2023-05-10 09:58:33 by jayusudindra
This page has been fully proofread once and needs a second look.
ತೃತೀಯೋsಧ್ಯಾಯಃ
95
ಕೇಶಾಂಗಾರಾಸ್ಥಿವಲ್ಮೀಕಲೋಷ್ಟಾಶ್ಚಾಮಾದಿವಿವರ್ಜಿತೇ ।
ಹರಿಂ ತತ್ರಾಪಿ ಸಂಪೂಜ್ಯ ಬಲಿಂ ದತ್ವಾ ಚ ಪೂರ್ವವತ್ ॥56।1
೫೬ ॥
ಮೃದ್ದಾರುಶೈಲೈ:ಲೈಃ ಲೋಹೈರ್ವಾ ಕುರ್ಯಾದ್ದೇವಾಲಯಂ ದೃಢಮ್ ।
ಅರ್ಥ- ದೇವಾಲಯನಿರ್ಮಾಣಸ್ಥಲದ ಭೂಮಿಯನ್ನು ಒಂದೂವರೆ ಆಳಿ-
ನಷ್ಟು ಅಗೆದು ಕೂದಲು, ಇದ್ದಿಲು, ಅಸ್ಥಿಗಳು, ಹುತ್ತ ಅಥವಾ ಯಾವುದೇ ರೀತಿಯ
ಕಲ್ಲು - ಮಣ್ಣಿನ ಹೆಂಟೆಗಳು ಇಲ್ಲದಿರುವ ಪ್ರದೇಶದಲ್ಲಿ ವಿಷ್ಣುವನ್ನು ಪೂಜಿಸಿ,
ನೈವೇದ್ಯ ಸಮರ್ಪಿಸಿ, ದಿಗ್ಗೇದೇವತೆಗಳಿಗೆ ಬಲಿದಾನಗಳನ್ನರ್ಪಿಸಿ, ಮಣ್ಣು-ಕಲ್ಲು-
ಗಳಿಂದಾಗಲೀ ಕೇವಲ ಮರದಿಂದಾಗಲೀ ಕಬ್ಬಿಣ ಮೊದಲಾದ ಲೋಹದಿಂದಾಗಲೀ
ದೃಢವಾಗಿರುವಂತೆ ದೇವಾಲಯವನ್ನು ನಿರ್ಮಿಸಬೇಕು'.
-
[^1]
[^1]. ಭೂಶೋಧನೆ - ಭೂಮಿಯನ್ನು ಒಂದು ಪುರುಷಪ್ರಮಾಣ- ದಷ್ಟು ಆಳತೋಡಿ, ಅದರಲ್ಲಿರುವ
ಕೂದಲು, ಎಲುಬು ಮೊದ-
ಲಾದ ಅಶುದ್ಧವಸ್ತುಗಳನ್ನು ತೆಗೆದು, ಅದರಲ್ಲಿ ಬೇರೆ ಕೆಮ್ಮಣ್ಣು,
ಮರಳುಗಳನ್ನು ತುಂಬಿ, ನೀರು ಬಿಟ್ಟು ಗಟ್ಟಿಗೊಳಿಸಬೇಕು. ದೇವಾಲಯದ ಕೆಳಗೆ ಕೂದಲು
ಮೊದಲಾದವು ಇನ್ನೂ ಸಿಗುತ್ತಿ- ದ್ದರೆ ಮೂರು ಪುರುಷ ಮಾನದಷ್ಟು ತೋಡಿ ಅವುಗಳನ್ನೆಲ್ಲ
ತೆಗೆದುಹಾಕಬೇಕು.
ದೇವಾಲಯ ನಿರ್ಮಿಸಬೇಕಾದ ಸ್ಥಳದಲ್ಲಿ ಭೂಶೋಧನೆಯ ಮೊದಲು ಹಾಗೂ ನಂತರವೂ
ವಿಶೇಷಪೂಜೆ, ನೈವೇದ್ಯ ಮಾಡ- ಬೇಕು. ನಂತರ ಶ್ವೇತಸರ್ಷಪವನ್ನು (ಬಿಳಿಯ ಸಾಸಿವೆಯನ್ನು) -
"ಯೇ ಭೂತಾಃ ವಿಚರಂತಿ ಪ್ರತುದಸ್ಯ ಪ್ರೇಷ್ಯಾಃ ।
ಸ್ವಸ್ವ
ಸ್ವಸ್ತೈಯನಂ ತಾರ್ಕ್ಷ್ಯಮರಿಷ್ಟನೇಮಿಂ'
"
ಇತ್ಯಾದಿ ಮಂತ್ರಗಳಿಂದ ಚೆಲ್ಲಿ, ಪ್ರದೇಶದ ಸುತ್ತಲೂ ಹಸಿದಾರ- ದಿಂದ ಸೂತ್ರವೇಷ್ಟನ
ಮಾಡಬೇಕು. ನಂತರ ವಾಸ್ತುಮಂಡಲ- ವನ್ನು ಬರೆದು ಅದರಲ್ಲಿ ವಾಸ್ತುಪುರುಷನನ್ನು ಪೂಜಿಸ
ಬೇಕು. ವಾಸ್ತುಪ್ರತಿಮೆಯನ್ನು ಪೂರ್ವಾಭಿಮುಖವಾಗಿಯೂ, ಕೈಕಾಲು- ಗಳು ಈಶಾನ್ಯಾದಿ ಮೂಲೆ
ದಿಕ್ಕುಗಳಲ್ಲಿರುವಂತೆಯೂ ಚಿಂತಿಸಿ ಅಲ್ಲಿ ಆವಾಹಿಸಿ, ಅದರ ಬಲಭಾಗದಲ್ಲಿ ವಾಸ್ತುದೇವತಾ
ಹೋಮ ವನ್ನು ತುಪ್ಪ ಹಾಗೂ ಬಿಲ್ವದ ಕಾಯಿಯಿಂದ ಮಾಡಬೇಕು. ಚತುಹೋಮವನ್ನು
ಮಾಡಬಹುದು.
ನಂತರ ಅಲ್ಲಿರುವ ಯಕ್ಷರಾಕ್ಷಸಾದಿಗಳಿಗೆ ಉತ್ತರಾಣಿ ಶಮ್ಯಾದಿ- ಗಳಿಂದ ಎಂಟಾಹುತಿಗೆ ಕಡಿಮೆ
ಇಲ್ಲದಂತೆ ಹೋಮಿಸಿ, ಮೂಲ- ಮಂತ್ರದಿಂದ ನೂರೆಂಟು, ಸಾವಿರದೆಂಟು ಬಾರಿ ನಾರಾಯಣನಿಗೆ
ಆಹುತಿಯನ್ನು ನೀಡಿ, ನಂತರ ಅಷ್ಟದಿಕ್ಷಾಪಾಲಕರಿಗೂ ಬಲಿದಾನ ಮಾಡಬೇಕು. ನಂತರ
ಪಂಚಗವ್ಯದಿಂದ ಪ್ರೋಕ್ಷಿಸಿ, ಭೂಶುದ್ಧಿ- ಯನ್ನು ಮಾಡಬೇಕು. ಇದರ ಅಂಗವಾಗಿ ಬ್ರಾಹ್ಮಣ-
ಸುವಾಸಿನಿ- ಯರಿಗೆ ಅನ್ನಸಂತರ್ಪಣೆಯನ್ನು ಮಾಡಬೇಕು.