆವಾಹಿಸುವುದು. ಸಾವಿರಕಲಶಗಳನ್ನಿಡುವುದಾದರೆ ನಾಲ್ಕು ಬಾರಿ