This page has not been fully proofread.

ತೃತೀಯೋsಧ್ಯಾಯಃ
 
ತಯಾರಿಸಬೇಕು. ನಾಲ್ಕು ಕೋಣೆಗಳಿರುವ ಮೂರು ಮಂಡಲಗಳನ್ನು ಆ
ಮಂಟಪದ ಮಧ್ಯದಲ್ಲಿ ರಚಿಸಬೇಕು. ಈ ಮಂಡಲ ಪೂರ್ವದಿಂದ ಪಶ್ಚಿಮಕ್ಕೆ
ಆಯತಾಕಾರವಾಗಿರಬೇಕು. ಈ ಮಂಡಲದ ವಿಸ್ತಾರ ಒಂದು ಮೊಳ.
 
ಈ ಹನ್ನೆರಡು ಮನೆಗಳಲ್ಲಿ ಪಾಲಿಕೆಗಳು, ಪಂಚಮುಖಿಗಳು, ಶರಾವಗಳೆಂಬ
ಹನ್ನೆರಡು ಪಾತ್ರೆಗಳನ್ನಿಡಬೇಕು. ಇವುಗಳಲ್ಲಿ ಪಾಲಿಕೆಗಳು ಹನ್ನೆರಡು
ಅಂಗುಲವಿರಬೇಕು. ಪಂಚಮುಖಿಗಳು ಹದಿನೆಂಟು ಅಂಗುಲ ಎತ್ತರವಿರಬೇಕು.
ಶರಾವಗಳು ಹನ್ನೆರಡು ಅಂಗುಲ ಎತ್ತರ. ನಾಲ್ಕು ನಾಲ್ಕು ಪಾತ್ರೆಗಳನ್ನು ಪೂರ್ವಾದಿ
ಕ್ರಮದಲ್ಲಿ ಪೂರ್ವದಿಕ್ಕು - ಮಧ್ಯ - ಪಶ್ಚಿಮದಿಕ್ಕುಗಳ ಮಂಡಲದಲ್ಲಿ ಸ್ಥಾಪಿಸಬೇಕು.
 
1. ಪಾಲಿಕೆ - ಕೆಳಗೆ ಉಮ್ಮತ್ತಿ ಹೂವಿನಂತಿರುವ, ಮೇಲೆ ಕಮಲದಂತೆ ಅಗಲವಾಗಿರುವ, ಕಂಠದ
ವಿಸ್ತಾರ ಸುತ್ತಲೂ ಏಳಂಗುಲವಿರುವ ಮಡಿಕೆಯಂತಹ ವಸ್ತುವನ್ನೇ (ಪಾತ್ರೆಯನ್ನೇ) ಪಾಲಿಕೆ
ಎನ್ನುವರು.
 
105
 
ಭವೇತ್ ।
 
ಮಧ್ಯಖಿಲಾದುಪರ್ಯಂಭೋಜವದ್
ಅಧಮ್ಮೋನಕುಸುಮಸಮಂ ಚೇತ್ ಪಾಲಿಕಾಂ ವಿದುಃ ॥
 
ಪಂಚಮುಖೀ ನಾಲ್ಕಂಗುಲವಿಸ್ತಾರವುಳ್ಳ ನಾಲ್ಕು ಮುಖಗಳುಳ್ಳ, ಮೇಲೆ ಒಂದು
ಮುಖವುಳ್ಳ ಘಟಾಕೃತಿಯೇ ಪಂಚಮುಖೀ,
 
ಚತುರಂಗುಲವಿಸ್ತಾರಂ ಕಲ್ಪಯೇಚ್ಚ ಚತುರ್ಮುಖಮ್ ।
ಘಟಕಾಲಕ್ಷಣಂ ತೈವಂ ಪಂಚವಾಘಟಾಕೃತೀಃ ॥
ಪಾಲಿಕೆಗಳು ಒಡೆಯಬಾರದು. ಹೀಗಾದಲ್ಲಿ ಅನಿಷ್ಟವು.
 
ಅಯುಗ್ಯಾಃ ಪಾಲಿಕಾ ಸ್ಯುಃ ಪಾಲಿಕಾದ್ಯಾಃ ತೇಷಾಂ ಭೇದಂ ಕದಾಚನ ।
ನ ಕುರ್ಯಾದ್ ಯದಿ ಕುರ್ವಿತ ದೋಷಾಯ ಮಹತೋ ಭವೇತ್ ॥
 
ಪಾಲಿಕೆ-ಪಂಚಮುಖೀ-ಶರಾವ ಈ ಮೂರೂ ಕ್ರಮವಾಗಿ ಹನ್ನೆರಡು ಹದಿನಾರು
ಇಪ್ಪತ್ತನಾಲ್ಕು ಅಂಗುಲ ಎತ್ತರವಿರಬೇಕು. ಈ ಮೂರರಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರರನ್ನು
ಆವಾಹಿಸಿ ಪೂಜಿಸಬೇಕು.
 
ದ್ವಿಷಡ್ ದ್ವಿರಷ್ಟಚತುರ್ವಿಂಶದುಚ್ಛತಾನಿ ಯಥಾಕ್ರಮಮ್ ।
ನಾರಾಯಣಮಹೇಶಾನಬ್ರಹ್ಮರೂಪಾಣಿ ತಾಪಿ ।
 
ಕೆಲವು ತಂತ್ರಗಳಲ್ಲಿ ಪಾಲಿಕೆ ಹದಿನಾರು, ಪಂಚಮುಖೀ ೧೨, ಶರಾವ ೮ಅಂಗುಲವಿರಬೇಕೆಂದು
 
ಹೇಳಿದೆ.
 
ಏವಮುಚ್ಚಾಯ ಉನ್ನೇಯಃ ಷೋಡಶ-ದ್ವಾದಶಾಷ್ಟ್ರಭಿಃ ।