This page has not been fully proofread.

108
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಭೂತೈಶ್ಚ ಪಾಯಸೇನೈವ ತಥಾ ಪದ್ಮಾಕ್ಷತೇನ ಚ ।
ಅನ್ನಾಪೂಪೇನ ಪುಷ್ಪಾನ್ನೈ: ಅನ್ನಲಾಜಾಕ್ಷತೈರಪಿ ।
ಸುಭಿ ಕ್ರಮೇಣೈವ ದೇವಾಂತಂ ಪಾಯಸೇನ ವಾ 187
 
ಅರ್ಥ - ಬೀಜಾವಾಪವಾದ ದಿನದಿಂದಾರಂಭಿಸಿ ಹತ್ತುದಿವಸಗಳವರೆಗೆ ಅಲ್ಲಿ
ಭಗವಂತನಿಗೆ ನಿತ್ಯವೂ ನೈವೇದ್ಯವನ್ನರ್ಪಿಸಿ ಪೂಜಿಸಬೇಕು. ಜೊತೆಗೆ ಬ್ರಹ್ಮರುದ್ರಾದಿ
ಇತರದೇವತೆಗಳಿಗೂ, ಪಿತೃಗಳು, ಗಂಧರ್ವರು, ಯಕ್ಷರು, ಭೂತಗಳಿಗೂ
ಬಲಿಯನ್ನರ್ಪಿಸಬೇಕು.
 
ವಿಷ್ಣುವಿಗೆ ಪಾಯಸವನ್ನೂ, ಬ್ರಹ್ಮದೇವನಿಗೆ ತುಂಡಾಗದ ಅಕ್ಕಿ ಹಾಗೂ
ತಾವರೆಯ ಹೂವನ್ನರ್ಪಿಸಬೇಕು. ರುದ್ರದೇವನಿಗೆ ಅನ್ನಸಹಿತವಾದ ಅಪೂಪವನ್ನೂ;
ದೇವತೆಗಳಿಗೆ ಪುಷ್ಪಗಳಿಂದ ಪೂಜೆ ಹಾಗೂ ಅನ್ನನೈವೇದ್ಯವನ್ನೂ ; ಪಿತೃಗಳಿಗೆ
ಸತಿಲಾನ್ನವನ್ನೂ ; ಗಂಧರ್ವರಿಗೆ ಅರಳನ್ನೂ; ಯಕ್ಷರಿಗೆ ಅಕ್ಕಿಕಾಳು ಹಾಗೂ
ಅರಳನ್ನೂ, ಭೂತಗಳಿಗೆ ಹುರಿಹಿಟ್ಟು ಅಥವಾ ಎಲ್ಲರಿಗೂ ಹರಿನಿವೇದಿತ
ಪಾಯಸವನ್ನೇ ನೀಡಬಹುದು.
 

 
ಅಧಿವಾಸನವಿಧಿ
 
ತವ ಪ್ರತಿಮಾಯಾಶ್ಚ ಕಾರಯೇದಧಿವಾಸನಮ್ ।
ಪಂಚಗವೇ ಸಪ್ತರಾತ್ರಂ ಕ್ಷಿಪ್ಪಾ ಪುರುಷಸೂಕ್ತತಃ 118811
ಅರ್ಥ -
 
ಅಂಕುರಾರ್ಪಣಕಾಲದಲ್ಲಿಯೇ ಪ್ರತಿಷ್ಠಿಸಬೇಕಾದ ಪ್ರತಿಮೆಯನ್ನು
 
1. ವಿಶೇಷಾಂಶ - ಅಂಕುರಾರೋಪಣ ಮಾಡಿದ ದಿನದಿಂದ ನೈವೇದ್ಯವನ್ನು ಅರ್ಪಿಸುತ್ತಿರಬೇಕು.
ಬಲಿಯನ್ನು ನೀಡದೇ ಮಾಡಿದ ಅಂಕುರಾರೋಪಣವು ನಿಷ್ಠಲ.
ಬಲ್ಯದಾನೇ ತು ನೈಷಲ್ಯಾತ್ ಸರ್ವಥಾಂಕುರಾರೋಪಣಮ್ ।
ಬಲಿನಾ ಸಹ ಕರ್ತವ್ಯಂ ಪ್ರಯತ್ನಾತ್ ದೇಶಿಕೋತ್ತಮೈ: ।
ರಾತ್ರೀಶೇದ್ಯೋ ಬಲಿಂ ದದ್ಯಾತ್ ಪಾರ್ಷದಾಂತಂ ಜಲಾನ್ವಿತಮ್ ॥
 
ಓಂ ವಿಷ್ಣವೇ ನಮಃ, ಓಂ ಬ್ರಹ್ಮಣೇ ನಮಃ, ಓಂ ರುದ್ರಾಯ ನಮಃ ಎಂದು ಓಂಕಾರಸಹಿತ
ದೇವತಾನಾಮಗಳಿಗೆ ನಮಃ ಸೇರಿಸಿ ಬಲಿಯನ್ನರ್ಪಿಸಬೇಕು. ವಿಷ್ಣುವಿಗೆ ಪಾಯಸದಿಂದ
ಪದ್ಮಾಕೃತದಿಂದ ಬ್ರಹ್ಮಶಂಕರದೇವತೆಗಳಿಗೆ, ಪುಷ್ಪಾನದಿಂದ ಗಂಧರ್ವರಿಗೆ, ಅನ್ನಲಾಜಾಕ್ಷತೆಗಳಿಂದ
ಯಕ್ಷರುಗಳಿಗೆ, ಹುರಿಹಿಟ್ಟಿನಿಂದ ಭೂತಗಳಿಗೆ ಎಂದು ಒಂದು ಪಕ್ಷವಿದೆ.