This page has not been fully proofread.

ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 
ತತಸ್ತಾವತ್ ತೃತೀಯಾಯಾಃ ಸಾರ್ಧಮೇವ ಹ್ಯುದಾಹೃತಮ್ ॥69॥
 
ಅರ್ಥ - ಗರ್ಭಗೃಹಕ್ಕೆ ಅಂಟಿಕೊಳ್ಳದೆ ಬೇರೆಯಾಗಿ ಸಭಾಮಂಟಪವನ್ನು
ಮಾಡುವುದಾದರೆ ಗರ್ಭಗೃಹದಿಂದ ಎರಡು ಮೊಳ ದೂರದಲ್ಲಿ ರಚಿತವಾಗಬೇಕು.
ಎರಡನೆ ಮಂಟಪವಾದರೋ ಗರ್ಭಗೃಹದಿಂದ ನಾಲ್ಕು ಮೊಳದೂರದಲ್ಲಿ,
ಮೂರನೆಯ ಮಂಟಪ (ಮೊಳ ದೂರದಲ್ಲಿಯೂ ರಚಿಸಲ್ಪಡಬೇಕು. ಅಂತು
ಪ್ರದಕ್ಷಿಣೆಗೆ ಅನುವಾಗಿರುವಂತೆ ಮಂಟಪ ರಚಿಸಬೇಕು ಎಂದರ್ಥ.
 
100
 
ಕಿಷ್ಟುತ್ರಯಂ ಚ ಶಕ್ರಾದೇಃ ಸ್ಥಾನಂ ತದ್ಭವೃತ್ತತಃ ಸ್ಮೃತಮ್ ।
ತತಸ್ತು ಮಂಟಪಂ ಕುರ್ಯಾತ್ ಪ್ರತಿಷ್ಠಾಯಾಃ ಸುಲಕ್ಷಣಮ್ II70II
 
-
 
ಅರ್ಥ – ದೇವಾಲಯದ ಸುತ್ತಲೂ ಆರುಮೊಳ ಪರಿಮಾಣದಷ್ಟು ಇಂದ್ರಾದಿ
ದಿಕ್ಷಾಲಕರ ಮಂಟಪವನ್ನು ನಿರ್ಮಿಸಬೇಕು. ದೇವಾಲಯದ ನಿರ್ಮಾಣವಾದ
ಮೇಲೆ ನಿಗದಿತ ಪ್ರತಿಮೆಯನ್ನು ಸ್ಥಾಪಿಸಲು ಲಕ್ಷಣವಾದ ಮಂಟಪವನ್ನು
 
ರಚಿಸಬೇಕು.
 
ವಾಸ್ತುಪುರುಷಪೂಜೆ
 
ಪೂಜಯೇದ್ ವಾಸ್ತುಪುರುಷಸ್ಕೋಪರಿಸ್ಸಾಂಸ್ತು ಸರ್ವದಾ ।
ದೇವಾನ್ ಬ್ರಹ್ಮಾದಿಕಾನ್ ವಾಸ್ತು: ವರಾಹಸ್ಯ ಹರೇಃ ಸುತಃ ॥71॥
ಪಾತಿತೋ ದೈವತೈ: ಭೂಮೌ ಚತುರಸ್ರಾಕೃತಿಃ ಸ್ಥಿತಃ ।
 
ಅರ್ಥ
 
ವಾಸ್ತುಪುರುಷನು ವರಾಹರೂಪೀ ಹರಿಯ ಬೆವರಿನಿಂದ ಜನಿಸಿ
ದವನು. ಇವನನ್ನು ಹಾಗೂ ಇವನ ಮೇಲಿರುವ ಬ್ರಹ್ಮಾದಿದೇವತೆಗಳನ್ನು ಪೂಜಿಸ
ದಿದ್ದರೆ ಮಾಡಿದ ಕರ್ಮ ವಿಫಲವಾಗುತ್ತದೆ. ಸುಖಾದಿಗಳಿಗೆ ಕುಂದುಂಟಾಗುತ್ತದೆ.
ಆದ್ದರಿಂದ ಇವನನ್ನು ಪೂಜಿಸಲೇ ಬೇಕು. ಇದು ವರ. ಇವನು ದೇವತೆಗಳನ್ನೇ
ನಿಗ್ರಹಿಸಲು ಸ್ವರ್ಗಕ್ಕೆ ಮುತ್ತಿಗೆ ಹಾಕಿದಾಗ ದೇವತೆಗಳೆಲ್ಲರೂ ಅಲ್ಲಿಂದ ತಬ್ಬಿ
ಭೂಮಿಯಲ್ಲಿ ಒತ್ತಿದಾಗ ಚತುರಸ್ರಾಕಾರವಾದನು.
 
1. ವಾಸ್ತುರ್ನಾಮಾ ಚತುರ್ವ ಭಗವತ್ ಸ್ವದಸಂಭವ 1
ಅಭ್ಯದ್ರವತ್ ಸುರಾನ್ ಹಂತುಂ ಆತ್ಮನೋ ಬಲದರ್ಪಿತಃ ॥
ಸ ದೇವೈ: ತ್ರಾಸಿತಃ ತೂರ್ಣಮಪದ ಭುವಿ ವಿಹ್ವಲಃ ।
 
C