This page has been fully proofread once and needs a second look.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಸುತ್ತಲೂ ಇಡುವ ಕಲಶಗಳಲ್ಲಿ ಕಷಾಯ, ಪಂಚಾಮೃತ, ಪಂಚಗವ್ಯ,
ಶುದ್ಧಜಲಗಳನ್ನು ತುಂಬಿಸಿ ಇಡಬೇಕು. ಮಧ್ಯದ ಕಲಶವನ್ನು ಶುದ್ಧೋದಕದಿಂದಲೇ
 
ತುಂಬಿಸಬೇಕು.
 
114
 

 
ಬ್ರಾಹ್ಮಸೋಸ್ಯೈವ ಚತುರ್ದಿಕ್ಷು ಗಂಧೋದಾನಾಂ ಚತುಷ್ಟಯಮ್ ॥98೯೮
 

 
ಚತುರ್ದಲೇ ಸಿತೇ ಪದ್ಮಚತುಷ್ಕೇ ಮಂಡಲೇ ಸ್ಥಿತೇ ।

ಪೂರ್ವಾದಿಕ್ರಮಯೋಗೇನ ರಸಕ್ಷಾಥಶುಭೋದಕಾನ್ 99
 
೯೯ ॥
 
ಗಂಧಾಂಶ್ಚ ಸ್ಥಾಪಯೇತ್ ಪಂಚಗವ್ಯಂ ಶುದ್ದಾಂಧಾಂತರೇ ನ್ಯಸೇತ್ ।

ಪೃಥಕ್ ಚತುರ್ದಲಂ ಪದಂದ್ಮಂ ರಕ್ತಂ ಕೃತ್ವಾಽಲ್ಪಕಂ ಸುಧೀಃ II100
 
೧೦೦ ॥
 
ಅರ್ಥ- ನಾಲ್ಕು ದಿಕ್ಕಿನ ಕಲಶಗಳ ಮಧ್ಯಕಲಶವೇ ಬ್ರಹ್ಮಕಲಶ. ಇದರ
ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಲಾವಂಚ, ಕೇಸರೀ, ಜಟಾಮಾಂಸೀ, ಗಂಧ,
ಪಚ್ಚಕರ್ಪೂರ ಮೊದಲಾದವುಗಳ ಮಿಶ್ರಣದಿಂದಾದ ಗಂಧೋದಕದ ಕಲಶಗಳು.
ಮಧ್ಯದಲ್ಲಿ ಶುದ್ಧೋದಕಕಲಶ. ಹೀಗೆ ಒಟ್ಟು ಐದು ಕಲಶಗಳು.
 

 
ಚಕ್ರಾಬ್ ಅಥವಾ ಭದ್ರಕಮಂಡಲದ ವೀಥಿಯಲ್ಲಿ ನಾಲ್ಕು ದಳದ ಪದ್ಮ
ಬರೆಯಬೇಕು. ಈ ಪದ್ಮದ ಮಧ್ಯದಲ್ಲಿ ಒಂದು ಕಲಶ, ಹಾಗೂ ನಾಲ್ಕು ದಳಗಳಲ್ಲಿ
ಒಂದೊಂದು ಕಲಶ ಹೀಗೆ ಐದು. ಇದೇ ರೀತಿಯ ಉಳಿದ ವೀಥಿಗಳಲ್ಲಿಯೂ
ಐದೈದು ಕಲಶವಿಡ- ಬೇಕು. ಮಧ್ಯದಲ್ಲಿ ಐದು ಇಪ್ಪತ್ತೈದುಕಲಶಗಳಾದವು. ಪೂರ್ವದ

ಚತುರ್ದಲಕಮಲದಲ್ಲಿರುವ ಪಂಚಕಲಶಗಳಲ್ಲೂ ಪಂಚಾಮೃತ ವನ್ನೂ, ದಕ್ಷಿಣ
ದಿಕ್ಕಿನಲ್ಲಿರುವ ಕಲಶಗಳಲ್ಲಿ ಸ್ಕ್ವಾಥೋದಕ, ಪಶ್ಚಿಮದ ಐದು ಕಲಶಗಳಲ್ಲಿ
ಶುದ್ಧೋದಕ, ಉತ್ತರದಿಕ್ಕಿನ ಐದು ಕಲಶಗಳಲ್ಲಿ ಗಂಧೋದಕ, ಪಶ್ಚಿಮದಿಕ್ಕಿನ
ಶುದ್ಧೋದಕಕಲಶಗಳ ಮತ್ತು ಬ್ರಹ್ಮಕಲಶದ ಮಧ್ಯದಲ್ಲಿ ರಕ್ತವರ್ಣದ ಚಿಕ್ಕ ಪದ್ಮ

ಬರೆದು ಅಲ್ಲಿ ಪಂಚಗವ್ಯದ ಮತ್ತೊಂದು ಕಲಶವನ್ನಿಡಬೇಕು.
 

 
ಕಲಶಸ್ಥಾಪನಾಕ್ರಮ
 

 
ಪಂಚಾಶತ್ವೇ ತು ಗಂಧೋದಂ ಸರ್ವಮಧ್ಯೆಯೇ ನಿಧಾಪಯೇತ್ ।

ಬ್ರಾಹ್ಮಸ್ಯ ಪುರತಸ್ತ್ವೇಕಂ ಶಾರ್ವಂ ಸಂಸ್ಥಾಪಯೇದ್ ಬೃಹತ್ II101 ೧೦೧