This page has been fully proofread once and needs a second look.

ತೃತೀಯೋsಧ್ಯಾಯಃ
 
ಅಷ್ಟದಿಕ್ಷು ಅಷ್ಟಪದೇದ್ಮೇಷು ಪಂಚಕಂ ಪಂಚಕಂ ನ್ಯಸೇತ್ ।
 

ಅನೇನ ಕ್ರಮಯೋಗೇನ ಕಲಶಾ ಅಖಿಲಾ ಅಪಿ 1110211
 
॥ ೧೦೨ ॥
 
ತತ್ತದ್ ದ್ರವ್ಯಮಯಾಃ ತತ್ರ ತತ್ರ ಸ್ಥಾಪ್ಯಾಸ್ತು ಬಾಹ್ಯತಃ ।

ತದೈವಾಂಕುರ ಪಾತ್ರಾಣಿ ಪರಿತಃ ತತ್ರ ವಿನ್ಯಸೇತ್
 
10311
 
115
 
-
 
೧೦೩ ॥
 
ಅರ್ಥ - ಐವತ್ತು ಕಲಶಗಳನ್ನು ಸ್ಥಾಪಿಸುವುದಾದರೆ ಭದ್ರಕಾದಿ ಮಂಡಲದ
ಮಧ್ಯದಲ್ಲಿರುವ ಎಂಟು ದಳ ಕಮಲಗಳಲ್ಲಿ ಎಂಟು ಕಲಶ. ಮಧ್ಯ ಕಲಶಗಳ
ಸುತ್ತಲೂ ಎಂಟು ದಿಕ್ಕುಗಳಲ್ಲಿಯೂ ನಾಲ್ಕು ದಳದ ಎಂಟು ಪದ್ಮಗಳನ್ನು ಬರೆದು,
ಅದರಲ್ಲಿ ನಾಲ್ಕು ದಳಗಳಲ್ಲಿ ನಾಲ್ಕು ಕಲಶಗಳು ಮಧ್ಯದಲ್ಲಿ ಒಂದರಂತೆ ಹೀಗೆ

ಐದೈದರಂತೆ ಒಟ್ಟು ನಲವತ್ತು ಕಲಶಗಳು. ಅಷ್ಟದಳದ ಕಮಲ- ದಲ್ಲಿ ಎಂಟು
ಗಂಧೋದಕ ಕಲಶಗಳು. ಗಂಧೋದಕದ ಎಂಟು ಕಲಶಗಳ ಮಧ್ಯದಲ್ಲಿ ಬ್ರಹ್ಮ
ಕಲಶ. ಇದರ ಮುಂದೆ ಪೂರ್ವಭಾಗ ದಲ್ಲಿ ರುದ್ರದೇವತಾಕವಾದ ಅಥವಾ
ಸರ್ವದೇವತಾಕವಾದ ಇನ್ನೊಂದು ಕಲಶ. ಹೀಗೆ 40+8+2 = 50. ಪೂರ್ವ ದಿಕ್ಕಿನ
ಕಲಶದ ದ್ರವ್ಯವೇ ಅದರ ಪಕ್ಕದ ಆಗೇಗ್ನೇಯಾದಿ ದಿಕ್ಕಿನ ದ್ರವ್ಯಗಳಾಗುತ್ತವೆ.

ಅಂಕುರಾರ್ಪಣದ ಶರಾವಗಳನ್ನು ಇವುಗಳ ಸುತ್ತಲೂ ಇಡಬೇಕು.
 

 
ವಿಶೇಷಕಲಶಗಳು
 

 
ಕುಶೋದಕಂ ಚ ಕಾರ್ಪೂರಂ ಕುಂಕುಮಂ ಚಂದನಂ ತಥಾ ।

ತುಹಿನೋದಂ ಹರಿದ್ರೋದಮ್ ಔಶೀರಂ ಕೋಷ್ಠಸಾರ್ವಕಮ್ I1041
 
॥ ೧೦೪ ॥
 
ನದೀಸಂಗಮಜಂ ಚೈವ ತಾಡಾಗಂ ಕೌಪ್ಯಮೇವ ವಾ ।

ನಿರ್ಝರೋದಮಿತಿ ಪ್ರೋಕ್ತಾ ವಿಶೇಷಕಲಶಾಸ್ತ್ರಿವಿಮೇ ।

ಶುದ್ಧೋದದ್ವಯಮಪ್ಯೇತನ್ ಮಹಾತೀರ್ಥಸಮುದ್ಭವಮ್ ॥105
 
೧೦೫ ॥
 
ಅರ್ಥ - ಮೇಲೆ ಹೇಳಿದ ಎಲ್ಲಾ ಕಲಶಸ್ಥಾಪನೆಯ ಪಕ್ಷದಲ್ಲಿಯೂ

ಹದಿಮೂರು ಕಲಶಗಳನ್ನು ಇಡಬೇಕು. ಇವುಗಳ ನಂತರ ಅಂಕುರ ಪಾತ್ರೆಗಳನ್ನಿಡ
ಬೇಕು. ಈ ವಿಶೇಷಕಲಶಗಳಲ್ಲಿ ತುಂಬಿಸಬೇಕಾದ ನೀರು ಮಹಾತೀರ್ಥಗಳಿಂದ
ತಂದದ್ದಾಗಿದ್ದು, ಈ ಕೆಳಗಿನ ಔಷಧಿಗಳು ಮಿಶ್ರಿತವಾಗಿರಬೇಕು.