This page has been fully proofread once and needs a second look.

92
 
ವೃಕ್ಷವನ್ನಾಗಲೀ ಕತ್ತರಿಸಬೇಕು.
 
ತಂತ್ರಸಾರಸಂಗ್ರಹ ಸಟೀಕಾ ಅಧ್ಯಾಯ 3
 

 
ಶಿಲೆಯ ಪ್ರಭೇದಗಳು
 

 
ಪ್ರತಿಮಾಂ ಪಿಂಡಿಕಾಂ ಪೀಠಂ ಶಿಲಾಭಿಸ್ತು ತ್ರಿಜಾತಿಭಿಃ ॥49 ೪೯
 
ಸ್ವರಸ್ಥ

 
ಸ್ವರಸ್ಥೂ
ಲತ್ವಭೇದೇನ ಪುಂಸ್ಕೃಾತ್ರ್ಯಾದ್ಯಾ ಜಾತಿತಃ ಶಿಲಾ ।

ಪುಂಶಿಲಾಂ ಪ್ರತಿಮಾರ್ಥಂ ತು ಸ್ತ್ರೀಶಿಲಾಂ ಪೀಠಕೃಕ್ಲೃಪ್ತಯೇ ॥50 ೫೦
 

 
ಅರ್ಥ - ಪುಲ್ಲಿಂಗಶಿಲೆ, ಸ್ತ್ರೀಲಿಂಗಶಿಲೆ, ನಪುಂಸಕಶಿಲೆಯೆಂದು ಶಿಲೆಯಲ್ಲಿ
ಮೂರು ಜಾತಿಗಳಿದ್ದು, ಇವುಗಳಿಂದ ಕ್ರಮವಾಗಿ ಪ್ರತಿಮೆ, ಪೀಠ, ಅಡಿಗಲ್ಲುಗಳನ್ನು
ತಯಾರಿಸಬೇಕು. ಯಾವಶಿಲೆ- ಯನ್ನು ಬಡಿದಾಗ ಕಂಚಿನಂತೆ ಶಬ್ದಮಾಡುವುದೋ
ಅದು ಪುಂಶಿಲೆ, ಶಬ್ದವು ಒಡೆದ ಗಂಟೆಯ ಶಬ್ದದಂತೆ ಮಂದವಾಗಿದ್ದರೆ ಅದು
ಸ್ತ್ರೀಶಿಲೆಯು. ಈ ಪ್ರತಿಮೆ ಸ್ತ್ರೀದೇವತೆಯ ಪ್ರತಿಮೆಗೆ ಯೋಗ್ಯವಾಗಿರುತ್ತದೆ. ಯಾವ
ಧ್ವನಿಯನ್ನೂ ಮಾಡದ ಶಿಲೆ ನಪುಂಸಕಶಿಲೆ, ಪುಂಶಿಲೆಯನ್ನು ಪ್ರತಿಮೆಗಾಗಿಯೂ,
ಸ್ತ್ರೀಶಿಲೆ ಯನ್ನು ಪಾಣಿಪೀಠಕ್ಕಾಗಿಯೂ, ಪೀಠದ ಕೆಳಗೆ ನವನಿಧಿಗಾಗಿ ಇಡಬೇಕಾದ
ಶಿಲೆಗಾಗಿ ನಪುಂಸಕಶಿಲೆಯನ್ನು ಉಪಯೋಗಿಸ- ಬೇಕು. ಪ್ರತಿಮೆಗೆ ಆಧಾರಭೂತ-
ವಾದ ಒರಳಿನಂತಿರುವ ಶಿಲೆಯೇ (ಭಾಗವೇ) ಪಿಂಡಿಕೆಯು,
 
.
[^
1]. ವಿಶೇಷಾಂಶ - ಪಿಂಡಿಕಾ ಎಂದರೆ ಪ್ರತಿಮೆಯ ಶಿಲೆಯು ಸರಿಯಾಗಿ ಕುಳಿತುಕೊಳ್ಳಲು ಒರಳಿನಂತೆ
ಮಾಡಲ್ಪಟ್ಟಿರುವ ಶಿಲೆ. ಇದು ಸ್ತ್ರೀಶಿಲೆಯಾಗಿದ್ದರೆ ಒಳಿತು. ಪ್ರತಿಮೆಯು ಪುಂಶಿಲೆ- ಯಾಗಿದ್ದು
ಪರಮಪುರುಷನನ್ನು ಸಂಕೇತಿಸಿದರೆ, ಪಿಂಡಿಕೆಯು ಪರಮಪುರುಷನ ಪತ್ನಿ ಮಹಾಶಕ್ತಿ
ಶ್ರೀದೇವಿಯನ್ನು ಸಂಕೇತಿಸು- ತ್ತದೆ. ಇವರಿಬ್ಬರನ್ನೂ ಒಂದುಗೂಡಿಸುವುದು ಪ್ರತಿಷ್ಠೆ.
 

ಪಿಂಡಿಕಾಯಾಂ ಮಹಾದೇವೀ ಪ್ರತೀಕೇ ಸ್ಯಾದ್ ಪರೋ ವರಃ ।
 

ತಯೋರ್ಯಃ ಕ್ರಿಯತೇ ಯೋಗಃ ಸಾ ಪ್ರತಿಷ್ಠೆಠೇತಿ ಗದ್ಯತೇ ॥ -ಅಜಿತಾಗಮ ೨/೩೫/೯೬
 

ಪ್ರತಿಮೆಯನ್ನು ಪುಂಜಾತಿಶಿಲೆಯಿಂದಲೂ ಪ್ರತಿಮೆಯು ನಿಲ್ಲಲು ಬೇಕಾದ ಪೀಠವನ್ನು ಸ್ತ್ರೀಜಾತಿ
ಶಿಲೆಯಿಂದಲೂ, ಪಿಂಡಿಕಾವನ್ನು ನಪುಂಸಕಶಿಲೆಯಿಂದಲೂ ಮಾಡಬೇಕು.
 

ನಪುಂಸಕಶಿಲಾ ಪಿಂಡಿಕಾಕೃಕ್ಲೃಪ್ತಯೇ ಇತಿ ಶೇಷಃ (ವ.ಟೀ.)
 

ಪಿಂಡಿಕೆಯು ಕ್ರಿಯಾಶಕ್ತಿ ಎನಿಸಿದರೆ, ಪ್ರತಿಮೆಯು ಜ್ಞಾನಶಕ್ತಿ ಎನಿಸಿದೆ. ಜ್ಞಾನಶಕ್ತಿಯನ್ನು
ಕ್ರಿಯಾಶಕ್ತಿಯೊಂದಿಗೆ ಹೊಂದಿಸು- ವುದೇ ಪ್ರತಿಷ್ಠೆ- 'ಪಿಂಡಿಕಾಯೋಗ'ವನ್ನೇ ಪ್ರತಿಷ್ಠೆ ಎನ್ನಲಾಗಿದೆ.

ಕ್ರಿಯತೇ ಪಿಂಡಿಕಾಯೋಗ: ತಾಂ ಪ್ರತಿಷ್ಠಾಂ ಪ್ರಚಕ್ಷತೇ ॥