This page has been fully proofread once and needs a second look.

ತೃತೀಯೋsಧ್ಯಾಯಃ
 
101
 
ಕೃತ್ವಾಽಷ್ಟಕಾಷ್ಟಕೋಷ್ಠಾನಿ ಮಧ್ಯೆಯೇ ಬ್ರಹ್ಮಾ ಚತುಷ್ಟಯೇ ॥721
೭೨ ॥
 
ಪೂಜೆಜ್ಯೋ ದ್ವಯೇ ದ್ವಯೇ ಶಕ್ರೋ ಯಮೋ ವರುಣ ಏವ ಚ ।

ಸೋಮಪ್ಪಶ್ಚ ಪೂಜ್ಯಾಃ ಕೋಣೇಷು ವಾವಹ್ನ್ಯಾದ್ಯಾಃ ಕೋಣದೇವತಾಃ ॥73 ೭೩
 

 
ಅರ್ಥ - ರಂಗೋಲೆಯಿಂದ ಎಂಟೆಂಟರಂತೆ 64ಚೌಕಾಕಾರದ ಕೋಣೆಗಳನ್ನು
ಮಾಡಿ ಮಧ್ಯದ ನಾಲ್ಕು ಕೋಣೆಗಳಲ್ಲಿ ಬ್ರಹ್ಮ- ದೇವನನ್ನು, ಎರಡನೇ ಆವರಣದ
ಪೂರ್ವಾದಿ ಎರಡೆರಡು ಕೋಣೆಗಳಲ್ಲಿ ಕ್ರಮವಾಗಿ ಇಂದ್ರ-ಯಮ-ವರುಣ-
ಸೋಮರನ್ನೂ ಆವಾಹಿಸಬೇಕು. ಹಾಗೆಯೇ ವಿದಿಕ್ಕುಗಳ ದೇವತೆಗಳಾದ ಅಗ್ನಿ-

ನಿರ್ಋತಿ-ವಾಯು-ಈಶಾನರನ್ನು ಪೂಜಿಸಬೇಕು.
 
[^1]
 
ಅಧೋಮುಖಂ ಪ್ರಾಕ್ ಶಿರಸಂ ವಿನ್ಯಸೇದ್ ವಾಸ್ತುಪೂರುಷಮ್ ॥

ತಮರ್ಚಯೇತ್ ಪ್ರಯತ್ನನ ಕರ್ಮದೈವಂ ಯಥಾ ಭವೇತ್ ।

ಅನರ್ಚಿತೇ ವಾಸ್ತುದೇವೇ ಕೃತಂ ಕರ್ಮಾಸುರಂ ಭವೇತ್ ॥
 
H
 
-

ವಾಸ್ತುಪುರುಷ - ದೇವಾಲಯಕ್ಕೆ ಸ್ಥಳಶುದ್ದಿಯಾದಮೇಲೆ ವಾಸ್ತು ವಿನ್ಯಾಸ, ವಾಸ್ತುಪೂಜೆ,
ವಾಸ್ತುಹೋಮ, ವಾಸ್ತುಬಲಿ, ವಾಸ್ತುಶಾಂತಿಯಾಗಬೇಕು.
 

ವಾಸ್ತುಪುರುಷನನ್ನು ೮x೮:೬೪ ಕೋಣೆಗಳಲ್ಲಾಗಲೀ, ೯x೯=೮೧ ಕೋಣೆಗಳಿರುವ ವಾಸ್ತು
ಮಂಡಲದಲ್ಲಿ ಚಿತ್ರಿಸಬೇಕು.
 

೮೧ ಮನೆಗಳಿರುವ ಮಂಡಲವನ್ನು 'ಪರಮಶಾಯಿಕಾ' ಎನ್ನ- ಲಾಗಿದ್ದು ಇದನ್ನು ನಿರ್ಮಾಣದಲ್ಲಿ
ಉಪಯೋಗಿಸಲಾಗುವುದು. ೬ಕೋಣೆಗಳ ಮಂಡಲವಾದರೂ 'ಮಂಡೂಕ' ಎನಿಸಿದ್ದು,

ದೇವಾಲಯನಿರ್ಮಾಣದಲ್ಲಿ ಬರೆಯಲಾಗುವುದು.
 

ವಾಸ್ತುಪುರುಷನು ಮುಖ ಕೆಳಗೆ ಹಾಕಿಕೊಂಡಿರುವನು. ಈಶಾನ್ಯ ದಿಕ್ಕಿನಲ್ಲಿ ತಲೆಯಿರುತ್ತದೆ.
ನೈರುತ್ಯದಲ್ಲಿ ಎರಡೂ ಕಾಲುಗಳು ಇರುತ್ತವೆ. ಕೈಗಳು ಆಗೇಗ್ನೇಯ-ವಾಯವ್ಯಗಳಲ್ಲಿದ್ದು ಇಡೀ
ಸ್ಥಳ- ವನ್ನು ವ್ಯಾಪಿಸಿರುತ್ತಾನೆ.
 

ಅಧೋಮುಖೋದ್ಯಾಪಿ ವಾಸ್ತುಃ ಈಶಾನದಿಕ್ ಶಿರಾಃ ।
 

ಪ್ರಸಾರ್ಯ ಪಾದೌ ನೈರ್ಋತ್ಯಾಂ ಅಧಿಶೇತೇ ಸ್ಮಕಾಶ್ಯಪೀಮ್ !!
 

-
ಭೂಮಿಗೆ ಬೀಳಿಸಿ ಅವನು ಪುನಃ ಏಳದಂತೆ ಅದುಮಿ ಹಿಡಿದು ಅವನ ಮೇಲೆ ಇರುವ
ದೇವತೆಗಳಿಗೂ ಪೂಜೆಯಾಗಬೇಕು.
 

[^
1]. ಅಷ್ಟಕಾಷ್ಟಕ ಎಂದರೆ 8x8 = 64 ಕೋಣೆಗಳೆಂದರ್ಥ. ಇವುಗಳನ್ನು ನಾಲ್ಕು ಆವರಣಗಳಾಗಿ
ವಿಭಾಗ ಮಾಡಬೇಕು. ಒಂದನೇ ಆವರಣದಲ್ಲಿ ನಾಲ್ಕು ಕೋಣೆಗಳು, ಇಲ್ಲಿ ಚತುರ್ಮುಖ-

ನನ್ನು ಆವಾಹಿಸುವುದು. ಎರಡನೇ ಆವರಣದಲ್ಲಿ ಹನ್ನೆರಡು ಮನೆಗಳು. ಮೂರನೆ
ಆವರಣದಲ್ಲಿ ಇಪ್ಪತ್ತು ಮನೆಗಳು, ನಾಲ್ಕರಲ್ಲಿ 28 ಕೋಣೆಗಳು. ಇವುಗಳಲ್ಲಿ 49