This page has not been fully proofread.

ತೃತೀಯೋsಧ್ಯಾಯಃ
 
ಕಲಶಮಂಡಲಗಳು- ಚಕ್ರಾಬ್ಬ ಅಥವಾ ಭದ್ರಕ
 
ಚಕ್ರಾಬ್ದಂ ಭದ್ರಕಂ ವಾಹಪಿ ಮಂಟಪೇ ಮಂಡಲಂ ಶುಭಮ್ ।
ಪದ್ಧಂ ವೃತ್ತತ್ರಯಂ ಚಕ್ರಂ ರಾಶಯೋ ವೀಥಿಕಾ ತಥಾ ॥94
 
ಶೋಭೋಪಶೋಭಿಕಾಶೈವ ಚಕ್ರಾಬಸ್ಯ ತು ಲಕ್ಷಣಮ್ ।
ಚತುರಸ್ರಂ ವಿನಾ ಚಕ್ರಂ ವಿಶೇಷ ಭದ್ರಕೇ ಸ್ಮೃತಃ 195॥
 
ಅರ್ಥ - ಕಲಶಮಂಟಪದಲ್ಲಿ ಚಕ್ರಾಮಂಡಲವನ್ನಾಗಲೀ, ಭದ್ರಕಮಂಟಪ-
ವನ್ನಾಗಲೀ ರಚಿಸಬೇಕು. ಚಕ್ರಾಬ್ಬವೆಂದರೆ ಒಳಗಡೆ ಎಂಟುದಳಕಮಲ, ಅದರ
ಹೊರಗೆ ಮೂರು ವೃತ್ತಗಳು, ಚಕ್ರ, ಹನ್ನೆರಡು ರಾಶಿಗಳು, ವೀಥಿ, ಶೋಭೆ
ಹಾಗೂ ಉಪಶೋಭೆಗಳು ಕ್ರಮವಾಗಿ ಇರುವ ಮಂಡಲವು.
 
ವೃತ್ತಗಳಿರುವ ಬದಲು ಚತುರಸ್ರವಿದ್ದರೆ ಚಕ್ರರಹಿತವಾದ ಮಂಡಲವೇ ಭದ್ರಕ
 
ಮಂಡಲ.
 
ಕಲಶಸಂಖ್ಯೆಗಳು
 
ಸಹಸ್ರಮರ್ಧ೦ ಪಾದಂ ವಾ ಕಲಶಾಂಸ್ಕತ್ರ ಪೂಜಯೇತ್ ।
ಶತಂ ತದರ್ಧಂ ಪಾದಂ ವಾ ವಿತ್ತಾಭಾವೇ ನಿಗದ್ಯತೇ ॥9॥
 
113
 
ಅರ್ಥ - ಈ ಮಂಡಲದಲ್ಲಿ ಸಾವಿರಕಲಶ, ಐನೂರು, ಇನ್ನೂರೈವತ್ತು
ಕಲಶಗಳನ್ನಾಗಲೀ ಇಡಬಹುದು. ಇಷ್ಟು ಸಂಖ್ಯೆಯ ಕಲಶಗಳನ್ನಿಡಲು ಅನಾನು
ಕೂಲವುಳ್ಳವರು ನೂರು, ಐವತ್ತು, ಇಪ್ಪತ್ತೈದನ್ನಾಗಲೀ ಇಡಬಹುದು.
 
ಕಲಶದಲ್ಲಿರಬೇಕಾದ ದ್ರವ್ಯಗಳು
 
ಕ್ವಾಥೇನ ಕ್ಷೀರವೃಕ್ಷಾಣಾಂ ತಥಾ ಪಂಚಾಮೃತೈರಪಿ ।
ಪಂಚಗವ್ವನ ಶುದ್ದೇನ ಜಲೇನ ಚ ಪೃಥಕ್ ಪೃಥಕ್ 97
 
ಪೂರಯೇತ್ ಕಲಶಾನ್ ಮಧ್ಯಂ ಶುದ್ಧೋದೇನೈವ ಪೂರಯೇತ್ ।
ಅತ್ತಿಮೊದಲಾದ ಕ್ಷೀರವೃಕ್ಷಗಳ ತೊಗಟೆಯ ಕಷಾಯ, ಪಂಚಾಮೃತ,
ಪಂಚಗವ್ಯ, ಶುದ್ಧವಾದ ಜಲ ಇವುಗಳು ಕಲಶದಲ್ಲಿರಬೇಕಾದ ದ್ರವ್ಯಗಳು.
 
ಅರ್ಥ
 
-