This page has been fully proofread once and needs a second look.

106
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ಅಂಕುರಾರ್ಪಣೆ
 

 
ತತ್ರ ವಿಷ್ಣುಂ ಚತುರ್ಮೂತಿ್ರಂರ್ತಿಂ ಪೂಜಯೇದ್ ಭಕ್ತಿತಃ ತ್ರಿಶಃ ।

ಸಪ್ತಧಾನ್ಯಾನಿ ತೇಷ್ಟೇವೇವ ಪೂರಯೇದಂಕುರಾರ್ಥತಃ 185
118511
 
॥ ೮೫ ॥
 
ಅರ್ಥ - ಈ ದ್ವಾದಶ ಅಂಕುರಾರ್ಪಣ ಪಾಲಿಕಾದಿಗಳಲ್ಲಿ ವಾಸುದೇವ
ಪ್ರದ್ಯುಮ್ ಸಂಕರ್ಷಣ ಅನಿರುದ್ಧರನ್ನಾಗಲೀ, ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ
ವಾಸುದೇವಮೂರ್ತಿಗಳ- ನ್ನಾಗಲೀ
ಆವಾಹಿಸಿ ಪೂಜಿಸಬೇಕು. ಅವುಗಳಲ್ಲಿ
 
ಆವಾಹಿಸಿ
 
ಅಂಕುರೋ- ತ್ಪಾದನೆಗಾಗಿ ಜವೆಗೋಧಿ, ಭತ್ತ, ಹೆಸರುಕಾಳು, ಉದ್ದಿನಕಾಳು, ಎಳ್ಳು,
ಸಾಸುವೆ, ಸಾಮೆ ಎಂಬ ಸಪ್ತಧಾನ್ಯಗಳನ್ನು ತುಂಬಿಸಬೇಕು.
 

[^1]
 
[^1]
ಅಂಕುರಾರೋಪಣ
 

 
ಯಜಮಾನನು ತಾನು ಮಾಡುವ ಕರ್ಮವು ಸಫಲವಾಗಿ ಶುಭಪರಂಪರೆಯುಂಟಾಗಲಿ ಎಂದು
ಅಂಕುರಾರೋಪಣವನ್ನು ಮಾಡಬೇಕು. ಗೋಮಯದಿಂದ ಭೂಮಿಯನ್ನು ಶುದ್ಧಿಮಾಡಿ

ರಂಗವಲ್ಯಾದಿಗಳಿಂದ ಅಲಂಕರಿಸಿ ವಸ್ತ್ರವನ್ನು ಹಾಸಿ ಅದರ ಮೇಲೆ ಅಕ್ಕಿಯನ್ನು ಹರಡಬೇಕು.
ಶರಾವಗಳಿಗೆ ಹಸೀದಾರದಿಂದ ವೇಷ್ಟನೆ ಮಾಡಿ, ಅದರಲ್ಲಿ ಮಣ್ಣು, ಮರಳು, ಬೆರಣಿಗಳನ್ನು

ಹಾಕಿ ಏಳು ಧಾನ್ಯಗಳನ್ನು ಹನ್ನೆರಡು ಮಣ್ಣಿನ ಪಾತ್ರೆಗಳಲ್ಲೂ ಅಥವಾ ಎಲ್ಲಾ ಬೀಜಗಳನ್ನು
ಒಂದೇ ಶರಾವದಲ್ಲಿ ಹಾಕಿಯಾ- ದರೂ ಅಂಕುರಾರ್ಪಣೆ ಮಾಡಬೇಕು. ನಂತರ 'ಕರ್ಮಸಾಫಲ್ಯ
ನಿರಂತರಶುಭತ್ವಪರಂಪರಾಪ್ರಾಪ್ತಿದ್ವಾರಾ ಸರ್ವಾಭೀಷ್ಟ- ಸಿದ್ಧ್ಯರ್ಥಮ್ ಅಂಕುರಾರೋಪಣಂ
ಕರಿಷ್ಯೇ ' ಎಂಬುದಾಗಿ ಸಂಕಲ್ಪ ಮಾಡಬೇಕು.
 

ನಂತರ ಮಂಟಪದಲ್ಲಿ ಶರಾವಗಳಲ್ಲಿ ಚತುರ್ಮೂತಿ್ರರ್ತಿಗಳನ್ನು ಆವಾಹಿಸುವುದು. ಇವುಗಳಲ್ಲಿ
ಪಾಲಿಕೆಯಲ್ಲಿ ವಾಸುದೇವಾದಿ ಅನಿರುದ್ಧಪರ್ಯಂತವೂ, ಮಧ್ಯದಲ್ಲಿ ವಾಸುದೇವ ಪ್ರದ್ಯುಮ್ನ

ಸಂಕರ್ಷಣ ಅನಿರುದ್ಧರನ್ನು ಕಡೆಯ ಶರಾವದಲ್ಲಿ ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ
ವಾಸುದೇವರನ್ನೂ ಆವಾಹಿಸಬೇಕು. ಅಥವಾ ಐದು ಶರಾವಗಳಿದ್ದಲ್ಲಿ ಮಧ್ಯ ಶರಾವದಲ್ಲಿ
ಬ್ರಹ್ಮನನ್ನು 'ಬ್ರಹ್ಮಜಜ್ಞಾನಮ್' ಎಂದೂ, ಮೇಲಿನ ಶರಾವದಲ್ಲಿ ವಿಷ್ಣುವನ್ನು ಇದಂ ವಿಷ್ಣುಣುಃ '
ಎಂದೂ, ಬ್ರಹ್ಮನ ಎಡದಲ್ಲಿ ರುದ್ರದೇವನನ್ನು 'ತ್ರ್ಯಂಬಕಂ' ಎಂದೂ ಆವಾಹಿಸಬೇಕು.
 

ನಾರಾಯಣಮಹೇಶಾನಬ್ರಹ್ಮರೂಪಾಣಿ ತಾನ್ಯಪಿ ।
 

ನಂತರ ಈ ಮೂರುಪಾತ್ರೆಯ ಸುತ್ತಲೂ ಇಂದ್ರಾದಿದೇವತೆ- ಗಳಿಗಾಗಿ ನಾಲ್ಕು ಶರಾವಗಳನ್ನು
ಸ್ಥಾಪಿಸಬೇಕು. ಇವುಗಳಲ್ಲಿ ಇಂದ್ರಾದಿದೇವತೆಗಳನ್ನು ಸ್ಥಾಪಿಸಿ, ಅನಿರುದ್ಧ, ಪುರುಷೋತ್ತಮ,

ಅಧೋಕ್ಷಜ, ನಾರಸಿಂಹರೂಪಗಳನ್ನು ಆವಾಹಿಸಬೇಕು. ಈ ಅಭಿಪ್ರಾಯದಿಂದಲೇ 'ವಿಷ್ಣುಂ
ಚತುರ್ಮೂತಿ್ರಂರ್ತಿಂ' ಎಂದು ಆಚಾರ್ಯರು ಹೇಳಿದ್ದಾರೆ. ಇವೆಲ್ಲವೂ ಶಾಸ್ತ್ರೀಯವಾದ್ದರಿಂದ

ಗ್ರಾಹ್ಯಗಳೇ ಆಗಿವೆ.