2023-04-27 14:06:42 by ambuda-bot
This page has not been fully proofread.
ತೃತೀಯೋsಧ್ಯಾಯಃ
ಪುರುಷಸೂಕ್ತವನ್ನು ಹೇಳಿ, ಪಂಚಗವ್ಯತುಂಬಿದ ಪಾತ್ರೆಯಲ್ಲಿ ಏಳು ದಿವಸ
ಮುಳುಗಿಸಿಟ್ಟಿರಬೇಕು. ಇದರಿಂದ ಭಗವಂತನ ಸನ್ನಿಧಾನ ಹೆಚ್ಚುತ್ತದೆ. (ಬಿಂಬಸ್ಯ
1.
-
109
ಅಧಿವಾಸನ
ಅಧಿವಾಸವೆಂದರೆ ಭಗವಂತನ ಸಾನ್ನಿಧ್ಯವನ್ನುಂಟು ಮಾಡುವ ಕಾರ್ಯಕ್ರಮ. ಹರೇ
ಸಾನ್ನಿಧ್ಯಕರಣಮಧಿವಾಸನಮುಚ್ಯತೇ ।
ಯಾವುದೇ
ಇದು ಜಲ, ಕ್ಷೀರ, ಧಾನ್ಯ, ವಸ್ತ್ರ, ರತ್ನ, ಪುಷ್ಪ, ಶಯ್ಯಾಧಿವಾಸಗಳೆಂದು ಅನೇಕವಿಧವಿದೆ. ಜಲ,
ಧಾನ್ಯ, ಪಂಚಗವ್ಯ, ಪಂಚಾಮೃತ ವಸ್ತ್ರಾಧಿವಾಸಗಳನ್ನು ಹೇಳಿದ್ದಾರೆ.
ಜಲಾಧಿವಾಸಗಳನ್ನು ಮಾಡುವಾಗ ಪಂಚಗವ್ಯವನ್ನು ಸೇರಿಸಲೇಬೇಕು. ಯಾವುದನ್ನು ಮಾಡಿದರೆ
ಕರ್ಮಸಂಪೂರ್ತಿಯಾಗುವುದೋ ಅದನ್ನೇ ಈ ತಂತ್ರಸಾರಸಂಗ್ರಹದಲ್ಲಿ ಆಚಾರ್ಯರು
ಹೇಳಿದ್ದಾರೆ. ಆದ್ದರಿಂದ ಪಂಚಗವ್ಯದಿಂದ ಅಧಿವಾಸಮಾಡದೇ ಹರಿಯ ಸಾನ್ನಿಧ್ಯ ಬರಲಾರದು.
'ಬಿಂಬಾನಾಂ ತೇಜೋವತ್ತಾಸಿದ್ಧರ್ಥಂ ಅಧಿವಾಸನಂ ಕರಿಷ್ಯ' ಎಂದು
ಜಲಾಧಿವಾಸ
ಸಂಕಲ್ಪ.
ಮಂಡಲದಲ್ಲಿ ಪಾತ್ರೆಯನ್ನಿಟ್ಟು ಶುದ್ಧಜಲತುಂಬಿಸಿ ವರುಣನನ್ನು ಸಕಲನದ್ಯಭಿಮಾನಿಗಳನ್ನು
ಆವಾಹಿಸಿ ಪುಣ್ಯಾಹೋದಕ, ಪಂಚಗವ್ಯ ಸೇರಿಸಿ ಅದರಲ್ಲಿ ಪ್ರತಿಮೆಯನ್ನು ವಸ್ತ್ರದಿಂದ ಆಚ್ಛಾದಿಸಿ
ಮುಳುಗಿಸಬೇಕು. ಅಥವಾ ಸತತವಾಗಿ ಜಲಧಾರೆಯನ್ನು ಪುರುಷಸೂಕ್ತದಿಂದ ಅಭಿಷೇಕಿಸಬೇಕು.
ಪವಮಾನಮಂತ್ರಗಳನ್ನು ಪಠಿಸಬೇಕು. ನಂತರ ಉಪಚಾರಪೂಜೆ, ನೀರಾಜನಗಳನ್ನು
ಅರ್ಪಿಸಬೇಕು.
-
ಕ್ಷೀರಾಧಿವಾಸ
ಕಟಾಹದಲ್ಲಿ ಕ್ಷೀರವನ್ನು ತುಂಬಿಸಿ ಪಂಚಗವ್ಯವನ್ನು ಹಾಕಿ, ಕ್ಷೀರದಲ್ಲಿ
ಸೋಮನನ್ನು ಆವಾಹಿಸಿ, ಪುರುಷಸೂಕ್ತದಿಂದ ಕ್ಷೀರಾಧಿವಾಸ ಮಾಡಿಸಬೇಕು. ನಂತರ
ಪಂಚೋಪಚಾರಪೂಜೆ, ನೀರಾಜನವನ್ನು ಅರ್ಪಿಸಬೇಕು.
ಧಾನ್ಯಾಧಿವಾಸ ಪಾತ್ರೆಯಲ್ಲಾಗಲೀ, ಕಟಾಹದಲ್ಲಾಗಲೀ ಧಾನ್ಯವನ್ನು ತುಂಬಿ ಪುಣ್ಯಾಹೋದಕ,
ಪಂಚಗವ್ಯದಿಂದ ಪ್ರೋಕ್ಷಿಸಿ, 'ಯೇನ ತೋಕಾಯ ಧಾನ್ಯ' ಮಂತ್ರದಿಂದ ಧಾನ್ಯಾಧಿದೇವತೆಯನ್ನು
ಆವಾಹಿಸಿ, ಪುರುಷಸೂಕ್ತದಿಂದ ಅಧಿವಾಸ ಮಾಡಿಸಬೇಕು.
ವಸ್ತ್ರಾಧಿವಾಸ - ಪ್ರತಿಮೆಯನ್ನು ವಸ್ತ್ರದಿಂದ ಅಲಂಕರಿಸಿ, ಪಂಚಗವ್ಯಪ್ರೋಕ್ಷಿಸಿ, ಅಧಿವಾಸ
ಮಾಡುವುದು. ವಿಷ್ಣುಸೂಕ್ತಾದಿಗಳನ್ನು ಪಠಿಸಬೇಕು.
ಇದೇ ರೀತಿ ಪಂಚಗವ್ಯ, ಪಂಚಾಮೃತಗಳಲ್ಲಿಯೂ ಅಧಿವಾಸನವನ್ನು ಮಾಡಿ, ಕಡೆಯಲ್ಲಿ
ತತ್ತ್ವನ್ಯಾಸ ಪೂರ್ವಕ (ಮಂಡಲದೇವತೆ ಹಾಗೂ ನಿದ್ರಾಕಲಶವನ್ನು ಸ್ಥಾಪಿಸಿ?) ಶಯ್ಯಾಧಿ
ವಾಸವನ್ನು ಮಾಡಿಸಬೇಕು. ನಂತರ ವಸ್ತ್ರದಿಂದ ಆಚ್ಛಾದಿಸಿ ನೀರಾಜನ ಮಾಡಬೇಕು.
ಜಲ, ಮೃತ್ತಿಕೆ, ಧಾನ್ಯ, ಪಂಚಗವ್ಯ, ಪಂಚಾಮೃತಾಧಿವಾಸಗಳನ್ನು ಏಳುರಾತ್ರಿ, ಐದು, ಮೂರು,
ಅಥವಾ ಒಂದು ರಾತ್ರಿಯಾದರೂ ಅಧಿವಾಸ ಆಗಲೇಬೇಕು.