This page has not been fully proofread.

ತೃತೀಯೋsಧ್ಯಾಯಃ
 
95
 
ಕೇಶಾಂಗಾರಾಸ್ಥಿವಕಷ್ಟಾಶ್ಚಾದಿವಿವರ್ಜಿತೇ ।
 
ಹರಿಂ ತತ್ರಾಪಿ ಸಂಪೂಜ್ಯ ಬಲಿಂ ದತ್ವಾ ಚ ಪೂರ್ವವತ್ ॥56।1
ಮೃದ್ದಾರುಶೈಲೈ: ಲೋಹೈರ್ವಾ ಕುರ್ಯಾದೇವಾಲಯಂ ದೃಢಮ್ ।
ದೇವಾಲಯನಿರ್ಮಾಣಸ್ಥಲದ ಭೂಮಿಯನ್ನು ಒಂದೂವರೆ ಆಳಿ-
ನಷ್ಟು ಅಗೆದು ಕೂದಲು, ಇದ್ದಿಲು, ಅಸ್ಥಿಗಳು, ಹುತ್ತ ಅಥವಾ ಯಾವುದೇ ರೀತಿಯ
ಕಲ್ಲು - ಮಣ್ಣಿನ ಹೆಂಟೆಗಳು ಇಲ್ಲದಿರುವ ಪ್ರದೇಶದಲ್ಲಿ ವಿಷ್ಣುವನ್ನು ಪೂಜಿಸಿ,
ನೈವೇದ್ಯ ಸಮರ್ಪಿಸಿ, ದಿಗ್ಗೇವತೆಗಳಿಗೆ ಬಲಿದಾನಗಳನ್ನರ್ಪಿಸಿ, ಮಣ್ಣು-ಕಲ್ಲು-
ಗಳಿಂದಾಗಲೀ ಕೇವಲ ಮರದಿಂದಾಗಲೀ ಕಬ್ಬಿಣ ಮೊದಲಾದ ಲೋಹದಿಂದಾಗಲೀ
ದೃಢವಾಗಿರುವಂತೆ ದೇವಾಲಯವನ್ನು ನಿರ್ಮಿಸಬೇಕು'.
 
-
 
1. ಭೂಶೋಧನೆ - ಭೂಮಿಯನ್ನು ಒಂದು ಪುರುಷಪ್ರಮಾಣದಷ್ಟು ಆಳತೋಡಿ, ಅದರಲ್ಲಿರುವ
ಕೂದಲು, ಎಲುಬು ಮೊದಲಾದ ಅಶುದ್ಧವಸ್ತುಗಳನ್ನು ತೆಗೆದು, ಅದರಲ್ಲಿ ಬೇರೆ ಕೆಮ್ಮಣ್ಣು,
ಮರಳುಗಳನ್ನು ತುಂಬಿ, ನೀರು ಬಿಟ್ಟು ಗಟ್ಟಿಗೊಳಿಸಬೇಕು. ದೇವಾಲಯದ ಕೆಳಗೆ ಕೂದಲು
ಮೊದಲಾದವು ಇನ್ನೂ ಸಿಗುತ್ತಿದ್ದರೆ ಮೂರು ಪುರುಷ ಮಾನದಷ್ಟು ತೋಡಿ ಅವುಗಳನ್ನೆಲ್ಲ
 
ತೆಗೆದುಹಾಕಬೇಕು.
 
ದೇವಾಲಯ ನಿರ್ಮಿಸಬೇಕಾದ ಸ್ಥಳದಲ್ಲಿ ಭೂಶೋಧನೆಯ ಮೊದಲು ಹಾಗೂ ನಂತರವೂ
ವಿಶೇಷಪೂಜೆ, ನೈವೇದ್ಯ ಮಾಡಬೇಕು. ನಂತರ ಶ್ವೇತಸರ್ಷವನ್ನು (ಬಿಳಿಯ ಸಾಸಿವೆಯನ್ನು) -
"ಯೇ ಭೂತಾಃ ವಿಚರಂತಿ ಪ್ರತುದಸ್ಯ ಪ್ರೇಷ್ಯಾಃ ।
 
ಸ್ವಸ್ವಯನಂ ತಾರ್ಕ್ಷ್ಯಮರಿಷ್ಟನೇಮಿಂ'
 
ಇತ್ಯಾದಿ ಮಂತ್ರಗಳಿಂದ ಚೆಲ್ಲಿ, ಪ್ರದೇಶದ ಸುತ್ತಲೂ ಹಸಿದಾರದಿಂದ ಸೂತ್ರವೇಷ್ಟನ
ಮಾಡಬೇಕು. ನಂತರ ವಾಸ್ತುಮಂಡಲವನ್ನು ಬರೆದು ಅದರಲ್ಲಿ ವಾಸ್ತುಪುರುಷನನ್ನು ಪೂಜಿಸ
ಬೇಕು. ವಾಸ್ತುಪ್ರತಿಮೆಯನ್ನು ಪೂರ್ವಾಭಿಮುಖವಾಗಿಯೂ, ಕೈಕಾಲುಗಳು ಈಶಾನ್ಯಾದಿ ಮೂಲೆ
ದಿಕ್ಕುಗಳಲ್ಲಿರುವಂತೆಯೂ ಚಿಂತಿಸಿ ಅಲ್ಲಿ ಆವಾಹಿಸಿ, ಅದರ ಬಲಭಾಗದಲ್ಲಿ ವಾಸ್ತುದೇವತಾ
ಹೋಮವನ್ನು ತುಪ್ಪ ಹಾಗೂ ಬಿಲ್ವದ ಕಾಯಿಯಿಂದ ಮಾಡಬೇಕು. ಚತುಹೋಮವನ್ನು
 
ಮಾಡಬಹುದು.
 
ನಂತರ ಅಲ್ಲಿರುವ ಯಕ್ಷರಾಕ್ಷಸಾದಿಗಳಿಗೆ ಉತ್ತರಾಣಿ ಶಮ್ಯಾದಿಗಳಿಂದ ಎಂಟಾಹುತಿಗೆ ಕಡಿಮೆ
ಇಲ್ಲದಂತೆ ಹೋಮಿಸಿ, ಮೂಲಮಂತ್ರದಿಂದ ನೂರೆಂಟು, ಸಾವಿರದೆಂಟು ಬಾರಿ ನಾರಾಯಣನಿಗೆ
ಆಹುತಿಯನ್ನು ನೀಡಿ, ನಂತರ ಅಷ್ಟದಿಕ್ಷಾಲಕರಿಗೂ ಬಲಿದಾನ ಮಾಡಬೇಕು. ನಂತರ
ಪಂಚಗವ್ಯದಿಂದ ಪ್ರೋಕ್ಷಿಸಿ, ಭೂಶುದ್ಧಿಯನ್ನು ಮಾಡಬೇಕು. ಇದರ ಅಂಗವಾಗಿ ಬ್ರಾಹ್ಮಣ-
ಸುವಾಸಿನಿಯರಿಗೆ ಅನ್ನಸಂತರ್ಪಣೆಯನ್ನು ಮಾಡಬೇಕು.