This page has been fully proofread once and needs a second look.

110
 
ಶುದ್ಧಯೇ ಜಲಾಧಿವಾಸಂ ಕುರ್ಯಾತ್).
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 

 
ಚತುರ್ವೆವೇದಪಾರಾಯಣ
 

 
ವೇದಾಂಶ್ಚ ಚತುರಃ ಸಮ್ಯಕ್ ಪಾರಯೇಯುಃ ದ್ವಿಜೋತ್ತಮಾಃ ।

ಪ್ರಾಚ್ಯಾದಿದ್ವಾರಗೌ ದೌದೌದ್ವೌ ದ್ವೌ ಏಕೈಕಂ ತು ದಶಾವರಾ:।

ಯಥಾಲಭಂಬ್ಧಂ ಯಥಾವಿತ್ತಮ್ ಅಥವಾ ವಿಷ್ಣುತತ್ವರಾ 11ರಾಃ ॥ 8911
 

 
ಅರ್ಥ - ಮಂಟಪದ ನಾಲ್ಕು ದಿಕ್ಕಿನ ದ್ವಾರಗಳಲ್ಲಿ ಒಂದೊಂದು ವೇದಕ್ಕೆ
ಇಬ್ಬಿಬ್ಬರಂತೆ ನಾಲ್ಕು ವೇದಗಳನ್ನೂ ಪಾರಾಯಣ ಮಾಡಬೇಕು.
 

ಪೂರ್ವದಲ್ಲಿ ಋಗ್ವೇದಪಾರಾಯಣ, ದಕ್ಷಿಣದಲ್ಲಿ ಯಜುರ್ವೇದ, ಪಶ್ಚಿಮದಲ್ಲಿ
ಸಾಮವೇದ, ಉತ್ತರದಲ್ಲಿ ಅಥರ್ವವೇದ ಪಾರಾ- ಯಣ ನಡೆಯಬೇಕು. ಇವರಲ್ಲದೆ
ಈಶಾನ್ಯದಲ್ಲಿ ವಿಷ್ಣು ಮಂತ್ರ- ಗಳನ್ನು ಜಪಿಸುವ ಒಬ್ಬರು. ಆಗೇಗ್ನೇಯದಿಕ್ಕಿನಲ್ಲಿ ವಿಷ್ಣುವಿಗೆ

ಸಂಬಂಧಪಟ್ಟ ಪುರುಷಸೂಕ್ತ, ವಿಷ್ಣುಸೂಕ್ತಗಳನ್ನು ಪಠಿಸುತ್ತಾ ಇರಬೇಕು. ಅಂತೂ
ಹತ್ತಕ್ಕೆ ಕಡಿಮೆ ಇಲ್ಲದಂತೆ ವಿಷ್ಣುಭಕ್ತರಾದ ವಿಪ್ರರಿಂದ ವೇದಾದಿಪಾರಾಯಣ
ನಡೆಸಬೇಕು. ಋಗ್ವೇದಾದಿ ಜಾಪಕರು ಇಬ್ಬರು ಅಲಭ್ಯರಾದರೆ ಒಬ್ಬೊಬ್ಬರಾದರೂ
ಸರಿಯೇ, ಅಥವಾ ಇಬ್ಬರಿಗಿಂತ ಎಷ್ಟುಮಂದಿಯನ್ನಾದರೂ ಪಾರಾಯಣಕ್ಕೆ ಕೂಡಿಸ
ಬಹುದು. ಪಾರಾಯಣ ಅಧಿಕವಾದಷ್ಟು ಸನ್ನಿಧಾನ ಹೆಚ್ಚುತ್ತದೆ. ಆದರೆ
ಯಜಮಾನನು ತನ್ನ ಯೋಗ್ಯತೆ ತಕ್ಕಂತೆ ಎಷ್ಟುಮಂದಿಯನ್ನಾದರೂ ಆಹ್ವಾನಿಸ
 
ಬಹುದು.
 

 
ಪ್ರತಿಷ್ಠಾಂಗ ಹೋಮಕುಂಡನಿರ್ಮಾಣಕ್ರಮ

 
ತ್ರಯೋದಶಾತ್ರ ಕುಂಡಾನಿ ಪರಿತಃ ಕಾರಯೇದ್ಗುಬುಧಃ ।

ಉಕ್ತಲಕ್ಷಣಯುಕ್ತಾನಿ ಪ್ರಧಾನಂ ತ್ವಗ್ನಿಕೋಣಕೇ ।
 

 
ಏವಂ ಕೃತ್ವಾಧಿವಾಸಂ ತು ತ್ರಿರಾತ್ರಂ ವೈಕರಾತ್ರಕಮ್ ।

ತಥೈವ ಸ್ವಪ್ಮಾಕಾಂಕ್ಷೇತ್
 
........
ಏಳು ದಿನ, ಐದು, ಮೂರು, ಒಂದು ಅಥವಾ ಪ್ರತಿಷ್ಠಾಸಮಯ- ದಲ್ಲಾದರೂ ಅಧಿವಾಸ
ಮಾಡಲೇಬೇಕು. ಅಂದು ರಾತ್ರಿ ಸ್ವಪ್ನ- ದಲ್ಲಿ ಶುಭಸೂಚನೆ ಸಿಗುತ್ತದೆ. ಸ್ವಪ್ನವು ಅಶುಭವಾದರೆ
 
ಶಾಂತಿ- ಹೋಮ ಮಾಡಬೇಕು.