This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಸುತ್ತಲೂ ಇಡುವ ಕಲಶಗಳಲ್ಲಿ ಕಷಾಯ, ಪಂಚಾಮೃತ, ಪಂಚಗವ್ಯ,
ಶುದ್ಧಜಲಗಳನ್ನು ತುಂಬಿಸಿ ಇಡಬೇಕು. ಮಧ್ಯದ ಕಲಶವನ್ನು ಶುದ್ಧೋದಕದಿಂದಲೇ
 
ತುಂಬಿಸಬೇಕು.
 
114
 
ಬ್ರಾಹ್ಮಸೋವ ಚತುರ್ದಿಕ್ಷು ಗಂಧೋದಾನಾಂ ಚತುಷ್ಟಯಮ್ ॥98॥
 
ಚತುರ್ದಲೇ ಸಿತೇ ಪದಚತುಷ್ಕ ಮಂಡಲೇ ಸ್ಥಿತೇ ।
ಪೂರ್ವಾದಿಕ್ರಮಯೋಗೇನ ರಸಕ್ಷಾಥಶುಭೋದಕಾನ್ 99॥
 
ಗಂಧಾಂಶ್ಚ ಸ್ಥಾಪಯೇತ್ ಪಂಚಗವ್ಯಂ ಶುದ್ದಾಂತರೇ ನ್ಯಸೇತ್ ।
ಪೃಥಕ್ ಚತುರ್ದಲಂ ಪದಂ ರಕ್ತಂ ಕೃತ್ವಾಽಲ್ಪಕಂ ಸುಧೀಃ II100
 
ಅರ್ಥ ನಾಲ್ಕು ದಿಕ್ಕಿನ ಕಲಶಗಳ ಮಧ್ಯಕಲಶವೇ ಬ್ರಹ್ಮಕಲಶ. ಇದರ
ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಲಾವಂಚ, ಕೇಸರೀ, ಜಟಾಮಾಂಸೀ, ಗಂಧ,
ಪಚ್ಚಕರ್ಪೂರ ಮೊದಲಾದವುಗಳ ಮಿಶ್ರಣದಿಂದಾದ ಗಂಧೋದಕದ ಕಲಶಗಳು.
ಮಧ್ಯದಲ್ಲಿ ಶುದ್ಧೋದಕಕಲಶ. ಹೀಗೆ ಒಟ್ಟು ಐದು ಕಲಶಗಳು.
 
ಚಕ್ರಾಬ್ಬ ಅಥವಾ ಭದ್ರಕಮಂಡಲದ ವೀಥಿಯಲ್ಲಿ ನಾಲ್ಕು ದಳದ ಪದ್ಮ
ಬರೆಯಬೇಕು. ಈ ಪದ್ಮದ ಮಧ್ಯದಲ್ಲಿ ಒಂದು ಕಲಶ, ಹಾಗೂ ನಾಲ್ಕು ದಳಗಳಲ್ಲಿ
ಒಂದೊಂದು ಕಲಶ ಹೀಗೆ ಐದು. ಇದೇ ರೀತಿಯ ಉಳಿದ ವೀಥಿಗಳಲ್ಲಿಯೂ
ಐದೈದು ಕಲಶವಿಡಬೇಕು. ಮಧ್ಯದಲ್ಲಿ ಐದು ಇಪ್ಪತ್ತೈದುಕಲಶಗಳಾದವು. ಪೂರ್ವದ
ಚತುರ್ದಲಕಮಲದಲ್ಲಿರುವ ಪಂಚಕಲಶಗಳಲ್ಲೂ ಪಂಚಾಮೃತವನ್ನೂ, ದಕ್ಷಿಣ
ದಿಕ್ಕಿನಲ್ಲಿರುವ ಕಲಶಗಳಲ್ಲಿ ಸ್ವಾಥೋದಕ, ಪಶ್ಚಿಮದ ಐದು ಕಲಶಗಳಲ್ಲಿ
ಶುದ್ಧೋದಕ, ಉತ್ತರದಿಕ್ಕಿನ ಐದು ಕಲಶಗಳಲ್ಲಿ ಗಂಧೋದಕ, ಪಶ್ಚಿಮದಿಕ್ಕಿನ
ಶುದ್ಧೋದಕಕಲಶಗಳ ಮತ್ತು ಬ್ರಹ್ಮಕಲಶದ ಮಧ್ಯದಲ್ಲಿ ರಕ್ತವರ್ಣದ ಚಿಕ್ಕ ಪದ್ಮ
ಬರೆದು ಅಲ್ಲಿ ಪಂಚಗವ್ಯದ ಮತ್ತೊಂದು ಕಲಶವನ್ನಿಡಬೇಕು.
 
ಕಲಶಸ್ಥಾಪನಾಕ್ರಮ
 
ಪಂಚಾಶತ್ವ ತು ಗಂಧೋದಂ ಸರ್ವಮಧ್ಯೆ ನಿಧಾಪಯೇತ್ ।
ಬ್ರಾಹ್ಮಸ್ಯ ಪುರತಕಂ ಶಾರ್ವಂ ಸಂಸ್ಥಾಪಯೇದ್ ಬೃಹತ್ II101॥