This page has not been fully proofread.

112
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಪಂಚವಿಂಶತಿತತ್ವಾರ್ಥ ಪ್ರಧಾನೇ ಜುಹುಯಾತ್ ಪುರಃ ॥92॥
 
ಪ್ರತ್ಯೇಕಂ ತು ಸಹಸ್ರಂ ವಾ ಪ್ರತ್ಯೇಕ ಶತಮೇವ ವಾ
ಶತಂ ಪುರುಷಸೂಕ್ತನ ಗಾಯತ್ಯಾ ಚ ಸಹಸ್ರಕಮ್ ।
ಕೃತ್ವಾಜಲಾಧಿವಾಸಂ ಚ ಪೂರ್ವಂ ವಾ ಪಂಚಗವ್ಯತಃ ॥93॥
 
ಅರ್ಥ
 
ಸಾವಿರ
 
ಮೇಲೆ ಹೇಳಿದ ಮೂಲಮಂತ್ರಹೋಮಮಾಡುವ ಮೊದಲೇ
ಪಂಚವಿಂಶತಿ ತತ್ವಾಭಿಮಾನಿದೇವತೆಗಳಿಗೆ ಪ್ರೀತಿಯುಂಟುಮಾಡಲು
ಆಹುತಿಗಳನ್ನಾಗಲೀ ಅಥವಾ ನೂರು ಆಹುತಿಯನ್ನಾಗಲೀ ನೀಡಬೇಕು. ಇದೇ ರೀತಿ
ಪ್ರಧಾನಕುಂಡದಲ್ಲಿಯೇ ಪುರುಷಸೂಕ್ತದಿಂದ ನೂರು ಆಹುತಿಗಳನ್ನು ಹಾಗೂ
ಗಾಯಮಂತ್ರದಿಂದ ಸಾವಿರ ಆಹುತಿಗಳನ್ನು ಹೋಮಿಸಬೇಕು. ಈ ಹೋಮ
ಮುಗಿದ ಮೇಲೆ ಪ್ರತಿಮೆಯನ್ನು ಶಕುನಸೂಕ್ತದಿಂದ ನೀರಿನಲ್ಲಿ ಅಧಿವಾಸ
ಮಾಡಿಸಬೇಕು. ಅಥವಾ ಪಂಚಗವ್ಯಾಧಿವಾಸ ಮುಗಿದ ಮೇಲೆಯೂ ಜಲಾಧಿವಾಸ
ಮಾಡಿಸಬಹುದು.
 
ಅಷ್ಟಾಕ್ಟರೇಣ ಜುಹುಯಾದ್ ಆಜ್ಯಾಹುತಿಸಹಸ್ರಕಮ್ - ವಿಷ್ಣು.ಸಂಹಿತಾ.
ಹದಿಮೂರು ಕುಂಡಗಳು ಅಥವಾ ಒಂಭತ್ತು ಅಥವಾ ಐದಾದರೂ ಇರಬೇಕು.
 
ಸತ್ರಯೋದಶಕುಂಡಂ ವಾ ನವ ವಾ ಪಂಚಪೂರ್ವವತ್
 
ಆಯಾಯ ದಿಕ್ಕಿನಲ್ಲಿರಬೇಕಾದ ಕುಂಡಗಳ ಆಕಾರವನ್ನು ತಿಳಿಸಲಾಗಿದೆ.
ಚತುರಸ್ರಯೋನಿಮರ್ಧಚಂದ್ರಂ ಷಟ್ಕಣ-ಪಂಕಜೇ ।
ಪಂಚಕೋಣಂ ತ್ರಸಂ ಕುಂಡಂ ಅಷ್ಟಾಗ್ರಂ ತಾನಿ ನಾಮತಃ ॥
 
ಅಥವಾ ಎಲ್ಲವೂ ಚತುರಸ್ರಾಕಾರವಾಗಿದ್ದು ಒಂದು ಮೊಳದಷ್ಟಿರಬಹುದು. ಹಸ್ತಮಾತ್ರಾಣಿ
 
ಸರ್ವಾಣಿ'.
 
1. ವಿಶೇಷಾಂಶ - ಪ್ರಧಾನಕುಂಡದಲ್ಲಿ ಪುರುಷ, ಅವ್ಯಕ್ತ, ಮಹತ್ವ, ಅಹಂಕಾರ, ಮನಸ್ತತ್ವ,
ದಶೇಂದ್ರಿಯಗಳು, ಶಬ್ದತನ್ಮಾತ್ರೆಗಳು, ಪಂಚಭೂತಗಳು ಇವುಗಳ ಅಭಿಮಾನಿದೇವತೆಗಳಿಗೆ
ನೂರಕ್ಕೆ ಕಡಿಮೆ ಇಲ್ಲದಂತೆ ಆಹುತಿಗಳನ್ನು (?) ಹೋಮಿಸಬೇಕು. ನಂತರ ಪುರುಷಸೂಕ್ತದಿಂದ
ನೂರುಬಾರಿ ಹೋಮ, ಗಾಯತ್ರಿಯಿಂದ ಸಾವಿರಬಾರಿ. ಪುರುಷಸೂಕ್ತದ ಪ್ರತಿಮಂತ್ರವನ್ನೂ
ನೂರು ಬಾರಿ ಆವೃತ್ತಿ ಮಾಡಬೇಕು. ಅಂದರೆ ೧೦೦x೧೬ : ೧೬೦೦ ಆಹುತಿಗಳಾಗುತ್ತವೆ.
ಅಥವಾ ಪುರುಷಸೂಕ್ತವನ್ನು ಪೂರ್ತಿ ಹೇಳಿ ಒಂದು ಆಹುತಿಯಂತೆ ನೂರು ಬಾರಿ ಹೋಮಿಸ
ಬೇಕು. ಗಾಯತ್ರೀಯೆಂದರೆ 'ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ । ತನ್ನೋ
ವಿಷ್ಣುಪ್ರಚೋದಯಾತ್' ಎಂಬ ವಿಷ್ಣುಗಾಯತ್ರಿ,