This page has been fully proofread once and needs a second look.

ತೃತೀಯೋsಧ್ಯಾಯಃ
 
111
 
ಸಾಕ್ಷಾತ್ ತು ಕೋಣಗಾದ್ಧಸ್ತಮಾತ್ರಮಂತರತಃ
 
ಸುಧೀ 119011
 
ಧೀಃ ॥ ೯೦ ॥
 
ಅರ್ಥ
 
- ಯಾಗಶಾಲೆಯಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಎರಡೆರಡ- ರಂತೆ ನಾಲ್ಕು
ದಿಕ್ಕುಗಳಲ್ಲಿ ಎಂಟು ಹೋಮಕುಂಡಗಳು. ವಿದಿಕ್ಕು- ಗಳಲ್ಲಿ ಒಂದೊಂದು
ಹೋಮಕುಂಡ, ಒಟ್ಟು ಹನ್ನೆರಡು ಹೋಮ ಕುಂಡಗಳು, ಪ್ರಧಾನಕುಂಡವನ್ನು
ಗೇಗ್ನೇಯಕೋಣೆಯಲ್ಲಿ ರಚಿಸಬೇಕು. ಪ್ರಧಾನಕುಂಡದಿಂದ ಇತರ ಪ್ರಾಚ್ಯಾದಿ
 
ಕುಂಡಗಳ ಅಂತರ ಒಂದು ಮೊಳ ಎಂದರೆ 24 ಅಂಗುಲವಿರಬೇಕು.
 

 
ಪ್ರತಿಷ್ಠಾಂಗಹೋಮವಿಧಿ
 

 
ಆಜ್ಯಾಹುತಿಂ ತೇಷು ಕುರ್ಯಾತ್ ಪ್ರತ್ಯೇಕಂ ಲಕ್ಷಸಂಖ್ಯಯಾ ।

ಪ್ರತ್ಯೇಕಮಯುತಂ ವಾಪಿ ಪ್ರಧಾನೇ ಲಕ್ಷಸಂಖ್ಯಕಮ್ ॥91 ೯೧
 

 
ಅರ್ಧ೦ ತದರ್ಧಮಥವಾ ಮೂಲಮಂತ್ರೇಣ ಮಂತ್ರವಿತ್ ।
 
ನಾರಾಯಣಾಯ'
 
ಒಂದೊಂದು
 

 
ಅರ್ಥ - ಈ ಪ್ರತಿಷ್ಠೆಗಾಗಿ ನಿರ್ಮಿತಗಳಾದ ಹದಿಮೂರುಕುಂಡ ಕುಂಡ- ಗಳಲ್ಲಿ 'ಓಂ
ನಮೋ
ನಾರಾಯಣಾಯ' ಎಂಬ ಮೂಲಮಂತ್ರ- ದಿಂದ
ಒಂದೊಂದು ಕುಂಡದಲ್ಲೂ ಲಕ್ಷಹೋಮವಾದರೆ ಉತ್ತಮೋತ್ತಮ, ಅಥವಾ ಪ್ರಧಾನಕುಂಡದಲ್ಲಿ
ಲಕ್ಷಹೋಮ ಮಾಡಿ, ಉಳಿದ ಹನ್ನೆರಡು ಕುಂಡಗಳಲ್ಲಿ ಹತ್ತುಸಾವಿರಹೋಮ-

ವನ್ನಾದರೂ ಮಾಡುವುದು ಉತ್ತಮಪಕ್ಷ. ಅಥವಾ ಪ್ರಧಾನಕುಂಡ ದಲ್ಲಿ 50ಸಾವಿರ
ಮಾಡಿ, ಇತರ ಕುಂಡಗಳಲ್ಲಿ 5ಸಾವಿರಹೋಮ- ವನ್ನಾಗಲೀ ಮಾಡುವುದು ಮಧ್ಯಮ
ಪಕ್ಷ, ಅಥವಾ ಪ್ರಧಾನ- ಕುಂಡದಲ್ಲಿ 25 ಸಾವಿರ ಮೃಘೃತಾಹುತಿ ನೀಡಿ, ಇತರ
ಕುಂಡಗಳಲ್ಲಿ ಸಾವಿರದೆಂಟು ಆಜ್ಯಾಹುತಿಗಳನ್ನು ನೀಡುವುದು ಕನಿಷ್ಠಪಕ್ಷ, ಅಥವಾ
ಪ್ರಧಾನಕುಂಡದಲ್ಲಿ ಹತ್ತು ಸಾವಿರ ಆಜ್ಯಾಹುತಿಯನ್ನು ನೀಡಿ ಉಳಿದ ಕುಂಡಗಳಲ್ಲಿ
ಸಾವಿರದೆಂಟು ಆಜ್ಯಾಹುತಿ ಪಕ್ಷವೂ ಕನಿಷ್ಠಪಕ್ಷವೇ.
 
[^1]
 
[^1]
. ವಿಶೇಷಾಂಶ -
 
ದೊಡ್ಡ ದೊಡ್ಡ ದೇವಾಲಯ ಸ್ಥಾಪಿತ- ವಾಗುವಾಗ ಈ ರೀತಿ ಪ್ರತಿದಿಕ್ಕಿಗೂ ಹನ್ನೆರಡು ಕುಂಡಗಳು
ಮತ್ತು ಒಂದು ಪ್ರಧಾನಕುಂಡಗಳನ್ನು ರಚಿಸುವ ಪದ್ಧತಿಯಿದೆ.
 

ಚಿಕ್ಕದೇವಾಲಯಗಳಲ್ಲಿ ಒಂದೊಂದು ದಿಕ್ಕಿಗೆ ಒಂದೊಂದರಂತೆ ಕುಂಡವನ್ನು ಸ್ಥಾಪಿಸಿ,
ಹತ್ತು ಸಾವಿರ ಪ್ರಧಾನಕುಂಡದಲ್ಲಿ, ಹಾಗೂ ಇತರ ಕುಂಡಗಳಲ್ಲಿ ಸಾವಿರದೆಂಟು ಆಹುತಿಗಳನ್ನು

ನೀಡುವುದು ಪದ್ಧತಿಯಲ್ಲಿದೆ.