This page has not been fully proofread.

೧೦
 
ತಂತ್ರಸಾರಸಂಗ್ರಹ ಸಟೀಕಾ
 
ಆಗಿರುವ ಶ್ರೀಶ್ರೀರಾಘವೇಂದ್ರಮಠದ ಪ್ರಸ್ತುತ ಮಠಾಧೀಶರಾಗಿರುವ ಶ್ರೀ೧೦೦೮ ಶ್ರೀ
ಸುಶಮೀಂದ್ರತೀರ್ಥಶ್ರೀಪಾದಂಗಳವರು ತಮ್ಮ ಅನುಗ್ರಹವಚನವನ್ನು ನೀಡಿ
ಆಶೀರ್ವದಿಸಿರುವರು. ಅವರ ಪಾದಕಮಲಗಳಲ್ಲಿ ಭಕ್ತಿಪೂರ್ವಕ ಪ್ರಣಾಮಾಂಜಲಿ-
ಯನ್ನು ಅರ್ಪಿಸುತ್ತೇನೆ.
 
ವಸುಧೇಂದ್ರರು ಹಾಗೂ ವರದೇಂದ್ರರು ರಾಘವೇಂದ್ರ ಮಠದ ಶಿಷ್ಯ
ಸಂಪತ್ತಿನಲ್ಲಿದ್ದ ಮಹಾಮಹಿಮೋಪೇತರು. ವರದೇಂದ್ರತೀರ್ಥರು ಅನೇಕ ವಾದಿ
ಪ್ರತಿವಾದಿಗಳನ್ನು ವಾದದಲ್ಲಿ ಸೋಲಿಸಿ ದೈತ ದುಂದುಭಿಯನ್ನು ಮೊಳಗಿಸಿದವರು.
ಚತುಶಾಸ್ತ್ರ ಪಾಂಡಿತ್ಯ ಪಡೆದಿದ್ದ ವರದೇಂದ್ರರು ಅನೇಕ ಗ್ರಂಥಗಳನ್ನು ರಚಿಸಿರುವರು.
ಅವುಗಳಲ್ಲಿ ತಂತ್ರಸಾರ ಸಂಗ್ರಹದ ಟೀಕೆಯೂ ಒಂದಾಗಿದೆ. ಅಪೂರ್ವ ವಿಷಯಗಳಿಂದ
ತುಂಬಿರುವ ಈ ಗ್ರಂಥ ತಂತ್ರಸಾರ ಅವಶ್ಯ ಓದಲೇಬೇಕಾದ ಕೃತಿಯಾಗಿದೆ. ಸಂಗ್ರಹ
ವರದೇಂದ್ರ ಟೀಕೆ ಹಾಗೂ ಅವಶ್ಯವಾದ ವಿವರಣೆಗಳೊಂದಿಗೆ ಸಂಸ್ಕೃತದಲ್ಲಿರುವ ಈ
ಕೃತಿಯನ್ನು ಪ್ರಪ್ರಥಮ ಬಾರಿಗೆ ಮುದ್ರಣವನ್ನು ಶ್ರೀ ಮಠದಿಂದ ಮುದ್ರಿಸಲಾಯಿತು.
ಜನಸಾಮಾನ್ಯರಿಗೂ ತಲುಪಿ ವರದೇಂದ್ರರ ಅನುಗ್ರಹವಾಗಲಿ ಎಂಬ ಸದುದ್ದೇಶದಿಂದ
ಶ್ರೀಮಠವು ಇದನ್ನು ನನಗೆ ಅನುವಾದ ಮಾಡಲು ಅನುಗ್ರಹಿಸಿತು. ಇದೊಂದು
ಶ್ರೀರಾಯರು ಹಾಗು ವರದೇಂದ್ರರ ಅನುಗ್ರಹವೆಂದೇ ನಾನು ಭಾವಿಸುವೆ.
 
ನಾನು ಅನುವಾದ ಮಾಡಿರುವ ಸಟೀಕಾ ತಂತ್ರಸಾರ ಸಂಗ್ರಹ ಗ್ರಂಥವನ್ನು
ಅಧುನಾ ಪೀಠದಲ್ಲಿ ವಿರಾಜಮಾನರಾಗಿರುವ ಶ್ರೀ ಶ್ರೀ 1008 ಶ್ರೀ ಸುಯತೀಂದ್ರ ತೀರ್ಥ
ಶ್ರೀಪಾದರು ಅವಲೋಕಿಸಿ, ಮೆಚ್ಚಿಗೆ ಸೂಚಿಸಿರುವರು ಇವರಿಗೆ ನನ್ನ ಸಾಷ್ಟಾಂಗ
ಭಕ್ತಿಪೂರ್ವಕ ನಮನಗಳು.
 
ಈ ಅನುವಾದ ಕಾರ್ಯದಲ್ಲಿ ನನ್ನನ್ನು ತೊಡಗಿಸಿ ವರದೇಂದ್ರರ ಹಾಗೂ
ಶ್ರೀರಾಘವೇಂದ್ರರ ಕರುಣಾಕವಚವನ್ನು ನನಗೆ ತೊಡಿಸಿದ ರಾಘವೇಂದ್ರ ಮಠದ
ಹೆಚ್ಚುವರಿ ಅಧಿಕಾರಿಗಳಾದ ಸುಯಮೀಂದ್ರಾಚಾರ್ಯರಿಗೆ ನನ್ನ ಕೃತಜ್ಞತೆಯನ್ನು
ಸಲ್ಲಿಸುತ್ತೇನೆ.
 
ರಾಘವೇಂದ್ರಮಠದ ವಿದ್ಯಾಪೀಠದ ಪ್ರಾಂಶುಪಾಲರೂ ವಿದ್ವಾಂಸರೂ ಆದ ಶ್ರೀ
ವಾದಿರಾಜಾಚಾರ್ಯರು ಮಠದ ಕಡೆಯಿಂದ ಬೇಕಾದ ಸಾಮಗ್ರಿಯನ್ನು ಒದಗಿಸಿರುವರು
ಇವರಿಗೆ ನನ್ನ ಅನಂತಾನಂತ ಪ್ರಣಾಮಗಳು.
 
ಇತಿ ಸಜ್ಜನ ವಿಧೇಯ
 
ಡಾ॥ ಚರ್ತುವೇದಿ ಎಸ್. ವೇದವ್ಯಾಸಾಚಾರ್