This page has been fully proofread once and needs a second look.

112
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪಂಚವಿಂಶತಿತತ್ತ್ವಾರ್ಥೇ ಪ್ರಧಾನೇ ಜುಹುಯಾತ್ ಪುರಃ ॥92॥
 

 
ಪ್ರತ್ಯೇಕಂ ತು ಸಹಸ್ರಂ ವಾ ಪ್ರತ್ಯೇಕಂ ಶತಮೇವ ವಾ

ಶತಂ ಪುರುಷಸೂಕ್ತೇನ ಗಾಯತ್ರ್ಯಾ ಚ ಸಹಸ್ರಕಮ್ ।

ಕೃತ್ವಾಜಲಾಧಿವಾಸಂ ಚ ಪೂರ್ವಂ ವಾ ಪಂಚಗವ್ಯತಃ ॥93 ೯೩
 

 
ಅರ್ಥ
 
ಸಾವಿರ
 
- ಮೇಲೆ ಹೇಳಿದ ಮೂಲಮಂತ್ರಹೋಮಮಾಡುವ ಮೊದಲೇ
ಪಂಚವಿಂಶತಿ ತತ್ವಾಭಿಮಾನಿದೇವತೆಗಳಿಗೆ ಪ್ರೀತಿ- ಯುಂಟುಮಾಡಲು
ಸಾವಿರ ಆಹುತಿಗಳನ್ನಾಗಲೀ ಅಥವಾ ನೂರು ಆಹುತಿಯನ್ನಾಗಲೀ ನೀಡಬೇಕು. ಇದೇ ರೀತಿ
ಪ್ರಧಾನ ಕುಂಡದಲ್ಲಿಯೇ ಪುರುಷಸೂಕ್ತದಿಂದ ನೂರು ಆಹುತಿಗಳನ್ನು ಹಾಗೂ
ಗಾಯತ್ರೀಮಂತ್ರದಿಂದ ಸಾವಿರ ಆಹುತಿಗಳನ್ನು ಹೋಮಿಸಬೇಕು. ಈ ಹೋಮ
ಮುಗಿದ ಮೇಲೆ ಪ್ರತಿಮೆಯನ್ನು ಶಕುನಸೂಕ್ತದಿಂದ ನೀರಿನಲ್ಲಿ ಅಧಿವಾಸ
ಮಾಡಿಸಬೇಕು. ಅಥವಾ ಪಂಚಗವ್ಯಾಧಿವಾಸ ಮುಗಿದ ಮೇಲೆಯೂ ಜಲಾಧಿವಾಸ

ಮಾಡಿಸಬಹುದು.
 
[^1].
 
ಅಷ್ಟಾಕ್ರೇಣ ಜುಹುಯಾದ್ ಆಜ್ಯಾಹುತಿಸಹಸ್ರಕಮ್ - ವಿಷ್ಣು.ಸಂಹಿತಾ.

ಹದಿಮೂರು ಕುಂಡಗಳು ಅಥವಾ ಒಂಭತ್ತು ಅಥವಾ ಐದಾದರೂ ಇರಬೇಕು.
 

ಸತ್ರಯೋದಶಕುಂಡಂ ವಾ ನವ ವಾ ಪಂಚಪೂರ್ವವತ್
 

ಆಯಾಯ ದಿಕ್ಕಿನಲ್ಲಿರಬೇಕಾದ ಕುಂಡಗಳ ಆಕಾರವನ್ನು ತಿಳಿಸಲಾಗಿದೆ.

ಚತುರಸ್ರಯೋನಿಮರ್ಧಚಂದ್ರಂ ಷಟ್ಕೋಣ-ಪಂಕಜೇ ।

ಪಂಚಕೋಣಂ ತ್ರಸಂರ್ಯಸ್ರಂ ಕುಂಡಂ ಅಷ್ಟಾಗ್ಸ್ರಂ ತಾನಿ ನಾಮತಃ ॥
 

ಅಥವಾ ಎಲ್ಲವೂ ಚತುರಸ್ರಾಕಾರವಾಗಿದ್ದು ಒಂದು ಮೊಳದಷ್ಟಿರ ಬಹುದು. 'ಹಸ್ತಮಾತ್ರಾಣಿ
 
ಸರ್ವಾಣಿ'.
 

[^
1]. ವಿಶೇಷಾಂಶ - ಪ್ರಧಾನಕುಂಡದಲ್ಲಿ ಪುರುಷ, ಅವ್ಯಕ್ತ, ಮಹತ್ತತ್ವ, ಅಹಂಕಾರ, ಮನಸ್ತತ್ವ,
ದಶೇಂದ್ರಿಯಗಳು, ಶಬ್ದ- ತನ್ಮಾತ್ರೆಗಳು, ಪಂಚಭೂತಗಳು ಇವುಗಳ ಅಭಿಮಾನಿದೇವತೆಗಳಿಗೆ

ನೂರಕ್ಕೆ ಕಡಿಮೆ ಇಲ್ಲದಂತೆ ಆಹುತಿಗಳನ್ನು (?) ಹೋಮಿಸಬೇಕು. ನಂತರ ಪುರುಷಸೂಕ್ತದಿಂದ
ನೂರುಬಾರಿ ಹೋಮ, ಗಾಯತ್ರಿ- ಯಿಂದ ಸಾವಿರಬಾರಿ. ಪುರುಷಸೂಕ್ತದ ಪ್ರತಿಮಂತ್ರವನ್ನೂ

ನೂರು ಬಾರಿ ಆವೃತ್ತಿ ಮಾಡಬೇಕು. ಅಂದರೆ ೧೦೦x೧೬ : ೧೬೦೦ ಆಹುತಿಗಳಾಗುತ್ತವೆ.
ಅಥವಾ ಪುರುಷಸೂಕ್ತವನ್ನು ಪೂರ್ತಿ ಹೇಳಿ ಒಂದು ಆಹುತಿಯಂತೆ ನೂರು ಬಾರಿ ಹೋಮಿಸ
ಬೇಕು. ಗಾಯತ್ರೀಯೆಂದರೆ 'ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ । ತನ್ನೋ
ವಿಷ್ಣುಪ್ರಚೋದಯಾತ್' ಎಂಬ ವಿಷ್ಣು- ಗಾಯತ್ರಿ,