This page has been fully proofread once and needs a second look.

ಕಲಶಮಂಡಲಗಳು- ಚಕ್ರಾಬ್ಜ ಅಥವಾ ಭದ್ರಕ
 
ಚಕ್ರಾಬ್ಜಂ ಭದ್ರಕಂ ವಾऽಪಿ ಮಂಟಪೇ ಮಂಡಲಂ ಶುಭಮ್ ।
ಪದ್ಮಂ ವೃತ್ತತ್ರಯಂ ಚಕ್ರಂ ರಾಶಯೋ ವೀಥಿಕಾ ತಥಾ ॥ ೯೪ ॥
 
ಶೋಭೋಪಶೋಭಿಕಾಶ್ಚೈವ ಚಕ್ರಾಬ್ಜಸ್ಯ ತು ಲಕ್ಷಣಮ್ ।
ಚತುರಸ್ರಂ ವಿನಾ ಚಕ್ರಂ ವಿಶೇಷೋ ಭದ್ರಕೇ ಸ್ಮೃತಃ ॥ ೯೫ ॥
 
ಅರ್ಥ - ಕಲಶಮಂಟಪದಲ್ಲಿ ಚಕ್ರಾಬ್ಜಮಂಡಲವನ್ನಾಗಲೀ, ಭದ್ರಕಮಂಟಪವನ್ನಾಗಲೀ ರಚಿಸಬೇಕು. ಚಕ್ರಾಬ್ಜವೆಂದರೆ ಒಳಗಡೆ ಎಂಟುದಳಕಮಲ, ಅದರ ಹೊರಗೆ ಮೂರು ವೃತ್ತಗಳು, ಚಕ್ರ, ಹನ್ನೆರಡು ರಾಶಿಗಳು, ವೀಥಿ, ಶೋಭೆ ಹಾಗೂ ಉಪಶೋಭೆ- ಗಳು ಕ್ರಮವಾಗಿ ಇರುವ ಮಂಡಲವು.
 
ವೃತ್ತಗಳಿರುವ ಬದಲು ಚತುರಸ್ರವಿದ್ದರೆ ಚಕ್ರರಹಿತವಾದ ಮಂಡಲವೇ ಭದ್ರಕ ಮಂಡಲ.
 
ಕಲಶಸಂಖ್ಯೆಗಳು
 
ಸಹಸ್ರಮರ್ಧ೦ಧಂ ಪಾದಂ ವಾ ಕಲಶಾಂಸ್ತತ್ರ ಪೂಜಯೇತ್ ।
ಶತಂ ತದರ್ಧಂ ಪಾದಂ ವಾ ವಿತ್ತಾಭಾವೇ ನಿಗದ್ಯತೇ ॥ ೯೬ ॥
 
ಅರ್ಥ - ಈ ಮಂಡಲದಲ್ಲಿ ಸಾವಿರಕಲಶ, ಐನೂರು, ಇನ್ನೂರೈ- ವತ್ತು ಕಲಶಗಳನ್ನಾಗಲೀ ಇಡಬಹುದು. ಇಷ್ಟು ಸಂಖ್ಯೆಯ ಕಲಶ ಗಳನ್ನಿಡಲು ಅನಾನುಕೂಲವುಳ್ಳವರು ನೂರು, ಐವತ್ತು, ಇಪ್ಪತ್ತೈದನ್ನಾಗಲೀ ಇಡಬಹುದು.
 
ಕಲಶದಲ್ಲಿರಬೇಕಾದ ದ್ರವ್ಯಗಳು
 
ಕ್ವಾಥೇನ ಕ್ಷೀರವೃಕ್ಷಾಣಾಂ ತಥಾ ಪಂಚಾಮೃತೈರಪಿ ।
ಪಂಚಗವ್ಯೇನ ಶುದ್ಧೇನ ಜಲೇನ ಚ ಪೃಥಕ್ ಪೃಥಕ್ ॥ ೯೭ ॥
 
ಪೂರಯೇತ್ ಕಲಶಾನ್ ಮಧ್ಯಂ ಶುದ್ಧೋದೇನೈವ ಪೂರಯೇತ್ ।
 
ಅರ್ಥ- ಅತ್ತಿಮೊದಲಾದ ಕ್ಷೀರವೃಕ್ಷಗಳ ತೊಗಟೆಯ ಕಷಾಯ, ಪಂಚಾಮೃತ, ಪಂಚಗವ್ಯ, ಶುದ್ಧವಾದ ಜಲ ಇವುಗಳು ಕಲಶ- ದಲ್ಲಿರಬೇಕಾದ ದ್ರವ್ಯಗಳು.
 
 
 
-