This page has not been fully proofread.

॥ಶ್ರೀಃ ॥
 
ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ
 
ತಂತ್ರಸಾರಸಂಗ್ರಹಃ
 
B
 
(ಶ್ರೀವರದೇಂದ್ರ-ವಸುಧೇಂದ್ರ ತೀರ್ಥಟೀಕಾಸಹಿತಮ್)
 
ಮಂಗಳಾಚರಣಮ್
 
ಜಯತ್ಯಭವೇಶೇಂದ್ರವಂದಿತಃ ಕಮಲಾಪತಿ: 1
ಅನಂತವಿಭವಾನಂದಶಕ್ತಿಜ್ಞಾನಾದಿಸದ್ಗುಣ: ॥1।
 
=
 
ಅರ್ಥ ಅಬ್ಬಭವಃ = ಚತುರ್ಮುಖನು, ಈಶಃ = ರುದ್ರನು, ಇಂದ್ರಃ
ಇಂದ್ರದೇವರು ಇವರಿಂದ, ವಂದಿತಃ : ವಂದಿತನಾದವನು, ಅನಂತ : ಕೊನೆ-
ಯಿರದ, ವಿಭವ : ಐಶ್ವರ್ಯದ, ಶಕ್ತಿಜ್ಞಾನಾದಿಸದ್ಗುಣ : ಸಾಮರ್ಥ್ಯ, ಆನಂದ
ಮೊದಲಾದ ಸದ್ಗುಣಗಳಿಂದ ಪೂರ್ಣನಾದ, ಕಮಲಾಪತಿಃ = ಲಕ್ಷ್ಮೀರಮಣನು,
ಜಯತಿ : ಉತ್ಕೃಷ್ಟನಾಗಿದ್ದಾನೆ.
 
ವಸುಧೇಂದ್ರತೀರ್ಥರ ಟೀಕಾ ಈ ಮೊದಲನೆಯ ಶ್ಲೋಕದಲ್ಲಿ ಈ ತಂತ್ರಸಾರದಲ್ಲಿ
ಹೇಳಲ್ಪಟ್ಟ ವಸ್ತು ಯಾವುದೆಂದು ವಸ್ತುನಿರ್ದೇಶ ಮಾಡಿದ್ದಾರೆ.
 
ಕಮಲಾಪತಿರ್ವಿಜಯತಿ ಭಗವಂತನಿಗೆ ಯಾವಾಗಲೂ ಜಯವೇ ಇರುವುದರಿಂದ
ಜಯವಾಗಲಿ ಎಂದರೆ ಉತ್ಕೃಷ್ಟನಾಗಿದ್ದಾನೆ = ಎಲ್ಲರಿಗಿಂತಲೂ ಮಿಗಿಲಾಗಿದ್ದಾನೆ ಎಂದರ್ಥ.
 
ಭಗವಂತನು ಉತ್ಕೃಷ್ಟನಾಗಿದ್ದಾನೆ ಎನ್ನಲು 'ಅಬ್ಬಭವೇಶವಂದಿತನಾಗಿರುವುದೂ
ಹಾಗೂ 'ಅನಂತವೂ ವೈಭವೋಪೇತವೂ ಆದ ಶಕ್ತಿ, ಜ್ಞಾನಾನಂದಾದಿ ಸದ್ಗುಣವಿರುವುದು
ಎಂಬ ಎರಡು ಹೇತುಗಳನ್ನು ಹೇಳಲಾಗಿದೆ.
 
ಅನಂತವಿಭವ ಎಂಬಲ್ಲಿ ಅನಂತವೆಂದರೆ ಪೂರ್ಣವೆಂದರ್ಥ. ಈ ಪೂರ್ಣತ್ವವೆಂಬ
ಅನಂತತ್ವವಿಶೇಷಣವನ್ನು ವಿಭವ, ಆನಂದ, ಶಕ್ತಿ, ಜ್ಞಾನಗಳಿಗೂ ಸೇರಿಸಬೇಕು.
ಇದರಿಂದಾಗಿ ಪೂರ್ಣವಾದ ಐಶ್ವರ್ಯವುಳ್ಳವನು, ಪೂರ್ಣಾನಂದವುಳ್ಳವನು,
ಪೂರ್ಣಶಕ್ತಿಯುಳ್ಳವನು ಭಗವಂತನೆಂದು ಸಿದ್ಧಿಸುತ್ತದೆ.
 
1. 'ಯಂ ಕಾಮಯೇ ತಂ ತನುಗ್ರಂ ಕೃಮಿ । ತಂ ಬ್ರಹ್ಮಾಣಂ ತಮೃಷಿಂ' ಇತ್ಯಾದಿ. 'ಮಮ
ಯೋನಿಃ ಅಂತಃಸಮುದ್ರೆ' – ಅಂಭಣೀಸೂಕ್ತ.