This page has not been fully proofread.

ತೃತೀಯೋsಧ್ಯಾಯಃ
 
111
 
ಸಾಕ್ಷಾತ್ ತು ಕೋಣಗಾದಮಾತ್ರಮಂತರತಃ
 
ಸುಧೀ 119011
 
ಅರ್ಥ
 
ಯಾಗಶಾಲೆಯಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಎರಡೆರಡರಂತೆ ನಾಲ್ಕು
ದಿಕ್ಕುಗಳಲ್ಲಿ ಎಂಟು ಹೋಮಕುಂಡಗಳು. ವಿದಿಕ್ಕುಗಳಲ್ಲಿ ಒಂದೊಂದು
ಹೋಮಕುಂಡ, ಒಟ್ಟು ಹನ್ನೆರಡು ಹೋಮಕುಂಡಗಳು, ಪ್ರಧಾನಕುಂಡವನ್ನು
ಆಗೇಯಕೋಣೆಯಲ್ಲಿ ರಚಿಸಬೇಕು. ಪ್ರಧಾನಕುಂಡದಿಂದ ಇತರ ಪ್ರಾಚ್ಯಾದಿ
 
ಕುಂಡಗಳ ಅಂತರ ಒಂದು ಮೊಳ ಎಂದರೆ 24 ಅಂಗುಲವಿರಬೇಕು.
 
ಪ್ರತಿಷ್ಠಾಂಗಹೋಮವಿಧಿ
 
ಆಜ್ಯಾಹುತಿಂ ತೇಷು ಕುರ್ಯಾತ್ ಪ್ರತ್ಯೇಕಂ ಲಕ್ಷಸಂಖ್ಯಯಾ ।
ಪ್ರತ್ಯೇಕಮಯುತಂ ವಾತಪಿ ಪ್ರಧಾನೇ ಲಕ್ಷಸಂಖ್ಯಕಮ್ ॥91॥
 
ಅರ್ಧ೦ ತದರ್ಧಮಥವಾ ಮೂಲಮಂತ್ರೇಣ ಮಂತ್ರವಿತ್ ।
 
ನಾರಾಯಣಾಯ'
 
ಒಂದೊಂದು
 
ಅರ್ಥ - ಈ ಪ್ರತಿಷ್ಠೆಗಾಗಿ ನಿರ್ಮಿತಗಳಾದ ಹದಿಮೂರುಕುಂಡಗಳಲ್ಲಿ 'ಓಂ
ನಮೋ
ಎಂಬ ಮೂಲಮಂತ್ರದಿಂದ
ಕುಂಡದಲ್ಲೂ ಲಕ್ಷಹೋಮವಾದರೆ ಉತ್ತಮೋತ್ತಮ, ಅಥವಾ ಪ್ರಧಾನಕುಂಡದಲ್ಲಿ
ಲಕ್ಷಹೋಮ ಮಾಡಿ, ಉಳಿದ ಹನ್ನೆರಡು ಕುಂಡಗಳಲ್ಲಿ ಹತ್ತುಸಾವಿರಹೋಮ-
ವನ್ನಾದರೂ ಮಾಡುವುದು ಉತ್ತಮಪಕ್ಷ. ಅಥವಾ ಪ್ರಧಾನಕುಂಡದಲ್ಲಿ 50ಸಾವಿರ
ಮಾಡಿ, ಇತರ ಕುಂಡಗಳಲ್ಲಿ 5ಸಾವಿರಹೋಮವನ್ನಾಗಲೀ ಮಾಡುವುದು ಮಧ್ಯಮ
ಪಕ್ಷ, ಅಥವಾ ಪ್ರಧಾನಕುಂಡದಲ್ಲಿ 25 ಸಾವಿರ ಮೃತಾಹುತಿ ನೀಡಿ, ಇತರ
ಕುಂಡಗಳಲ್ಲಿ ಸಾವಿರದೆಂಟು ಆಜ್ಯಾಹುತಿಗಳನ್ನು ನೀಡುವುದು ಕನಿಷ್ಠಪಕ್ಷ, ಅಥವಾ
ಪ್ರಧಾನಕುಂಡದಲ್ಲಿ ಹತ್ತು ಸಾವಿರ ಆಜ್ಯಾಹುತಿಯನ್ನು ನೀಡಿ ಉಳಿದ ಕುಂಡಗಳಲ್ಲಿ
ಸಾವಿರದೆಂಟು ಆಜ್ಯಾಹುತಿ ಪಕ್ಷವೂ ಕನಿಷ್ಠಪಕ್ಷವೇ.
 
1. ವಿಶೇಷಾಂಶ -
 
ದೊಡ್ಡ ದೊಡ್ಡ ದೇವಾಲಯ ಸ್ಥಾಪಿತವಾಗುವಾಗ ಈ ರೀತಿ ಪ್ರತಿದಿಕ್ಕಿಗೂ ಹನ್ನೆರಡು ಕುಂಡಗಳು
ಮತ್ತು ಒಂದು ಪ್ರಧಾನಕುಂಡಗಳನ್ನು ರಚಿಸುವ ಪದ್ಧತಿಯಿದೆ.
 
ಚಿಕ್ಕದೇವಾಲಯಗಳಲ್ಲಿ ಒಂದೊಂದು ದಿಕ್ಕಿಗೆ ಒಂದೊಂದರಂತೆ ಕುಂಡವನ್ನು ಸ್ಥಾಪಿಸಿ,
ಹತ್ತು ಸಾವಿರ ಪ್ರಧಾನಕುಂಡದಲ್ಲಿ ಹಾಗೂ ಇತರ ಕುಂಡಗಳಲ್ಲಿ ಸಾವಿರದೆಂಟು ಆಹುತಿಗಳನ್ನು
ನೀಡುವುದು ಪದ್ಧತಿಯಲ್ಲಿದೆ.